ದುಬೈ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಮುಚ್ಚಲು ತೀರ್ಮಾನ – ಎಲ್ಲಾ ಸೇವೆಗಳು DWCಗೆ ವರ್ಗಾವಣೆ

ದುಬೈ : ದುಬೈ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ (DXB) ಮುಂದಿನ 10 ವರ್ಷಗಳಲ್ಲಿ ಮುಚ್ಚಲಾಗುತ್ತಿದೆ. ಎಲ್ಲಾ ವಿಮಾನಗಳನ್ನು ಅಲ್ ಮಕ್ತೌಮ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ (DWC)ಗೆ ವರ್ಗಾಯಿಸಲಾಗುತ್ತದೆ. DXB ಸುತ್ತಮುತ್ತಲಿನ ಜಾಗದ ಕೊರತೆ ಮತ್ತು ಹೆಚ್ಚುತ್ತಿರುವ ಪ್ರಯಾಣಿಕರ ಸಂಖ್ಯೆ ಇದಕ್ಕೆ ಪ್ರಮುಖ ಕಾರಣ.
ದುಬೈ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ (DXB) ಇತ್ತೀಚೆಗೆ ಅತ್ಯಂತ ಹೆಚ್ಚು ಬ್ಯುಸಿಯಾಗಿರುವ, ಜಗತ್ತಿನ ಪ್ರಮುಖ ವಿಮಾನ ನಿಲ್ದಾಣಗಳಲ್ಲಿ ಒಂದಾಗಿತ್ತು. ಆದರೆ ಇದನ್ನು ಮುಚ್ಚಲಾಗುತ್ತಿದೆ. ಮುಂದಿನ 10 ವರ್ಷಗಳಲ್ಲಿ ಇದನ್ನು ಸಂಫೂರ್ಣವಾಗಿ ಮುಚ್ಚಲಾಗುತ್ತಿದೆ ಎಂಬುದು ಈಗ ದೊಡ್ಡ ಸುದ್ದಿಯಾಗಿದೆ. ಅದಕ್ಕೆ ಕಾರಣ 2034ರೊಳಗಾಗಿ ಎಲ್ಲಾ ಪ್ರಯಾಣಿಕ ಹಾಗೂ ಸರಕು ವಿಮಾನಗಳನ್ನು ದುಬೈದ ದಕ್ಷಿಣ ಭಾಗದಲ್ಲಿರುವ ಅಲ್ ಮಕ್ತೌಮ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ (DWC) ಕಡೆಗೆ ವರ್ಗಾಯಿಸಲಾಗುತ್ತದೆ.
ಮುಚ್ಚಲು ಕಾರಣವೇನು?
ದುಬೈ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಈಗ ತುಂಬಾ ಜನನಿಬಿಡವಾಗಿದೆ. 2024ರಲ್ಲಿ ಸುಮಾರು 92.3 ಮಿಲಿಯನ್ ಜನರು ಈ ವಿಮಾನ ನಿಲ್ದಾಣವನ್ನು ಬಳಸಿದ್ದಾರೆ. ನಿಲ್ದಾಣದ ಸುತ್ತಮುತ್ತಲು ಮನೆಗಳು, ಇತರ ಪ್ರದೇಶಗಳು ಮತ್ತು ಹೆದ್ದಾರಿ ನಿರ್ಬಂಧಗಳು ಇದ್ದುದರಿಂದ, ಮತ್ತಷ್ಟು ವಿಸ್ತಾರ ಮಾಡಲು ಸಾಧ್ಯವಿಲ್ಲ. DWC ಈಗಾಗಲೇ ಆರಂಭವಾಗಿದೆ, ಆದರೆ ಈಗ ಅದು ಸಾಮಾನ್ಯವಾಗಿ ಸರಕು ಸಾಗಣೆಗಾಗಿ ಮಾತ್ರ ಬಳಸಲಾಗುತ್ತಿದೆ.
