ರಸ್ತೆಯಲ್ಲಿ ಆನೆಗಳ ದಾಂಧಲೆ: ಕಬ್ಬಿಗಾಗಿ ಲಾರಿ ತಡೆದ ಗಜಪಡೆ; ವಾಹನ ಸವಾರರು ಕಂಗಾಲು

ಚಾಮರಾಜನಗರ: ಚಾಮರಾಜನಗರ ವ್ಯಾಪ್ತಿಯಲ್ಲಿ ರಾತ್ರಿವೇಳೆ ಸಂಚರಿಸುವ ಕಬ್ಬು ತುಂಬಿದ ಲಾರಿಗಳನ್ನ ಚೆಕ್ ಪೋಸ್ಟ್ ಸಿಬ್ಬಂದಿ ತಪಾಸಣೆ ಮಾಡ್ತಾರೋ ಇಲ್ಲವೋ ಗೊತ್ತಿಲ್ಲ. ಆದ್ರೆ ಕಾಡಾನೆಗಳಂತೂ ಅಡ್ಡ ಹಾಕದೆ ಬಿಡುವುದಿಲ್ಲ ಎಂಬ ಸ್ಥಿತಿ ಇದೆ. ರಾತ್ರಿ ವೇಳೆ ಒಂಟಿ ಸಲಗದ ಹಾವಳಿಯಾದ್ರೆ, ಹಗಲು ಹೊತ್ತಲ್ಲಿ ಕುಟುಂಬ ಸಮೇತ ಗಜಪಡೆ ವಸೂಲಿಗೆ ಇಳಿಯುತ್ತಿವೆ. ಚಾಮರಾಜನಗರದಿಂದ ಸತ್ಯಮಂಗಲ ಕಡೆ ತೆರಳುತ್ತಿದ್ದ ಕಬ್ಬು ತುಂಬಿದ ಲಾರಿಯನ್ನ ಆನೆಗಳು ಅಡ್ಡಗಟ್ಟಿದ್ದು, ಮೂರು ಆನೆಗಳು ಕಬ್ಬಿಗಾಗಿ ಲಾರಿ ಮೇಲೆ ಮುಗಿ ಬಿದ್ದಿವೆ. ಘಟನೆಯಿಂದ ಒಂದು ಗಂಟೆಗೂ ಹೆಚ್ಚು ಕಾಲ ರಸ್ತೆ ಸಂಚಾರ ಅಸ್ತವ್ಯಸ್ತಗೊಂಡು, ವಾಹನ ಸವಾರರು ಪರದಾಡಬೇಕಾಯ್ತು.
