ದುಬೈ ಏರ್ಪೋರ್ಟ್ನಲ್ಲಿ ಕ್ಷಿಪಣಿ ದಾಳಿ: ಸ್ಫೋಟದ ನಡುವೆ ಸಿಲುಕಿ ಪಾರಾದ ಬ್ಯಾಡ್ಮಿಂಟನ್ ತಾರೆ ಪಿ.ವಿ. ಸಿಂಧು!

ಹೊಸದಿಲ್ಲಿ : ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ಮತ್ತು ಇರಾನ್ ದಾಳಿ ಹಿನ್ನೆಲೆ ದುಬೈ ವಿಮಾನ ನಿಲ್ದಾಣದಲ್ಲಿ ಸಿಲುಕಿಕೊಂಡಿದ್ದ ಒಲಿಂಪಿಕ್ ಪದಕ ವಿಜೇತೆ ಬ್ಯಾಡ್ಮಿಂಟನ್ ತಾರೆ ಪಿವಿ ಸಿಂಧು ಭಯಾನಕ ಅನುಭವವನ್ನು ಹಂಚಿಕೊಂಡಿದ್ದಾರೆ.
ದುಬೈ ವಿಮಾನ ನಿಲ್ದಾಣದಲ್ಲಿ ನಾವು ಆಶ್ರಯ ಪಡೆದಿದ್ದ ಸ್ಥಳದ ಬಳಿ ಸ್ಫೋಟ ಸಂಭವಿಸಿದೆ. ಆ ಕ್ಷಣಗಳು ಅತ್ಯಂತ ಭಯಾನಕವಾಗಿದ್ದವು ಎಂದು ಸಿಂಧು ಹೇಳಿದ್ದಾರೆ.
ಇಂಗ್ಲೆಂಡ್ನ ಬರ್ಮಿಂಗ್ಲಾಮ್ನಲ್ಲಿ ಗದಿಯಾಗಿದ್ದ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಭಾಗವಹಿಸಲು ಬೆಂಗಳೂರಿನಿಂದ ನಾವು ತೆರಳುತ್ತಿದ್ದೆವು. ವಿಮಾನವು ದುಬೈನಲ್ಲಿ ಇಳಿಯುತ್ತಿದ್ದಂತೆ ವಿಮಾನ ನಿಲ್ದಾಣ ಗುರಿಯಾಗಿಸಿ ಕ್ಷಿಪಣಿ ದಾಳಿಗಳು ಪ್ರಾರಂಭವಾದವು. ಸ್ವಲ್ಪ ಸಮಯದಲ್ಲೇ ವಾಯುಪ್ರದೇಶವನ್ನು ಮುಚ್ಚಲಾಗಿದೆ ಎಂದು ಘೋಷಿಸಲಾಯಿತು. ಆಗಸದಲ್ಲೇ ಕ್ಷಿಪಣಿಗಳನ್ನು ಹೊಡೆದುರುಳಿಸುವ ದೃಶ್ಯಗಳು ಭಯಾನಕವಾಗಿದ್ದವು ಎಂದು ಪಿವಿ ಸಿಂಧು ಹೇಳಿದ್ದಾರೆ.ನಾವೆಲ್ಲರೂ ಈಗ ಸುರಕ್ಷಿತರಾಗಿದ್ದೇವೆ ಮತ್ತು ಹೆಚ್ಚು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ, ದುಬೈ ವಿಮಾನ ನಿಲ್ದಾಣದ ಸಿಬ್ಬಂದಿ ಮತ್ತು ದುಬೈ ಅಧಿಕಾರಿಗಳು ಮತ್ತು ದುಬೈನಲ್ಲಿರುವ ಭಾರತೀಯ ಹೈಕಮಿಷನ್ ಅಧಿಕಾರಿಗಳಿಗೆ ಧನ್ಯವಾದಗಳು ಎಂದು ಪಿವಿ ಸಿಂಧು ಹೇಳಿದ್ದಾರೆ.
