Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಇಡಿ ವಿಚಾರಣೆ: ಶಾಸಕನ ರಹಸ್ಯ ತನಿಖೆ ವೇಳೆ ಬಹಿರಂಗವಾಗುತ್ತಾ?

Spread the love

ಬೆಂಗಳೂರು : ವೀರೇಂದ್ರ ಪಪ್ಪಿ.. ಚಿತ್ರದುರ್ಗದ ಕಾಂಗ್ರೆಸ್ ಶಾಸಕ. ಜೊತೆಗೆ ಬೆಟ್ಟಿಂಗ್ ಆಯಪ್, ಕ್ಯಾಸಿನೋ ವ್ಯವಹಾರ ನಡೆಸೋದ್ರಲ್ಲಿ ಪಂಟರ್. ಈಗ ಇದೇ ವೀರೇಂದ್ರ ಪಪ್ಪಿ ಇಡಿ ಕೈಗೆ ಸಿಕ್ಕಿಹಾಕಿಕೊಂಡು ವಿಲವಿಲ ಒದ್ದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.‌ ಎರಡನೇ ಬಾರಿಗೆ ಪಪ್ಪಿಯನ್ನು ಕಸ್ಟಡಿಗೆ ಪಡೆದು‌ ಡ್ರಿಲ್ ನಡೆಸಿರುವ ಇಡಿ ಅಧಿಕಾರಿಗಳು ಮಹತ್ವದ ಮಾಹಿತಿಗಳನ್ನು ಹೊರಗೆ ತಗೆದಿದ್ದಾರೆ.

ಇದರಲ್ಲಿ ಶಾಸಕನ ಅಸಲಿಯತ್ತು ಬಯಲಾಗಲಿದೆ ಅಂತಾ‌ ಹೇಳಲಾಗ್ತಿದೆ. ಶಾಸಕನ ಬಂಧನಕ್ಕೂ ಮುನ್ನ ಇಡಿ ಅನೇಕ ಕಡೆ ದಾಳಿ ನಡೆಸಿ ಮಹತ್ವದ ದಾಖಲೆಗಳನ್ನು ವಶಕ್ಕೆ ಪಡೆದಿತ್ತು. ಇವೆಲ್ಲವನ್ನು ಇಟ್ಟುಕೊಂಡು ತನಿಖೆ ನಡೆಸುವಾಗ ಕೆಲ ಸ್ಪೋಟಕ ಮಾಹಿತಿಗಳು ಹೊರಗೆ ಬಂದಿವೆ.
ಯೆಸ್.. ವೀರೇಂದ್ರ ಪಪ್ಪಿಯ ಹಣದ ವ್ಯವಹಾರದ ಜಾಡನ್ನು ಹಿಡಿದು ಇಡಿ ತನಿಖೆ ನಡೆಸಿತ್ತು. ಈ ವೇಳೆ ಬೇರೆ-ಬೇರೆ ದೇಶಗಳಿಂದ ಬೇನಾಮಿ ಅಕೌಂಟ್ ಗಳಿಗೆ ಹಣ ವರ್ಗಾವಣೆ ಆಗಿರೋದು ಪತ್ತೆಯಾಗಿದೆ. ಈ ಬಗ್ಗೆ
ಶತಾಯಗತಾಯ ಪಪ್ಪಿ ಬಾಯ್ಬಿಡಿಸಲು ಇಡಿ ಸಾಕಷ್ಟು ಪ್ರಯತ್ನ ನಡೆಸ್ತಿದೆ. ಆದರೆ ಅಧಿಕಾರಿಗಳು ಏನೇ ಪ್ರಶ್ನೆ ಕೇಳಿದ್ರೂ ಪಪ್ಪಿ ಮಾತ್ರ ನನಗೆ ಗೊತ್ತಿಲ್ಲ ಎಂಬ ಉತ್ತರ ಕೊಡ್ತಿದ್ದಾರಂತೆ.

ತನಿಖೆ ವೇಳೆ ನೂರಾರು ಬ್ಯಾಂಕ್ ಅಕೌಂಟ್ ಮೂಲಕ ಅಕ್ರಮ ಹಣ ವರ್ಗಾವಣೆಯಾಗಿದ್ದು, ಈ ಖಾತೆಗಳು ಪಪ್ಪಿ ಆಪ್ತರ ಹೆಸರಿನಲ್ಲಿರೋದು ತಿಳಿದು ಬಂದಿದೆ. ಪಪ್ಪಿ ಬಂಧನವಾದ ಮೇಲೆ ಅವರ ಸಂಬಂಧಿಕರು, ಕುಟುಂಬಸ್ಥರು ಆಪ್ತರ ಬ್ಯಾಂಕ್ ಅಕೌಂಟ್ ಗಳನ್ನು ಇಡಿ ಪರಿಶೀಲನೆ ನಡೆಸಿ ಬಳಿಕ ಬ್ಯಾಂಕ್ ಗಳಿಗೆ ಪತ್ರ ಬರೆಯಲಾಗಿತ್ತು. 5 ವರ್ಷಗಳ ಬ್ಯಾಂಕ್ ಅಕೌಂಟ್ ಹಣ ವರ್ಗಾವಣೆ ಕುರಿತು ದಾಖಲೆಗನ್ನು ಇಡಿ ಪಡೆದುಕೊಂಡಿತ್ತು.
ಇನ್ನೂ ಎರಡು ಬಾರಿ ದಾಳಿ ವೇಳೆಯೂ ಸಹ ಸಂಬಂಧಪಟ್ಟ ದಾಖಲೆ ಜಪ್ತಿ ಮಾಡಿ ಜಾರಿ ನಿರ್ದೇಶನಾಲಯ ತನಿಖೆ ಕೈಗೊಂಡಿದೆ. ಆದ್ರೆ ದಾಖಲೆಗಳನ್ನು ಮುಂದಿಟ್ಟು ಪ್ರಶ್ನೆ ಮಾಡಿದ್ರು ಸಹ ಶಾಸಕ ವೀರೇಂದ್ರ ಪಪ್ಪಿ ಸರಿಯಾದ ಉತ್ತರ ಕೊಡ್ತಿಲ್ಲ. ಇದು ಇಡಿಗೆ ತಲೆನೋವಾಗಿದ್ದು, ಮುಂದೆ ಶಾಸಕರಿಂದ ಉತ್ತರ ಪಡೆಯಲು ಬೇರೆಯದೇ ಮಾರ್ಗವನ್ನು ಇಡಿ ಮಾಡಬೇಕಿದೆ. ಆದರೆ ಟೆಕ್ನಿಕಲ್ ಎವಿಡೆನ್ಸ್ ಹಾಗೂ ಆಪ್ತರನ್ನು ಮುಖಾಮುಖಿ ಕೂರಿಸಿ ವಿಚಾರಣೆ ನಡೆಸಿದ ವೇಳೆಯಾದ್ರೂ ವೀರೇಂದ್ರ ಪಪ್ಪಿ ಬಾಯ್ಬಿಡ್ತಾರ ಎಂಬುದನ್ನು ಕಾದು ನೋಡಬೇಕಿದೆ.


Spread the love
Share:

administrator

Leave a Reply

Your email address will not be published. Required fields are marked *