ವಡೋದರದಲ್ಲಿ ಪಾನಮತ್ತ ಕಾನೂನು ವಿದ್ಯಾರ್ಥಿಯ : ಮಹಿಳೆ ಸಾವು, ನಾಲ್ವರು ಗಾಯ

ಗುಜರಾತ್‌ನ ವಡೋದರದ ಕರೇಲಿಬಾಗ್ ಪ್ರದೇಶದಲ್ಲಿ ಪಾನಮತ್ತನಾಗಿ ಕಾರು ಚಲಾಯಿಸಿದ ಕಾನೂನು ವಿದ್ಯಾರ್ಥಿಯ ಅಜಾಗರೂಕತೆಯಿಂದ ಭೀಕರ ಅಪಘಾತ ಸಂಭವಿಸಿದ್ದು, ಹೆಮಾಲಿಬೆನ್ ಪಟೇಲ್ ಎಂಬ ಮಹಿಳೆ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮಧ್ಯರಾತ್ರಿ 12.30ರ ಸುಮಾರಿಗೆ ನಿಯಂತ್ರಣ ತಪ್ಪಿದ ಕಾರು, ದ್ವಿಚಕ್ರ ವಾಹನಗಳಿಗೆ ಡಿಕ್ಕಿ ಹೊಡೆದು ನಾಲ್ವರಿಗೆ ಗಾಯಗಳಾಗಿವೆ. ಅಪಘಾತದ ನಂತರ, 20 ವರ್ಷದ ವಿದ್ಯಾರ್ಥಿ ರಕ್ಷಿತ್ ಚೌರಾಸಿಯಾ ಪಶ್ಚಾತ್ತಾಪವಿಲ್ಲದೆ ಸಾರ್ವಜನಿಕರ ಎದುರೇ ದುರ್ವರ್ತನೆ ತೋರಿಸಿದ್ದಾನೆ. “ಇನ್ನೊಂದು ಸುತ್ತು, ಇನ್ನೊಂದು ಸುತ್ತು” ಎಂದು ಕೂಗುತ್ತಾ, ತೀವ್ರವಾಗಿ ಹಾನಿಗೊಳಗಾದ ಕಾರಿನಿಂದ ಹೊರಬಂದ ಅವನ ವರ್ತನೆಯು ಜನರ ಆಕ್ರೋಶಕ್ಕೆ ಕಾರಣವಾಯಿತು. ಜನರು ಆತನನ್ನು ಹೊಡೆದು ಪೊಲೀಸರಿಗೆ ಒಪ್ಪಿಸಿದ್ದಾರೆ. ಇದೀಗ ಪೊಲೀಸರು ಚೌರಾಸಿಯಾ ಮತ್ತು ಅವನ ಸಹಚರ ಪ್ರಾಂಶು ಚೌಹಾಣ್ ಅವರನ್ನು ವಶಕ್ಕೆ ಪಡೆದು ತನಿಖೆ ಮುಂದುವರಿಸಿದ್ದಾರೆ.

