Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಕೋಕಾ-ಕೋಲಾ, 7-ಅಪ್ ಬಾಟಲಿಗಳಿಗೆ ಮೂತ್ರ ಹಾಕುತ್ತಿದ್ದ ವೃದ್ಧ: ಒಂದು ವರ್ಷದ ಬಳಿಕ ಬಯಲಾದ ಘೋರ ಕೃತ್ಯ!

Spread the love

ನವದೆಹಲಿ: ತಾನು ಕೆಲಸ ಮಾಡುವ ಸೂಪರ್ ಮಾರ್ಕೆಟ್​​ನಲ್ಲಿ ತಂಪು ಪಾನೀಯಗಳಿಗೆ ಮೂತ್ರ ಹಾಕಿ ಮಾರಾಟ ಮಾಡುತ್ತಿದ್ದ ಪ್ರಕರಣವೊಂದು ಹಾಂಗ್​ಕಾಂಗ್​ನಲ್ಲಿ (Hong Kong) ನಡೆದಿದೆ. 63 ವರ್ಷದ ಮಾಜಿ ಆಸ್ತಿ ಏಜೆಂಟ್ ಹಾಂಗ್ ಕಾಂಗ್ ನ್ಯಾಯಾಲಯದಲ್ಲಿ ಕಲುಷಿತ ತಂಪು ಪಾನೀಯಗಳನ್ನು ಮಾರಾಟ ಮಾಡುತ್ತಿದ್ದೆ ಎಂದು ಒಪ್ಪಿಕೊಂಡಿದ್ದಾನೆ ಎಂದು ಸೌತ್ ಚೀನಾ ಮಾರ್ನಿಂಗ್ ಪೋಸ್ಟ್ ವರದಿ ಮಾಡಿದೆ. ಆ ವ್ಯಕ್ತಿ ಸೂಪರ್ ಮಾರ್ಕೆಟ್ ಗಳಲ್ಲಿ ಮೂತ್ರ ಹಾಕಿದ ತಂಪು ಪಾನೀಯಗಳ ಬಾಟಲಿಗಳನ್ನು ಇಟ್ಟಿದ್ದ ಎಂದು ವರದಿ ತಿಳಿಸಿದೆ.

1 ವರ್ಷಕ್ಕೂ ಹೆಚ್ಚು ಕಾಲ ಆತ ಈ ರೀತಿ ಸೂಪರ್ ಮಾರ್ಕೆಟ್​ಗಳಲ್ಲಿ ಇತರ ವಸ್ತುಗಳ ಜೊತೆಗೆ ಮೂತ್ರ ಹಾಕಿದ ತಂಪು ಪಾನೀಯಗಳನ್ನು ಇರಿಸಿದ್ದ. ಈ ವಿಷಯ ಬಯಲಾಗುತ್ತಿದ್ದಂತೆ ಆತನ ವಿರುದ್ಧ ಕೇಸ್ ದಾಖಲಾಗಿತ್ತು. ಈ ಹಿನ್ನೆಲೆಯಲ್ಲಿ ಆ ವ್ಯಕ್ತಿ ಹಾಂಗ್ ಕಾಂಗ್ ನ್ಯಾಯಾಲಯದ ಮುಂದೆ ಹಾಜರಾಗಿದ್ದು, ತನ್ನ ನಿವೃತ್ತಿ ಮತ್ತು ವಿಚ್ಛೇದನದ ಖಿನ್ನತೆಯಿಂದಾಗಿ ಈ ರೀತಿ ಮಾಡಿದ್ದಾಗಿ ತಿಳಿಸಿದ್ದಾನೆ.

ಫ್ರಾಂಕ್ಲಿನ್ ಲೋ ಕಿಂಗೈ ಎಂಬ ವ್ಯಕ್ತಿ ಸೂಪರ್ ಮಾರ್ಕೆಟ್ ಸಿಬ್ಬಂದಿಯ ಬಗ್ಗೆ ಅತೃಪ್ತಿ ಹೊಂದಿದ್ದ. ನಂತರ ಮೂತ್ರ ಹಾಕಿದ ಬಾಟಲಿಗಳನ್ನು ಇಡಲು ಪ್ರಾರಂಭಿಸಿದನು. ಅವರು ಕೋಕಾ-ಕೋಲಾ ಪ್ಲಸ್ ಮತ್ತು 7-ಅಪ್ ಪಾನೀಯಗಳಿಗೆ ಮೂತ್ರವನ್ನು ಸೇರಿಸಿ ವೆಲ್ಕಮ್ ಮತ್ತು ಪಾರ್ಕ್ನ್ಶಾಪ್ ಔಟ್​ಲೆಟ್​ಗಳಲ್ಲಿ ಇರಿಸಿದರು. ಈ ಘಟನೆ 2024ರ ಜುಲೈ 21 ಮತ್ತು ಕಳೆದ ವರ್ಷ ಆಗಸ್ಟ್ 6ರ ನಡುವೆ ನಡೆದಿದೆ.

