Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಸಾವಿನಲ್ಲೂ ಜೊತೆಗಿದ್ದ ವೃದ್ಧ ದಂಪತಿ – ಪತ್ನಿಯ ಬಳಿಕ ಪತಿಯೂ ಮೃತ

Spread the love

ಕೋಟ: ಪತ್ನಿ ಸಾವನ್ನಪ್ಪಿದ ಕೆಲವೇ ಗಂಟೆಗಳಲ್ಲಿ ಪತಿ ಕೂಡ ಸಾವನ್ನಪ್ಪಿದ ಘಟನೆ ಸಾಸ್ತಾನ ಸಮೀಪ ಗುಂಡ್ಮಿಯಲ್ಲಿ ಗುರುವಾರ ಸಂಭವಿಸಿದೆ. ಆರೋಗ್ಯ ಇಲಾಖೆಯಲ್ಲಿ ಹಿರಿಯ ಆರೋಗ್ಯ ನಿರೀಕ್ಷಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದ ಜಿ. ರತ್ನಾಕರಯ್ಯ (84) ಹಾಗೂ ಪತ್ನಿ ಸರೋಜಮ್ಮ (72) ಸಾ*ವಿನಲ್ಲೂ ಜತೆಯಾದವರು.

ಸರೋಜಮ್ಮ ಅವರು ಹೃದಯಘಾತದಿಂದ ಗುರುವಾರ ಬೆಳಗ್ಗೆ ಮೃತಪಟ್ಟಿದ್ದರು. ಪತ್ನಿಯ ಮೃತ ದೇಹದ ಜತೆಯಲ್ಲೇ ಇದ್ದು ರೋದಿಸುತ್ತಿದ್ದ ಪತಿ ರತ್ನಾಕರಯ್ಯ ಅವರ ಆರೋಗ್ಯ ಸ್ಥಿತಿ ಕ್ಷೀಣಿಸ ತೊಡಗಿತು. ಮನೆಯವರು ಅವರನ್ನು ಕೂಡಲೇ ಆಸ್ಪತ್ರೆಗೆ ಕರೆದೊಯ್ದು ವೈದ್ಯರಿಂದ ಚಿಕಿತ್ಸೆ ಕೊಡಿಸಲು ಪ್ರಯತ್ನಿಸಿದರೂ ಚಿಕಿತ್ಸೆ ಫಲಿಸದೆ ಪತ್ನಿ ಗತಿಸಿದ ನಾಲ್ಕು ಗಂಟೆಯ ಅಂತರದಲ್ಲಿ ಅವರು ಮೃ*ತಪಟ್ಟರು.ಮೃತ ದಂಪತಿ ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದಾರೆ.

ರತ್ನಾಕರಯ್ಯ ಅವರು ಹಿರಿಯ ಆರೋಗ್ಯ ನಿರೀಕ್ಷಕರಾಗಿ ಹಿರಿಯಡ್ಕ, ಬಾಕೂìರು, ಕೊಲ್ಲೂರು, ಕೋಟ ಮೊದಲಾದ ಕಡೆಗಳಲ್ಲಿ ಸೇವೆ ಸಲ್ಲಿಸಿ ಉತ್ತಮ ಅಧಿಕಾರಿ ಎಂಬ ಪ್ರಶಂಸೆಗೆ ಪಾತ್ರರಾಗಿದ್ದರು. ನಿವೃತ್ತಿಯ ಅನಂತರ ಸ್ಥಳೀಯ ಸಂಘ-ಸಂಸ್ಥೆಗಳಲ್ಲಿ ಗುರುತಿಸಿಕೊಂಡಿದ್ದರು. ಇವರ ವೃತ್ತಿ ಹಾಗೂ ಸಮಾಜ ಸೇವೆಗಾಗಿ ಕಾರ್ಕಡ ಗೆಳೆಯರ ಬಳಗ ಹಾಗೂ ಗುರುನರಸಿಂಹ ದೇಗುಲ ಸೇರಿದಂತೆ ವಿವಿಧ ಕಡೆಗಳಲ್ಲಿ ಗೌರವಗಳು ಸಂದಿವೆ.


Spread the love
Share:

administrator

Leave a Reply

Your email address will not be published. Required fields are marked *