ಪಾಕಿಸ್ತಾನಕ್ಕೆ ಆರ್ಥಿಕ ಉತ್ಸಾಹ:80 ಸಾವಿರ ಕೋಟಿ ಮೌಲ್ಯದ ಚಿನ್ನದ ನಿಕ್ಷೇಪ ಪತ್ತೆ

ನೆರೆಯ ರಾಷ್ಟ್ರ ಪಾಕಿಸ್ತಾನಕ್ಕೆ ಬಡತನದ ನಡುವೆಯೂ ಸಿರಿತನದ ಯೋಗವೊಂದು ಬಂದಿದೆ. ಆರ್ಥಿಕ ಹಾಗೂ ರಾಜಕೀಯ ಅಸ್ಥಿರತೆಯ ಜೊತೆ ಹಣದುಬ್ಬರದಿಂದ ಬಳಲುತ್ತಿರುವ ಪಾಕಿಸ್ತಾನದಲ್ಲಿ 80 ಸಾವಿರ ಕೋಟಿ ಮೌಲ್ಯದ ಚಿನ್ನದ ನಿಕ್ಷೇಪವೊಂದು ಪತ್ತೆಯಾದ ಬಗ್ಗೆ ವರದಿಯಾಗಿದೆ. ಸಿಂಧೂ ನದಿ ಕಣಿವೆಯ ಸಮೀಪ ಇಷ್ಟೊಂದು ದೊಡ್ಡ ಮೌಲ್ಯದ ಚಿನ್ನದ ನಿಕ್ಷೇಪ ಪತ್ತೆಯಾಗಿದೆ ಎಂದು ವರದಿಯಾಗಿದೆ. ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಅಟ್ಟೊಕ್ ಜಿಲ್ಲೆಯಲ್ಲಿ ಸರ್ಕಾರ ನಡೆಸಿದ ಸಮೀಕ್ಷೆ ವೇಳೆ ಈ ದೊಡ್ಡ ಪ್ರಮಾಣ ಚಿನ್ನದ ನಿಕ್ಷೇಪ ಪತ್ತೆಯಾಗಿದ್ದು, ಇದು ಗಣಿಗಾರಿಕೆಯ ಮಹತ್ವಕಾಂಕ್ಷೆ ಯೋಜನೆಯನ್ನು ಹುಟ್ಟುಹಾಕಿದೆ. ಪ್ರಸ್ತುತ ಅರ್ಥಿಕ ದುಸ್ಥಿತಿಯಿಂದ ಬಳಲುತ್ತಿರುವ ಪಾಖಿಸ್ತಾನಕ್ಕೆ ಈ ನಿಕ್ಷೇಪವೂ ಹೊಸ ಅರ್ಥಿಕ ಉನ್ನತಿಯ ಭರವಸೆ ನೀಡಿದೆ. ಈ ಯೋಜನೆಯು ಪಾಕಿಸ್ತಾನದ ಗಣಿಗಾರಿಕೆ ವಲಯಕ್ಕೆ ಪ್ರಮುಖ ಮೈಲಿಗಲ್ಲಾಗಲಿದೆ ಎಂದು ಸರ್ಕಾರಿ ಸ್ವಾಮ್ಯದ ರಾಷ್ಟ್ರೀಯ ಎಂಜಿನಿಯರಿಂಗ್ ಸೇವೆಗಳು ಪಾಕಿಸ್ತಾನ (NESPAK) ಮತ್ತು ಪಂಜಾಬ್‌ನ ಗಣಿ ಮತ್ತು ಖನಿಜ ಇಲಾಖೆ ನಿರೀಕ್ಷಿಸುತ್ತಿದೆ. ಅಟಾಕ್ ಜಿಲ್ಲೆಯಲ್ಲಿ ಹರಿಯುವ ಸಿಂಧೂ ನದಿಯಲ್ಲಿ ಚಿನ್ನದ ನಿಕ್ಷೇಪ:ಪಾಕಿಸ್ತಾನದ ಅಟಾಕ್ ಜಿಲ್ಲೆಯ ಸಿಂಧೂ ನದಿಯ ಉದ್ದಕ್ಕೂ ಒಂಬತ್ತು (09) ಪ್ಲೇಸರ್ ಚಿನ್ನದ ಬ್ಲಾಕ್‌ಗಳಿಗೆ ಬಿಡ್ಡಿಂಗ್ ದಾಖಲೆಗಳನ್ನು ಸಿದ್ಧಪಡಿಸುವ ಸಲಹಾ ಸೇವೆಗಳು ಮತ್ತು ವಹಿವಾಟು ಸಲಹಾ ಸೇವೆಗಳಿಗಾಗಿ ಸರ್ಕಾರಿ ಸ್ವಾಮ್ಯದ ಸಲಹಾ ಸಂಸ್ಥೆಯು