ದುಬೈ ವಿಮಾನ ನಿಲ್ದಾಣದ ಬಳಿ ಡ್ರೋನ್ ಪತನ: ನಾಲ್ವರಿಗೆ ಗಾಯ; ವಿಮಾನ ಸಂಚಾರದಲ್ಲಿ ವ್ಯತ್ಯಯ

ದುಬೈ: ದುಬೈ ವಿಮಾನ ನಿಲ್ದಾಣದ ಸಮೀಪ ಎರಡು ಡೋನ್ ಗಳು ಬಿದ್ದ ಪರಿಣಾಮ ಓರ್ವ ಭಾರತೀಯ ಸೇರಿ ನಾಲ್ವರು ಗಾಯಗೊಂಡಿದ್ದಾರೆ ಎಂದು ದುಬೈ ಮಾಧ್ಯಮ ಕಚೇರಿ ಬುಧವಾರ ತಿಳಿಸಿದೆ ಎಂದು aljazeera.com ವರದಿ ಮಾಡಿದೆ.
ಇಸ್ರೇಲ್-ಇರಾನ್ ಯುದ್ಧದ ನಡುವೆ ಈ ಘಟನೆ ನಡೆದಿದೆ. ಆದರೆ ವಿಮಾನ ಕಾರ್ಯಾಚರಣೆಗೆ ಯಾವುದೇ ಅಡ್ಡಿಯಾಗಿಲ್ಲ. ‘ದುಬೈ ವಿಮಾನ ನಿಲ್ದಾಣದಲ್ಲಿ ವಿಮಾನ ಸಂಚಾರ ಸಾಮಾನ್ಯವಾಗಿ ನಡೆಯುತ್ತಿದೆ’ ಎಂದು ದುಬೈ ಮಾಧ್ಯಮ ಕಚೇರಿ ಸ್ಪಷ್ಟಪಡಿಸಿದೆ.
