ಅವಾಚ್ಯ ಶಬ್ದ ಬಳಸಿ ಕನ್ನಡಿಗರಲ್ಲಿ ಕ್ಷಮೆ ಯಾಚಿಸಿದ ದುಲ್ಕರ್ ಸಲ್ಮಾನ್

ಬೆಂಗಳೂರು, ತನ್ನ ವೈವಿಧ್ಯತೆ, ಸಹಿಷ್ಣುತೆ, ಅಭಿವೃದ್ಧಿ, ಪರಂಪರೆ, ಹಸಿರು ಪ್ರೀತಿ, ವಿಫುಲ ಅವಕಾಶಗಳಿಂದಾಗಿ ವಿಶ್ವ ಮಟ್ಟದಲ್ಲಿ ಗುರುತು ಪಡೆದುಕೊಂಡಿರುವ ನಗರ. ಆದರೆ ಇತ್ತೀಚೆಗೆ ಬಿಡುಗಡೆ ಆದ ಸ್ಟಾರ್ ನಟ ದುಲ್ಕರ್ ಸಲ್ಮಾನ್ ನಿರ್ಮಾಣ ಮಾಡಿರುವ ‘ಲೋಕಾ’ ಹೆಸರಿನ ಸಿನಿಮಾನಲ್ಲಿ ಬೆಂಗಳೂರಿನ ಜನರ ಬಗ್ಗೆ ಅವಾಚ್ಯವಾಗಿ ನಿಂದಿಸಲಾಗಿದೆ.

ಅದರಲ್ಲೂ ಬೆಂಗಳೂರಿನ ಮಹಿಳೆಯರ ಬಗ್ಗೆ ಅವಾಚ್ಯ ಪದ ಬಳಕೆ ಆಗಿತ್ತು. ಇದನ್ನು ಖಂಡಿಸಿ ವರದಿ ಪ್ರಕಟಿಸಿತ್ತು. ಅದರ ಬೆನ್ನಲ್ಲೆ ಇದೀಗ ನಟ, ನಿರ್ಮಾಪಕ ದುಲ್ಕರ್ ಸಲ್ಮಾನ್ ಕ್ಷಮೆ ಕೇಳಿದ್ದಾರೆ.
ದುಲ್ಕರ್ ಸಲ್ಮಾನ್ ಅವರ ವೇಯ್ಫೇರ್ ನಿರ್ಮಾಣ ಸಂಸ್ಥೆ ನಿರ್ಮಾಣ ಮಾಡಿರುವ ಸೂಪರ್ ಹೀರೋ ಸಿನಿಮಾ ‘ಲೋಕಾ’ ಇದೇ ಶುಕ್ರವಾರ ಬಿಡುಗಡೆ ಆಗಿದೆ. ಸಿನಿಮಾದ ಕತೆ ನಡೆಯುವುದು ಬೆಂಗಳೂರಿನಲ್ಲೇ. ಸಿನಿಮಾನಲ್ಲಿ ಸಾಕಷ್ಟು ಕನ್ನಡದ ಸಂಭಾಷಣೆಗಳು ಸಹ ಇವೆ. ಆದರೆ ಸಿನಿಮಾದ ಪಾತ್ರವೊಂದು ಬೆಂಗಳೂರಿನ ಯುವತಿಯರ ಬಗ್ಗೆ ಕೀಳು ಪದವೊಂದರ ಬಳಕೆ ಮಾಡಿದೆ. ಇದು ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿತ್ತು.
ಪರಿಸ್ಥಿತಿಯ ಗಂಭೀರತೆ ಅರಿತ ದುಲ್ಕರ್ ಸಲ್ಮಾನ್ ಅವರ ನಿರ್ಮಾಣ ಸಂಸ್ಥೆ ಕ್ಷಮೆ ಕೋರಿದೆ. ಸಾಮಾಜಿಕ ಜಾಲತಾಣದಲ್ಲಿ ಸಂದೇಶ ಹಂಚಿಕೊಂಡಿರುವ ನಿರ್ಮಾಣ ಸಂಸ್ಥೆ, ‘ನಮ್ಮ ನಿರ್ಮಾಣದ ‘ಲೋಕಾ: ಚಾಪ್ಟರ್ 1′ ಸಿನಿಮಾದ ಪಾತ್ರವೊಂದು ಹೇಳಿರುವ ಸಂಭಾಷಣೆ ಕರ್ನಾಟಕದ ಜನರ ಭಾವನೆಗಳಿಗೆ ಧಕ್ಕೆ ತಂದಿದೆ ಎಂಬುದು ನಮ್ಮ ಅರಿವಿಗೆ ಬಂದಿದೆ’ ಎಂದಿದೆ.
