ತಂದೆ ಹತ್ಯೆ ಮಾಡಿದ ಅಣ್ಣನಿಗೆ ಜೈಲಿನಲ್ಲೇ ಸಾವಿನ ದಂಡ: ತಮ್ಮನಿಂದ ಸಂಚು

ಮಧ್ಯಪ್ರದೇಶ: ಪೊಲೀಸರನ್ನೇ ಬೆಚ್ಚಿ ಬೀಳಿಸಿದ ಸೇಡಿನ ಕೊಲೆ ಪ್ರಕರಣ.ಆಸ್ತಿ ವಿಚಾರಕ್ಕೆ ಸಂಬಂಧಿಸಿ 2017 ರಲ್ಲಿ, ನಿವೃತ್ತ ಪೊಲೀಸ್ ಇನ್ಸ್ಪೆಕ್ಟರ್ ಹನುಮಾನ್ ಸಿಂಗ್ ತೋಮರ್ ಅವರನ್ನು ಅವರ ಹಿರಿಯ ಮಗ ಅಜಯ್ ಗುಂಡಿಕ್ಕಿ ಹತ್ಯೆಗೈದಿದ್ದ ಈ ವೇಳೆ ಹನುಮಾನ್ ಸಿಂಗ್ ಅವರ ಜೊತೆಗಿದ್ದ ಕಿರಿಯ ಮಗ ಭಾನು ಗುಂಡಿನ ದಾಳಿಯಿಂದ ಕೂದಲೆಳೆ ಅಂತರದಲ್ಲಿ ಪಾರಾಗಿದ್ದ ಆದರೆ ತನ್ನ ತಂದೆಯನ್ನು ಹತ್ಯೆಗೈದಿದ್ದ ಹಿರಿಯ ಸಹೋದರ ಅಜಯ್ ನನ್ನು ಹೇಗಾದರೂ ಮಾಡಿ ಹತ್ಯೆಗೈಯಬೇಕು ಎಂದು ಸೇಡು ತೀರಿಸಿಕೊಳ್ಳಲು ನಿರ್ಧರಿಸಿದ್ದ.

ಜೀವಾವಧಿ ಶಿಕ್ಷೆಗೆ ಒಳಗಾಗಿದ್ದ ಸಹೋದರ ಅಜಯ್
ತಂದೆಯನ್ನು ಹತ್ಯೆಗೈದ ಪ್ರಕರಣಕ್ಕೆ ಸಂಬಂಧಿಸಿ ಹಿರಿಯ ಮಗ ಅಜಯ್ ಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿತ್ತು ಅಂದಿನಿಂದ ಅಜಯ್ ಜೈಲಿನಲ್ಲಿದ್ದ, ಆದರೆ ಇತ್ತ ಕಿರಿಯ ಮಗ ಭಾನು ಮಾತ್ರ ತನ್ನ ಸಹೋದರನ ವಿರುದ್ಧ ಸೇಡು ತೀರಿಸಿಕೊಳ್ಳಲು ಕಾಯುತ್ತಿದ್ದ.
ಕಿರಿಯ ಪುತ್ರನಿಗೆ ಸಿಕ್ಕಿದ ಪೊಲೀಸ್ ಕೆಲಸ
ತನ್ನ ತಂದೆಯ ಹತ್ಯೆಯ ನಂತರ ಅನುಕಂಪದ ಆಧಾರದ ಮೇಲೆ ಕಿರಿಯ ಪುತ್ರ ಭಾನುಗೆ ಪೊಲೀಸ್ ಕೆಲಸ ದಕ್ಕಿತ್ತು, ಇದು ತನ್ನ ಸಹೋದರನ ಮೇಲೆ ಸೇಡು ತೀರಿಸಿಕೊಳ್ಳಲು ಹೆಚ್ಚಿನ ಬಲ ಸಿಕ್ಕಿದಂತಾಯಿತು.
ಪೊಲೀಸ್ ಅಧಿಕಾರಿಯಾಗಿದ್ದುಕೊಂಡೇ ಹತ್ಯೆಗೆ ಪ್ಲಾನ್
ಇತ್ತ ಪೊಲೀಸ್ ಅಧಿಕಾರಿಯಾಗಿದ್ದ ಭಾನು ಜೈಲಿನಲ್ಲಿರುವ ಸಹೋದರ ಅಜಯ್ ಹತ್ಯೆಗೆ ನಾನಾ ರೀತಿಯ ಸಂಚು ರೂಪಿಸಿದ್ದ ಅಲ್ಲದೆ ಸುಪಾರಿ ಕಿಲ್ಲರ್ ಗಳನ್ನು ನೇಮಿಸಿದ್ದ, ಇದರ ನಡುವೆ ತನ್ನ ಸಹೋದರ ಪೆರೋಲ್ ಮೇಲೆ ಹೊರಬರುವ ವಿಚಾರ ಗೊತ್ತಾಗುತ್ತಿದ್ದಂತೆ ಒಬ್ಬಳು ಯುವತಿಯನ್ನು ಈ ಕೃತ್ಯಕ್ಕೆ ಬಳಸಿಕೊಂಡಿದ್ದ.
