Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಪುತ್ತೂರಿನ ಡಾ. ನಿನಾದ್ ಲಸ್ರಾದೋ ಫೋರ್ಬ್ಸ್ ಏಶಿಯಾ ‘30 ಅಡರ್ 30’ ವಿಜ್ಞಾನಿಗಳ ಪಟ್ಟಿಯಲ್ಲಿ ಆಯ್ಕೆ

Spread the love

ಪುತ್ತೂರು:  ಪುತ್ತೂರು ಇಲ್ಲಿನ ಡಾ. ನಿನಾದ್ ಲಸ್ರಾದೋ ಅವರು ಫೋರ್ಬ್ಸ್ ಮ್ಯಾಗಜಿನ್ ಏಶಿಯಾ 2025 ಆವೃತ್ತಿಯಲ್ಲಿ 30 ವರುಷಗಳ ಒಳಗಿನ 30 ಜಾಗತಿಕ ಯುವ ವಿಜ್ಞಾನಿಗಳ ಪಟ್ಟಿಯಲ್ಲಿ ಆಯ್ಕೆಯಾಗಿದ್ದಾರೆ.

ಇವರು ತನ್ನ ಪಿ.ಹೆಚ್.ಡಿ ಪದವಿಯನ್ನು ತನ್ನ 24ನೇ ವಯಸ್ಸಿನಲ್ಲಿ ಅಮೇರಿಕಾದ ನೆಬ್ರಾಸ್ಕ ವಿಶ್ವವಿದ್ಯಾನಿಲಯದಲ್ಲಿ ವೈರಲ್ ಇಮ್ಯುನೋಲಜಿಯಲ್ಲಿ ಪಡೆದ ನಂತರ ಹಾರ್ವಾರ್ಡ್ ಮೆಡಿಕಲ್ ಸ್ಕೂಲ್‌ನಲ್ಲಿ ಸಂಶೋಧನೆಯನ್ನು ಮುಂದುವರಿಸಿರುತ್ತಾರೆ. ಇವರ 20ಕ್ಕೂ ಹೆಚ್ಚು ಸಂಶೋಧನಾ ಪ್ರಬಂಧಗಳು ಪ್ರತಿಷ್ಠಿತ ಅಂತರಾಷ್ಟ್ರೀಯ ವೈಜ್ಞಾನಿಕ ಜರ್ನಲ್‌ಗಳಲ್ಲಿ ಪ್ರಕಟಿಗೊಂಡಿವೆ.
ತಮ್ಮ ವೃತ್ತಿ ಜೀವನದಲ್ಲಿ ಹಲವಾರು ಪ್ರಶಸ್ತಿ ಮತ್ತು ಫೆಲೋಶಿಪ್‌ಗಳನ್ನು ಪಡೆದಿರುವ ಅವರ ನೇತೃತ್ವದ ತಂಡ ಕೊರೋನಾ ರೋಗದ ಸಂದರ್ಭದಲ್ಲಿ ನಡೆಸಿದ ಸಂಶೋಧನೆಗೆ ಅಮೇರಿಕಾದ ಶ್ವೇತಭವನದಿಂದ ಪ್ರಶಂಸೆಯನ್ನು ಪಡೆದಿದ್ದರು.ಪ್ರಾಥಮಿಕ ಶಿಕ್ಷಣವನ್ನು ಪುತ್ತೂರಿನ ಸುದಾನ ವಸತಿಯುತ ಶಾಲೆ, ಪಿ.ಯು.ಸಿ. ವಿದ್ಯಾಭ್ಯಾಸವನ್ನು ಅಂಬಿಕಾ ಪದವಿ ಪೂರ್ವ ಕಾಲೇಜು ಮತ್ತು ಪದವಿಯನ್ನು ಸಂತ ಅಲೋಶಿಯಸ್ ಕಾಲೇಜು ಮಂಗಳೂರು ಇಲ್ಲಿ ಪಡೆದಿರುವ ಡಾ. ನಿನಾದ್ ಲಸ್ರಾದೋರವರು, ಪ್ರಕೃತ ನೆಹರೂ ನಗರದ ನಿವಾಸಿ, ವಿಟ್ಲ ಮೂಲದ ಶ್ರೀಮತಿ ಸ್ಟೆಲ್ಲಾ ಸಿಕ್ವೇರಾ ಹಾಗೂ ಪಶುಪಾಲನಾ ಇಲಾಖೆಯ ನಿವೃತ್ತ ಉಪನಿರ್ದೇಶಕ ಡಾ. ಹೆಚ್.ಆರ್. ಲಸ್ರಾದೋ ಇವರ ಪುತ್ರ. 


Spread the love
Share:

administrator

Leave a Reply

Your email address will not be published. Required fields are marked *