ಗೂಗಲ್ ಮ್ಯಾಪ್ ತೋರಿದ ದಾರಿ: ಕುಡಿದ ಮತ್ತಲ್ಲಿ ರೈಲ್ವೆ ಹಳಿಗಳ ಮೇಲೆ ಕಾರು ಚಲಾಯಿಸಿದ ಭೂಪ!

ಬಿಹಾರ :ಕುಡಿದ ಮತ್ತಲ್ಲಿ ವ್ಯಕ್ತಿಯೋರ್ವ ‘ಗೂಗಲ್ ಮ್ಯಾಪ್’ ನೋಡ್ಕೊಂಡು ರೈಲ್ವೆ ಹಳಿಗಳ ಮೇಲೆ ವಾಹನ ಚಲಾಯಿಸಿ ಎಡವಟ್ಟು ಮಾಡಿಕೊಂಡಿದ್ದಾನೆ.

ಬಿಹಾರದ ಗೋಪಾಲ್ಗಂಜ್ನಲ್ಲಿ ಈ ಘಟನೆ ನಡೆದಿದೆ. ಪಾರ್ಟಿಯಿಂದ ಹಿಂದಿರುಗುವಾಗ ವ್ಯಕ್ತಿಯೊಬ್ಬರು ಗೂಗಲ್ ಮ್ಯಾಪ್ ನೋಡಿಕೊಂಡು ಗಂಭೀರ ತೊಂದರೆಗೆ ಸಿಲುಕಿದ್ದಾರೆ.
ಪೂರ್ಣ ವಿಳಾಸವನ್ನು ನಮೂದಿಸುವ ಬದಲು, ಅವನು ತನ್ನ ಗ್ರಾಮದ ಹೆಸರನ್ನು “ಗೋಪಾಲ್ಪುರ” ಎಂದು ಟೈಪ್ ಮಾಡಿ ಅಪ್ಲಿಕೇಶನ್ನ ನಿರ್ದೇಶನಗಳ ಆಧಾರದ ಮೇಲೆ ಚಾಲನೆ ಮಾಡಲು ಪ್ರಾರಂಭಿಸಿದ್ದರಿಂದ ಆ ವ್ಯಕ್ತಿ ಸಾವಿನಿಂದ ಪಾರಾಗಿದ್ದಾನೆ. ಘಟನೆ ನಡೆದಾಗ ವ್ಯಕ್ತಿ ಮದ್ಯದ ಅಮಲಿನಲ್ಲಿದ್ದ ಎಂದು ವರದಿಯಾಗಿದೆ.