ಒಪ್ಪಂದಕ್ಕೆ ಸಹಿ ಹಾಕಿದೆ ಎಂದು NESPAK ನ ವ್ಯವಸ್ಥಾಪಕ ನಿರ್ದೇಶಕ ಜರ್ಗಮ್ ಇಶಾಕ್ ಖಾನ್ ದೃಢಪಡಿಸಿದ್ದಾರೆ. ಈ ಪ್ರದೇಶದಲ್ಲಿ ವಾಣಿಜ್ಯ ಚಿನ್ನದ ಗಣಿಗಾರಿಕೆಯತ್ತ ಇದು ನಿರ್ಣಾಯಕ ಹೆಜ್ಜೆಯಾಗಿದೆ ಎಂದು ಪಾಕಿಸ್ತಾನದ ಡಾನ್ ನ್ಯೂಸ್ ವರದಿ ಮಾಡಿದೆ. ಹಿಮಾಲಯದಿಂದ ನದಿಯಲ್ಲಿ ಹರಿದು ಹೋಗುವ ಚಿನ್ನ:ಈ ನಿಕ್ಷೇಪಕ್ಕೆ ಸಂಬಂಧಿಸಿದಂತೆ ಭೂವಿಜ್ಞಾನಿಗಳು ಸಿಂಧೂ ನದಿಯು ಭಾರತದ ಹಿಮಾಲಯದಿಂದ ಚಿನ್ನದ ನಿಕ್ಷೇಪಗಳನ್ನು ಆ ಪ್ರದೇಶಕ್ಕೆ(ಸಿಂಧು ನದಿ ತೀರ) ಒಯ್ಯುತ್ತದೆ ಎಂದು ಸೂಚಿಸುತ್ತಾರೆ. ಇದು ಹಿಮಾಲಯದಿಂದ ಭಾರತದ ಮೂಲಕ ಪಾಕಿಸ್ತಾನಕ್ಕೆ ಹರಿಯುವ ಸಿಂಧು ನದಿಗಳ ತಳದಲ್ಲಿ ಪ್ಲೇಸರ್ ರೂಪದಲ್ಲಿ ಸಂಗ್ರಹಗೊಳ್ಳುತ್ತದೆ. ಕೆಳಮುಖವಾಗಿ ವ್ಯಾಪಕವಾಗಿ ಪ್ರಯಾಣಿಸುವುದರಿಂದ ಚಪ್ಪಟೆಯಾದ ಅಥವಾ ಸಂಪೂರ್ಣವಾಗಿ ದುಂಡಾದ ಗಟ್ಟಿಗಳಂತಿರುತ್ತವೆ. ಐತಿಹಾಸಿಕವಾಗಿ ನೈಸರ್ಗಿಕ ಸಂಪನ್ಮೂಲಗಳಿಂದ ಸಮೃದ್ಧವಾಗಿರುವ ಸಿಂಧೂ ಕಣಿವೆ ಪ್ರದೇಶವು ಚಿನ್ನ ಮತ್ತು ಇತರ ಅಮೂಲ್ಯ ಲೋಹಗಳ ಜೊತೆ ಬಹಳ ಹಿಂದಿನಿಂದಲೂ ಸಂಬಂಧ ಹೊಂದಿದೆ.ಭಾರತದ ಬದ್ಧವೈರಿ ಪಾಕಿಸ್ತಾನದೊಂದಿಗೆ ಪರಮಾಪ್ತ ಒಪ್ಪಂದ ಮಾಡಿಕೊಂಡ ಚೀನಾ; ಭಾರತಕ್ಕೆ ಮುಳ್ಳಾಗುವುದೇ?ಸಿಂಧು ನದಿ ದಂಡೆಯಲ್ಲಿ ಸಿಕ್ಕ ಈ ಚಿನ್ನದ ಆವಿಷ್ಕಾರವು ಪಾಕಿಸ್ತಾನದ ಗಣಿಗಾರಿಕೆ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ, ವಿಶೇಷವಾಗಿ ಪಾಕಿಸ್ತಾನದ ಚಿನ್ನದ ನಿಕ್ಷೇಪಗಳು ದಕ್ಷಿಣ ಏಷ್ಯಾದಲ್ಲಿ ಅತ್ಯಂತ ಕಡಿಮೆ ಇರುವುದರಿಂದ. ಸ್ಟೇಟ್ ಬ್ಯಾಂಕ್ ಆಫ್ ಪಾಕಿಸ್ತಾನದ ದತ್ತಾಂಶದ ಪ್ರಕಾರ, ಡಿಸೆಂಬರ್ 2024 ರ ಹೊತ್ತಿಗೆ ಆ ದೇಶದ ಚಿನ್ನದ ನಿಕ್ಷೇಪಗಳು $5.43 ಬಿಲಿಯನ್ ಮೌಲ್ಯದ್ದಾಗಿತ್ತು ಎಂದು ಈ ಹಿಂದೆ ದಿ ಎಕ್ಸ್‌ಪ್ರೆಸ್ ಟ್ರಿಬ್ಯೂನ್ ವರದಿ ಮಾಡಿತ್ತು. ಸುದ್ದಿ ತಿಳಿಯುತ್ತಿದ್ದಂತೆ ಹೆಚ್ಚಿದ ಅಕ್ರಮ ಗಣಿಗಾರಿಕೆಸಿಂಧು ನದಿಯ ಸಮೀಪ ಚಿನ್ನದ ನಿಕ್ಷೇಪ ಇರುವ ಬಗ್ಗೆ ಈ ಹಿಂದೆಯೇ ಸಾಕಷ್ಟು ಸಂಚಲನ ಸೃಷ್ಟಿಸಿದ್ದು, ಈ ವರ್ಷದ ಆರಂಭದಲ್ಲಿ ಪಾಕಿಸ್ತಾನದ ಖೈಬರ್ ಪಖ್ತುಂಖ್ವಾ ಪ್ರಾಂತ್ಯದ ನೌಶೇರಾ ಬಳಿಯ ಸಿಂಧೂ ನದಿ ತಪ್ಪಲಿಗೆ ಸ್ಥಳೀಯ ಗಣಿಗಾರಿಕೆ ಗುತ್ತಿಗೆದಾರರು ಸಾಕಷ್ಟು ಭಾರಿ ಭೇಟಿ ನೀಡಿದ್ದರು. ಹೀಗಾಗಿ ಇಲ್ಲಿ ಚಿನ್ನ ಇರುವ ಸುದ್ದಿ ಅಕ್ರಮ ಗಣಿಗಾರಿಕೆ ಪ್ರಯತ್ನಗಳಿಗೆ ಕಾರಣವಾಗಿದೆ ಎಂಬ ವರದಿಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದ್ದವು. ಆದಾಗ್ಯೂ, ಪಂಜಾಬ್ ಪ್ರಾಂತೀಯ ಸರ್ಕಾರವು ಮಧ್ಯಪ್ರವೇಶಿಸಿ ಅನಧಿಕೃತ ಗಣಿಗಾರಿಕೆಗೆ ಅನುಮತಿ ನಿರಾಕರಿಸಿತು, ಇದರಿಂದಾಗಿ ಈ ಪ್ರದೇಶದಲ್ಲಿ ಅನಿಯಂತ್ರಿತ ಚಟುವಟಿಕೆಗಳು ತಡೆಯಲ್ಪಟ್ಟವು ಎಂದು ದಿ ನ್ಯೂಸ್ ಇಂಟರ್‌ನ್ಯಾಷನಲ್ ವರದಿ ಮಾಡಿತ್ತು. ಭಾರತದಂತೆ ಕರೆನ್ಸಿಯಾಗಿ ರೂಪಾಯಿ ಬಳಸುವ ದೇಶಗಳು!ಸದ್ಯ ಪಾಕಿಸ್ತಾನದ ಆರ್ಥಿಕತೆಯು ಕ್ಷೀಣಿಸುತ್ತಿರುವ ವಿದೇಶಿ ವಿನಿಮಯ ಮೀಸಲು ಮತ್ತು ದುರ್ಬಲಗೊಳ್ಳುತ್ತಿರುವ ಕರೆನ್ಸಿ ಸೇರಿದಂತೆ ತೀವ್ರ ಸವಾಲುಗಳನ್ನು ಎದುರಿಸುತ್ತಿರುವಾಗ, ಈ ಅಟಾಕ್ ಪ್ಲೇಸರ್ ಗೋಲ್ಡ್ ಪ್ರಾಜೆಕ್ಟ್ ಹೆಚ್ಚು ಅಗತ್ಯವಿರುವ ಆರ್ಥಿಕ ಪರಿಹಾರವನ್ನು ದೇಶಕ್ಕೆ ಒದಗಿಸಬಹುದು. ಇದು ಹಿಂದೆ ಅನ್ವೇಷಿಸದ ಗಣಿಗಾರಿಕೆ ಅವಕಾಶಗಳನ್ನು ಬಳಸಿಕೊಳ್ಳುವ ಮತ್ತು ವಿದೇಶಿ ಚಿನ್ನದ ಆಮದಿನ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುವ ಗುರಿಯನ್ನು ಹೊಂದಿದೆ.

