ವಯಸ್ಸಾದ ತಂದೆಗೆ ಮಕ್ಕಳ ಹಿಂಸೆ: ಬೆಳಗಾವಿಯಲ್ಲಿ ಬ್ರಿಡ್ಜ್ನಿಂದ ಹಾರಿ ಆತ್ಮಹತ್ಯೆಗೆ ಯತ್ನಿಸಿದ ವೃದ್ಧ!

ಕೊಪ್ಪಳ: ತಂದೆ – ತಾಯಿಯಿಲ್ಲದೆ ಇದ್ದರೆ ಮಕ್ಕಳು ದುಡಿದು ತಿನ್ನುವಷ್ಟು ಗಟ್ಟಿಯಾಗಿ, ತನಗೆ ಬೇಕಾದ ರೀತಿಯಲ್ಲಿ ಬದುಕುವಂತೆ ಆಗುವುದಕ್ಕೆ ಸಾಧ್ಯವಿರುತ್ತಾ..? ಮಗುವಾಗಿದ್ದಾಗ ಎಷ್ಟೇ ಕಷ್ಟವಾದರೂ ತಂದೆ ತಾಯಿ, ಮಕ್ಕಳನ್ನ ಸಾಕಿರುತ್ತಾರೆ ಅಲ್ವಾ. ಆದ್ರೆ ವಯಸ್ಸಾದ ಮೇಲೆ ತಂದೆ ತಾಯಿ ಭಾರವಾಗಿ ಬಿಡುತ್ತಾರೆ ಕೆಲವು ಮಕ್ಕಳಿಗೆ.

ವಯಸ್ಸಾದರೂ ದುಡಿದು ಬೇಕಾದರೂ ತಿಂದು ಬಿಡುತ್ತಾರೆ. ಹಿಂಸೆ ಕೊಟ್ರೆ ಯಾರ್ ಬದುಕ್ತಾರೆ ಹೇಳಿ. ಮಗ – ಸೊಸೆಯಿಂದ ಹಿಂಸೆ ತಾಳಲಾರದೆ, ಅತ್ತ ಮಗಳ ಮನೆಗೆ ಹೋದರೆ ಬರಬೇಡ ಎಂಬ ಮಾತುಗಳನ್ನು ಕೇಳಿಸಿಕೊಂಡು ನೋವು ಪಟ್ಟ ಆ ಹಿರಿಜೀವ ಆತ್ಮಹತ್ಯೆ ದಾರಿ ಹಿಡಿದಿದೆ.

ಈ ಘಟನೆ ನಡೆದಿರುವುದು ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಮಂಜೂರಿ ಗ್ರಾಮದಲ್ಲಿ ನಡೆದಿದೆ. 77 ವರ್ಷದ ಕೃಷ್ಣಪ್ಪ ಗೋಪಾಲಪ್ಪ ಹತ್ತಿಮರದ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಮೂಲತಃ ಯಮನಕನಮರಡಿ ಗ್ರಾಮದವರು. ಅಂಕಲಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುವ ಬ್ರಿಡ್ಜ್ ಮೇಲಿಂದ ಹಾರುವ ಪ್ರಯತ್ನ ಮಾಡಿದ್ದಾರೆ. ಇದನ್ನ ಗಮನಿಸಿದ ಸ್ಥಳೀಯರು ಅವರನ್ನು ಕಾಪಾಡಿದ್ದಾರೆ. ಈಗ ಸಾಯುವುದಕ್ಕೆ ಹೋಗಿದ್ಯಾಕೆ ಎಂದು ಕೇಳಿದಾಗ ಕರುಣಾಜನಕ ಕಥೆಯೊಂದು ತೆರೆದುಕೊಂಡಿದೆ.
ನೀವೂ ನನಗ ಏನು ಕೇಳಬೇಡ್ರಿ, ನಾನು ಹೋಗ್ತೇನ್ರಿ, ಜೀವ ಸಾಕಾಗಿದೆ, ನಂಗ ನಡೆಯಾಕ ಬರಲ್ರಿ, ನಂಗ ಬ್ಯಾಸರ ಆಗಿದೇರಿ, ನೀವೂ ಹೋಗ್ರಿ, ನನ್ನ ಇಲ್ಲಿಯೇ ಬಿಡ್ರಿ, ಮಗ ಸೊಸೆ ಹಿಂಸೆ ನೀಡ್ತಾರಾ, ಮಗಳು ಮನೆಗೆ ಬರಬೇಡ ಅಂದಾಳ, ನನಗೆ ಬೇರೆ ಯಾರು ಗತಿ ಎಂದು ಆ ಹಿರಿ ಜೀವ ಕಣ್ಣೀರು ಹಾಕಿದೆ. ಸದ್ಯ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮಕ್ಕಳಿಗೆ ಬುದ್ದಿ ಹೇಳುತ್ತಾರಾ ಅಥವಾ ವೃದ್ಧಾಶ್ರಮಕ್ಕೆ ಸೇರಿಸ್ತಾರಾ ನೋಡಬೇಕಿದೆ.