ಹೆದ್ದಾರಿ ಮಧ್ಯದಲ್ಲೇ ಗುಂಡಿನ ದಾಳಿ:
ಇನ್ನು ಪರೋಲ್ ಮೇಲೆ ಹೊರ ಬಂದ ಅಜಯ್ ನನ್ನು ಭಾನು ಗೊತ್ತು ಪಡಿಸಿದ ಯುವತಿಯ ಜೊತೆ ಕಾರಿನಲ್ಲಿ ಶಿವಪುರಿ-ಗ್ವಾಲಿಯರ್ ಹೆದ್ದಾರಿಯಲ್ಲಿ ಸಂಚರಿಸಿದ್ದಾನೆ. ಮೊದಲೇ ಮಾಡಿದ ಪ್ಲಾನ್ ಪ್ರಕಾರ ಯುವತಿ ನಯಾಗಾಂವ್ ತಿರಾಹಾ ಬಳಿಯ ಪೆಟ್ರೋಲ್ ಪಂಪ್ನಲ್ಲಿ ಕಾರನ್ನು ನಿಲ್ಲಿಸುವಂತೆ ಹೇಳಿದ್ದಾಳೆ ಅಜಯ್ ಕಾರನ್ನು ನಿಲ್ಲಿಸಿದಾಗ, ಅಲ್ಲಿಯೇ ಅಡಗಿಕೊಂಡಿದ್ದ ಬಾಡಿಗೆ ಹಂತಕರು ಮನಬಂದಂತೆ ಅಜಯ್ ಮೇಲೆ ಗುಂಡಿನ ದಾಳಿ ನಡೆಸಿ ಪರಾರಿಯಾಗಿದ್ದಾರೆ.
ಸಹೋದರನ ಅಂತ್ಯಕ್ರಿಯೆಯಲ್ಲಿ ಭಾಗಿಯಾದ ತಮ್ಮ
ಯಾರಿಗೂ ಗೊತ್ತಾಗದ ರೀತಿಯಲ್ಲಿ ಸಹೋದರನ ಅಂತ್ಯಕ್ರಿಯೆಯಲ್ಲಿ ಭಾಗಿಯಾದ ತಮ್ಮ ಭಾನು ಮೃತ ಸಹೋದರನ ಮುಂದೆ ಕಣ್ಣೀರು ಸುರಿಸಿ ನಾಟಕವಾಡಿದ್ದಾನೆ, ಇದ್ದಾಗಿ ಮೂರೇ ದಿನಕ್ಕೆ ಯಾರಿಗೂ ಗೊತ್ತಾಗದ ರೀತಿಯಲ್ಲಿ ಬ್ಯಾಂಕಾಕ್ಗೆ ಹಾರಿದ್ದಾನೆ.
ಪೊಲೀಸರಿಂದ ಸಿಸಿಟಿವಿ ಪರಿಶೀಲನೆ:
ಸಹೋದರನ ಹತ್ಯೆಗೆ ಸಂಬಂಧಿಸಿ ತನಿಖೆ ನಡೆಸುತ್ತಿರುವ ಪೊಲೀಸರು ಸುಮಾರು ಐನೂರಕ್ಕೂ ಹೆಚ್ಚು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ್ದಾರೆ ಈ ವೇಳೆ ಕೃತ್ಯ ನಡೆದ ಸ್ಥಳದಲ್ಲಿ ಅಜಯ್ ಕಾರು ತೆರಳುತ್ತಿರುವುದು ಅದರ ಹಿಂದೆ ಸುಪಾರಿ ಕಿಲ್ಲರ್ ಗಳ ಕಾರು ಹೋಗುತ್ತಿರುವುದು ಕಂಡು ಬಂದಿದೆ ಕಾರಿನ ನಂಬರ್ ಪರಿಶೀಲನೆ ನಡೆಸಿದ ವೇಳೆ ಅದು ಕಿರಿಯ ಸಹೋದರ ಭಾನು ಅವರಿಗೆ ಸೇರಿದ್ದು ಎಂಬುದು ಸ್ಪಷ್ಟವಾಗಿದೆ.
ಸದ್ಯ ಪೊಲೀಸರು ಅಜಯ್ ಜೊತೆಗಿದ್ದ ಯುವತಿ ಹಾಗೂ ಅಜಯ್ ಹತ್ಯೆಗೆ ಸಹಾಯ ಮಾಡಿದ್ದ ಇನ್ನೋರ್ವ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದು ಬ್ಯಾಂಕಾಕ್ ನಲ್ಲಿ ತಲೆಮರೆಸಿಕೊಂಡಿರುವ ಭಾನು ವಿರುದ್ಧ ಲುಕ್ ಔಟ್ ಸುತ್ತೋಲೆ ಹೊರಡಿಸಿದ್ದು, ಅವರ ಪಾಸ್ಪೋರ್ಟ್ ರದ್ದುಗೊಳಿಸುವಂತೆ ವಿದೇಶಾಂಗ ಸಚಿವಾಲಯವನ್ನು ಕೇಳಿಕೊಂಡಿದ್ದಾರೆ.