ಸುದ್ದಿ ತಿಳಿಯುತ್ತಿದ್ದಂತೆ ಹೆಚ್ಚಿದ ಅಕ್ರಮ ಗಣಿಗಾರಿಕೆ
ಸಿಂಧು ನದಿಯ ಸಮೀಪ ಚಿನ್ನದ ನಿಕ್ಷೇಪ ಇರುವ ಬಗ್ಗೆ ಈ ಹಿಂದೆಯೇ ಸಾಕಷ್ಟು ಸಂಚಲನ ಸೃಷ್ಟಿಸಿದ್ದು, ಈ ವರ್ಷದ ಆರಂಭದಲ್ಲಿ ಪಾಕಿಸ್ತಾನದ ಖೈಬರ್ ಪಖ್ತುಂಖ್ವಾ ಪ್ರಾಂತ್ಯದ ನೌಶೇರಾ ಬಳಿಯ ಸಿಂಧೂ ನದಿ ತಪ್ಪಲಿಗೆ ಸ್ಥಳೀಯ ಗಣಿಗಾರಿಕೆ ಗುತ್ತಿಗೆದಾರರು ಸಾಕಷ್ಟು ಭಾರಿ ಭೇಟಿ ನೀಡಿದ್ದರು. ಹೀಗಾಗಿ ಇಲ್ಲಿ ಚಿನ್ನ ಇರುವ ಸುದ್ದಿ ಅಕ್ರಮ ಗಣಿಗಾರಿಕೆ ಪ್ರಯತ್ನಗಳಿಗೆ ಕಾರಣವಾಗಿದೆ ಎಂಬ ವರದಿಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದ್ದವು. ಆದಾಗ್ಯೂ, ಪಂಜಾಬ್ ಪ್ರಾಂತೀಯ ಸರ್ಕಾರವು ಮಧ್ಯಪ್ರವೇಶಿಸಿ ಅನಧಿಕೃತ ಗಣಿಗಾರಿಕೆಗೆ ಅನುಮತಿ ನಿರಾಕರಿಸಿತು, ಇದರಿಂದಾಗಿ ಈ ಪ್ರದೇಶದಲ್ಲಿ ಅನಿಯಂತ್ರಿತ ಚಟುವಟಿಕೆಗಳು ತಡೆಯಲ್ಪಟ್ಟವು ಎಂದು ದಿ ನ್ಯೂಸ್ ಇಂಟರ್‌ನ್ಯಾಷನಲ್ ವರದಿ ಮಾಡಿತ್ತು.
ಭಾರತದಂತೆ ಕರೆನ್ಸಿಯಾಗಿ ರೂಪಾಯಿ ಬಳಸುವ ದೇಶಗಳು!
ಸದ್ಯ ಪಾಕಿಸ್ತಾನದ ಆರ್ಥಿಕತೆಯು ಕ್ಷೀಣಿಸುತ್ತಿರುವ ವಿದೇಶಿ ವಿನಿಮಯ ಮೀಸಲು ಮತ್ತು ದುರ್ಬಲಗೊಳ್ಳುತ್ತಿರುವ ಕರೆನ್ಸಿ ಸೇರಿದಂತೆ ತೀವ್ರ ಸವಾಲುಗಳನ್ನು ಎದುರಿಸುತ್ತಿರುವಾಗ, ಈ ಅಟಾಕ್ ಪ್ಲೇಸರ್ ಗೋಲ್ಡ್ ಪ್ರಾಜೆಕ್ಟ್ ಹೆಚ್ಚು ಅಗತ್ಯವಿರುವ ಆರ್ಥಿಕ ಪರಿಹಾರವನ್ನು ದೇಶಕ್ಕೆ ಒದಗಿಸಬಹುದು. ಇದು ಹಿಂದೆ ಅನ್ವೇಷಿಸದ ಗಣಿಗಾರಿಕೆ ಅವಕಾಶಗಳನ್ನು ಬಳಸಿಕೊಳ್ಳುವ ಮತ್ತು ವಿದೇಶಿ ಚಿನ್ನದ ಆಮದಿನ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುವ ಗುರಿಯನ್ನು ಹೊಂದಿದೆ.