ವಿಜಯಪುರದಲ್ಲಿ ಭೂಕಂಪನದ ಅನುಭವ: ನಿಗೂಢ ಶಬ್ದಕ್ಕೆ ಜನರು ಬೆಚ್ಚಿಬಿದ್ದರು!

ವಿಜಯಪುರ: ವಿಜಯಪುರ ಜಿಲ್ಲೆಯ ಹಲವೆಡೆ ಭೂಮಿ ಕಂಪಿಸಿದ ಅನುಭವವಾಗಿದ್ದು, ನಿಗೂಢ ಶಬ್ದ ಕೇಳಿಬಂದ ಹಿನ್ನೆಲೆಯಲ್ಲಿ ಜನರು ಆತಂಕಗೊಂಡಿದ್ದಾರೆ.
ಮಧ್ಯಾಹ್ನದ ವೇಳೆ ವಿಜಯಪುರ ನಗರ ಸೇರಿದಂತೆ ತಿಕೋಟಾ ತಾಲೂಕಿನ ಸೋಮದೇವರಹಟ್ಟಿ, ಕಳ್ಳಕವಟಗಿ, ಗೋಣಸಗಿ, ಹಡಗಿನಾಳ ಪ್ರದೇಶಗಳಲ್ಲಿ ಭಾರಿ ಶಬ್ದ ಕೇಳಿಬಂದಿದ್ದು, ಭೂಮಿಯೊಳಗಿಂದ ಬಂದುದಂತೆ ಅನಿಸಿತು. ಇದರಿಂದಾಗಿ ಸ್ಥಳೀಯರು ಭಯಭೀತರಾಗಿದ್ದಾರೆ.
ವಿಜಯಪುರದ ಕೆ.ಹೆಚ್.ಬಿ ಕಾಲೋನಿ, ಬ್ಯಾಂಕರ್ಸ್ ಕಾಲೋನಿ, ಸದಾಶಿವನಗರ, ಆಕೃತಿ ಕಾಲೋನಿಯ ನಿವಾಸಿಗಳೂ ಇದೇ ರೀತಿಯ ಭೂಕಂಪನದ ಅನುಭವ ಹೊಂದಿದ್ದು, ಭೂಮಿಯೊಳಗಿನ ನಿಗೂಢ ಸದ್ದಿನ ಮೂಲ ಕುರಿತು ಇನ್ನಷ್ಟೇ ಅಧಿಕಾರಿಗಳು ಅಧಿಕೃತ ಮಾಹಿತಿ ನೀಡಬೇಕಾಗಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.