ದೊಡ್ಡ ಯೋಜನೆ, ಭಾರಿ ವೆಚ್ಚ:
ಈ ಯೋಜನೆಯು ಸುಮಾರು 35 ಶತಕೋಟಿ ಡಾಲರ್ ವೆಚ್ಚದ ದೊಡ್ಡ ಯೋಜನೆಯಾಗಿದೆ. ಅಲ್ ಮಕ್ತೌಮ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಪ್ರತಿ ವರ್ಷ 260 ಮಿಲಿಯನ್ (26 ಕೋಟಿ) ಜನ ಪ್ರಯಾಣಿಕರಿಗೆ ಸೇವೆ ನೀಡುವ ಉದ್ದೇಶದಿಂದ ನಿರ್ಮಿಸಲಾಗುತ್ತಿದೆ. ಇದು ಇಂದಿನ ದುಬೈ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕಿಂತ ಮೂರು ಪಟ್ಟು ದೊಡ್ಡದಾಗಿರಲಿದೆ! ಮೊದಲ ಹಂತದ ಕಾಮಗಾರಿ ಪ್ರಾರಂಭವಾಗಿದ್ದು, ಈ ಹಂತದಲ್ಲಿ, ವರ್ಷಕ್ಕೆ 150 ಮಿಲಿಯನ್ ಜನರನ್ನು ಸೇವೆಗೊಳಿಸುವ ಟರ್ಮಿನಲ್ ಕಟ್ಟಲಾಗುತ್ತಿದೆ
ಮುಂದಿನ ಯೋಜನೆಯ ಪ್ರಕಾರ, ಹೊಸ ವಿಮಾನ ನಿಲ್ದಾಣದಲ್ಲಿ ಇವುಗಳಿರುತ್ತವೆ
5 ರನ್‌ವೇಗಳು (ವಿಮಾನ ಇಳಿಯಲು-ಹಾರಲು)
400 ಗೇಟ್‌ಗಳು
260 ಮಿಲಿಯನ್ ಜನರಿಗೆ ಸೇವೆ ನೀಡುವ ಸಾಮರ್ಥ್ಯ
ನೂತನ, ಅತಿದೊಡ್ಡ ಟರ್ಮಿನಲ್ 2032 ರಲ್ಲಿ ಓಪನ್
ಈ ಯೋಜನೆಯ ಸಂಪೂರ್ಣ ಅಭಿವೃದ್ಧಿ 2050 ರೊಳಗಾಗಿ ಪೂರ್ಣ
ಡಿಜಿಟಲ್ ಚೆಕ್-ಇನ್ ವ್ಯವಸ್ಥೆ
ವೇಗವಾದ ಸಂಪರ್ಕ ವ್ಯವಸ್ಥೆ
ಹಳೆಯ DXB ಮುಂದೆ ಏನಾಗುತ್ತದೆ?
DXB ವಿಮಾನ ನಿಲ್ದಾಣ 1960ರಲ್ಲಿ ಆರಂಭವಾಯಿತು. ಆದರೆ, ಹೊಸ ವಿಮಾನ ನಿಲ್ದಾಣ DWC ಪೂರ್ಣವಾಗಿ ಸಜ್ಜಾಗುತ್ತಿದ್ದಂತೆ, DXB ತನ್ನ ಕಾರ್ಯಭಾರವನ್ನು ಸಂಪೂರ್ಣವಾಗಿ ನಿಲ್ಲಿಸಲಿದೆ. ಆಗ ಅದರ ಸುತ್ತಲಿನ ಜಾಗವನ್ನು ರಿಯಲ್ ಎಸ್ಟೇಟ್ (ಆಸ್ತಿ ವ್ಯಾಪಾರ) ಉದ್ದೇಶಕ್ಕಾಗಿ ಬಳಸಲಾಗಬಹುದು
ಯುಕೆ ಪ್ರಯಾಣಿಕರ ಮೇಲೆ ಪರಿಣಾಮ:
ದುಬೈ ಯುಕೆ ಜನರಿಗೆ ಬಹಳ ಜನಪ್ರಿಯ ರಜೆ ತಾಣವಾಗಿದೆ. ಪ್ರತಿದಿನ ಸುಮಾರು 17,000 ಯುಕೆ ನಿವಾಸಿಗಳು ದುಬೈಗೆ ಬರುತ್ತಾರೆ. ಪ್ರಸ್ತುತ ಎಮಿರೇಟ್ಸ್, ಬ್ರಿಟಿಷ್ ಏರ್‌ವೇಸ್‌ಗಳು DXB ನಿಂದ ವಿಮಾನಗಳನ್ನು ನಿರ್ವಹಿಸುತ್ತಿವೆ. ಆದರೆ, ನಿಧಾನವಾಗಿ ಎಲ್ಲಾ ಸೇವೆಗಳನ್ನು DWCಗೆ ಸ್ಥಳಾಂತರಿಸಲಾಗುತ್ತದೆ.