Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಕರ್ತವ್ಯದ ವೇಳೆಯೇ ಚಾಲಕನಿಂದ ಬಸ್ ನಿಲ್ಲಿಸಿ ನಮಾಜ್ – ಸಚಿವರ ಕ್ರಮಕ್ಕೆ ಸೂಚನೆ

Spread the love

ಹಾವೇರಿ :ಪ್ರಯಾಣಿಕರನ್ನು ಕರೆದೊಯ್ಯುತ್ತಿರುವ ವೇಳೆ ರಸ್ತೆ ಬದಿ ಬಸ್ ನಿಲ್ಲಿಸಿ ಬಸ್ಸಿನೊಳಗೆ ಚಾಲಕ ನಮಾಜ್ ಮಾಡಿದ ಘಟನೆ ನಡೆದಿದ್ದು, ಇದೀಗ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಹಾನಗಲ್ಲನಿಂದ ವಿಶಾಲಗಡ್ ಗೆ ತೆರಳುತ್ತಿದ್ದ ಬಸ್ ನಲ್ಲಿ ಹುಬ್ಬಳ್ಳಿ ಮತ್ತು ಹಾವೇರಿ ಮಾರ್ಗ ಮಧ್ಯದಲ್ಲಿ ಬಸ್ ನಿಲ್ಲಿಸಿ ಮಂಗಳವಾರ ಸಂಜೆ ಡ್ರೈವರ್ ಕಂ ಕಂಡಕ್ಟರ್ ಎ.ಆರ್.ಮುಲ್ಲಾ ಎಂಬುವವರು ನಮಾಜ್ ಮಾಡಿದ್ದಾರೆ.ಪ್ರಯಾಣಿಕರು ನಮಾಜ್ ಮಾಡುವ ದೃಶ್ಯ ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹರಿ ಬಿಟ್ಟಿದ್ದಾರೆ.ಕರ್ತವ್ಯದ ಅವಧಿಯಲ್ಲಿಯೇ ಡ್ರೈವರ್ ಕಂ ಕಂಡಕ್ಟರ್ ನಡೆಗೆ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ.

ಹಾವೇರಿಯಲ್ಲಿ ರಸ್ತೆ ಮಧ್ಯೆ ಬಸ್ ನಿಲ್ಲಿಸಿ ಡ್ರೈವರ್ ಕಂ ಕಂಡಕ್ಟರ್ ನಮಾಜ್ ಮಾಡಿದ ವೀಡಿಯೋ ವೈರಲ್ ಆದ ಬೆನ್ನಲ್ಲೇ ತನಿಖೆ ನಡೆಸಿ ಕ್ರಮ ಕೈಗೊಳ್ಳುವಂತೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಆದೇಶಿಸಿದ್ದಾರೆ.
ಈ ಕುರಿತು ಹುಬ್ಬಳ್ಳಿಯ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವ್ಯವಸ್ಥಾಪಕರಿಗೆ ಪತ್ರ ಬರೆದ ರಾಮಲಿಂಗಾ ರೆಡ್ಡಿ, ಸೂಕ್ತ ತನಿಖೆ ನಡೆಸಲು ಸೂಚನೆ ನೀಡಿದ್ದಾರೆ.


Spread the love
Share:

administrator

Leave a Reply

Your email address will not be published. Required fields are marked *