ತಮ್ಮ ತಪ್ಪನ್ನು ಅವರು ನ್ಯಾಯಾಲಯದ ಮುಂದೆ ಒಪ್ಪಿಕೊಂಡಿದ್ದಾರೆ. ಆ ವ್ಯಕ್ತಿ ಮಾಡಿದ ಅಪರಾಧಕ್ಕೆ 3 ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸಬಹುದು. ಆ ವ್ಯಕ್ತಿ ವಿಚ್ಛೇದನದ ನಂತರ ಖಿನ್ನತೆಗೆ ಒಳಗಾಗಿದ್ದರು. ಅವರಿಗೆ ಯಾವುದೇ ಭಾವನಾತ್ಮಕ ಬೆಂಬಲ ಇರಲಿಲ್ಲ. ಅವರ ಮಾಜಿ ಪತ್ನಿ ಮತ್ತು ಮಗ ವಿದೇಶಕ್ಕೆ ಸ್ಥಳಾಂತರಗೊಂಡಿದ್ದರು. ಅವರಿಬ್ಬರ ಜೊತೆ ಆ ವ್ಯಕ್ತಿಗೆ ಯಾವುದೇ ಸಂಪರ್ಕವೂ ಇರಲಿಲ್ಲ. ಅವರು ತಮ್ಮ ಪೋಷಕರನ್ನು ಸಹ ಕಳೆದುಕೊಂಡಿದ್ದರು. ಅಲ್ಲದೆ, ಶಾಪ್​ನ ಸಿಬ್ಬಂದಿಯ ಬಗ್ಗೆಯೂ ಅವರು ಅತೃಪ್ತಿ ಹೊಂದಿದ್ದರು. ಹೀಗಾಗಿ, ಖಿನ್ನತೆಯಿಂದ ಬಳಲುತ್ತಿದ್ದ ಅವರು ಈ ಕೃತ್ಯ ಎಸಗಿದ್ದಾರೆ ಎಂದು ಅವರ ಪರ ವಕೀಲರು ಕೋರ್ಟ್​​ನಲ್ಲಿ ಹೇಳಿದ್ದಾರೆ.

ಹಲವಾರು ವೆಲ್‌ಕಮ್ ಮತ್ತು ಪಾರ್ಕ್‌ಶಾಪ್ ಔಟ್‌ಲೆಟ್‌ಗಳಲ್ಲಿ ಮೂತ್ರ ಹಾಕಿದ ತಂಪು ಪಾನೀಯಗಳ ಬಗ್ಗೆ ಹಲವಾರು ವರದಿಗಳು ಬಂದ ನಂತರ ಜನರಿಗೆ ಅದರ ಬಗ್ಗೆ ತಿಳಿದುಬಂದಿತು. ಜುಲೈ 2025ರಲ್ಲಿ ಮಾಂಗ್ ಕೋಕ್‌ನ ಯೂನಿಯನ್ ಪಾರ್ಕ್ ಸೆಂಟರ್‌ನಲ್ಲಿರುವ ವೆಲ್‌ಕಮ್ ಶಾಖೆಯಿಂದ ಮೂತ್ರ ಮಿಶ್ರಿತ ತಂಪು ಪಾನೀಯಗಳ ಬಾಟಲಿಯ ಕೂಲ್ ಡ್ರಿಂಕ್ಸ್ ಸೇವಿಸಿದ ನಂತರ 9 ವರ್ಷದ ಬಾಲಕನೊಬ್ಬ ಅಸ್ವಸ್ಥನಾಗಿದ್ದ. ಅವನನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆತ ಚೇತರಿಸಿಕೊಂಡ. ಆದರೆ, ಆ ಘಟನೆಯ ಬಳಿಕ ಈ ಸುದ್ದಿ ಹೆಚ್ಚು ಪ್ರಚಲಿತಕ್ಕೆ ಬಂದಿತು.


Spread the love
Share:

administrator

Leave a Reply

Your email address will not be published. Required fields are marked *