ಕೋಸ್ಟರಿಕಾದ ಜೈಲಿನಲ್ಲಿ ಬೆಕ್ಕಿನಿಂದ ಮಾದಕವಸ್ತು ಸಾಗಣೆ!

ಕೋಸ್ಟರಿಕಾ: ಮಾದಕವಸ್ತುಗಳನ್ನು ಕಳ್ಳಸಾಗಣೆ ಮಾಡುವುದರಲ್ಲಿ ಕೋಸ್ಟರಿಕಾ ಕುಖ್ಯಾತವಾಗಿದೆ. ಇತ್ತೀಚಿನ ಪ್ರಕರಣವೊಂದರಲ್ಲಿ, ಅಲ್ಲಿನ ಜೈಲು ಅಧಿಕಾರಿಗಳು ದೇಹದ ಸುತ್ತಲೂ ಮಾದಕ ವಸ್ತುಗಳಿಂದ ಸುತ್ತಿದ್ದ ಬೆಕ್ಕನ್ನು ಹಿಡಿದಿದ್ದಾರೆ.
ಕೋಸ್ಟರಿಕಾದ ಪೊಕೊಸಿ ಸೆರೆಮನೆಯ ಜೈಲು ಸಿಬಂದಿ ಅಸಾಮಾನ್ಯ ಎಂಬಂತೆ ಬೆಕ್ಕು ಚಲಿಸುತ್ತಿರುವುದನ್ನು ಗಮನಿಸಿದ್ದು ಹತ್ತಿರದಿಂದ ನೋಡಿದಾಗ, ಕಪ್ಪು-ಬಿಳಿ ವರ್ಣದ ಬೆಕ್ಕನ್ನು ಅದರ ತುಪ್ಪುಳ ದಂತಿರುವ ದೇಹಕ್ಕೆ ಬಿಗಿಯಾಗಿ ಸುತ್ತಿದ ಎರಡು ಪ್ಯಾಕೆಟ್‌ಗಳನ್ನು ಕಟ್ಟಿರುವುದನ್ನು ಗಮನಿಸಿದರು.
ಬೆಕ್ಕು ಮಾದಕವಸ್ತುಗಳನ್ನು ಹೊತ್ತೊಯ್ಯುತ್ತಿತ್ತು ಎನ್ನುವುದು ಕಂಡು ಬಂದಿದೆ.
ಸೇಸ್‌ಡಾಟ್‌ಕಾಮ್ ಪ್ರಕಾರ, ಬೆಕ್ಕಿನ ಮರಿ 235 ಗ್ರಾಂ ಗಿಂತ ಹೆಚ್ಚು ಗಾಂಜಾ, 68 ಗ್ರಾಂ ಕ್ರ್ಯಾಕ್ ಪೇಸ್ಟ್ ಮತ್ತು ಕೆಲವು ಪ್ರಮಾಣದ ರೋಲಿಂಗ್ ಪೇಪರ್‌ಗಳ ಬಂಡಲ್‌ಗಳನ್ನು ಸಾಗಿಸುತ್ತಿತ್ತು. ಮಾದಕ ವಸ್ತುಗಳನ್ನು ತತ್ ಕ್ಷಣವೇ ವಶಕ್ಕೆ ಪಡೆಯಲಾಯಿತು ಮತ್ತು ಬೆಕ್ಕನ್ನು ತನಿಖೆಗಾಗಿ ಕೋಸ್ಟರಿಕಾದ ರಾಷ್ಟ್ರೀಯ ಪ್ರಾಣಿ ಆರೋಗ್ಯ ಸೇವೆಗೆ ಹಸ್ತಾಂತರಿಸಲಾಗಿದೆ.
ಈ ಘಟನೆಯು ಪ್ರಾಣಿಯು ಔಷಧಿಗಳನ್ನು ಹೇಗೆ ಸಾಗಿಸಿತು ಮತ್ತು ವಿತರಣೆಗೆ ಕಾರಣವಾದ ಜನರ ಬಗ್ಗೆ ತನಿಖೆಗೆ ಆದೇಶಿಸಲಾಗಿದೆ.