ವೈದ್ಯೆ ಕೃತಿಕಾ ರೆಡ್ಡಿ ಕೊಲೆ ಪ್ರಕರಣ: ‘ಪ್ರೇಯಸಿಯನ್ನು ಮೆಚ್ಚಿಸಲು ಪತ್ನಿಯನ್ನು ಕೊಂದೆ’; ಕೊಲೆ ರಹಸ್ಯ ಬಯಲು ಮಾಡಿದ ಪತಿ ಮಹೇಂದ್ರ ರೆಡ್ಡಿ

ಬೆಂಗಳೂರು: ವೈದ್ಯೆ ಕೃತಿಕಾ ರೆಡ್ಡಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರೇಯಿಸಿಯನ್ನು ಮೆಚ್ಚಿಸಲು ಆರೋಪಿ ಮಹೇಂದ್ರ ರೆಡ್ಡಿ ಪತ್ನಿಯನ್ನು ಕೊಲೆ ಮಾಡಿದ್ದ ಎಂದು ತನಿಖೆ ವೇಳೆ ತಿಳಿದುಬಂದಿದೆ.

ಪೊಲೀಸರ ಮಾಹಿತಿ ಪ್ರಕಾರ, ಆರೋಪಿ ಮಹೇಂದ್ರ ರೆಡ್ಡಿ ತನ್ನ ಪ್ರೇಯಸಿಯನ್ನು ಮೆಚ್ಚಿಸಲು ಪತ್ನಿ ಕೃತಿಕಾ ರೆಡ್ಡಿ ಕೊಲೆ ಮಾಡಿದ್ದಾನೆ ಎಂಬ ಸ್ಫೋಟಕ ಮಾಹಿತಿಯನ್ನು ಬಯಲಿಗೆಳೆದಿದ್ದಾರೆ. ಆರೋಪಿ ಕೊಲೆ ಬಳಿಕ ತನ್ನ ಪ್ರೇಯಸಿಗೆ ` I Have Killed‘ ಎಂದು ಮೆಸೇಜ್ ಮಾಡಿದ್ದ. ಪ್ರೇಯಸಿಯು ಮಹೇಂದ್ರ ರೆಡ್ಡಿಯ ವಾಟ್ಸಪ್ ಹಾಗೂ ಮೊಬೈಲ್ ನಂಬರ್‌ನ್ನು ಬ್ಲಾಕ್ ಮಾಡಿದ್ದಳು. ಹೀಗಾಗಿ ಫೋನ್‌ಪೇನಲ್ಲಿ ಮೆಸೇಜ್ ಮಾಡಿದ್ದ ಎಂದು ತನಿಖೆ ವೇಳೆ ಬಾಯ್ಬಿಟ್ಟಿದ್ದಾನೆ
ಯಸಿ ಕಡೆಯಿಂದ ಯಾವುದೇ ಪ್ರತಿಕ್ರಿಯೆ ಇಲ್ಲದಿದ್ದರೂ ಕೂಡ ಆರೋಪಿ ನಿರಂತರವಾಗಿ ಮೆಸೇಜ್ ಮಾಡಿರುವುದಾಗಿ ಪೊಲೀಸರ ಮುಂದೆ ಒಪ್ಪಿಕೊಂಡಿದ್ದಾನೆ.
ಏನಿದು ಪ್ರಕರಣ?
ಪತಿ ಮಹೇಂದ್ರ ರೆಡ್ಡಿಯಿಂದ ಕೊಲೆಯಾದ ಪತ್ನಿ ಕೃತಿಕಾ ರೆಡ್ಡಿ ಅದೆಷ್ಟೋ ಕನಸು ಕಟ್ಟಿಕೊಂಡು ಮದುವೆಯಾಗಿದ್ಲು. ತಾನು ವೈದ್ಯೆಯಾಗಿದ್ದು, ಜನರ ಜೀವ ಉಳಿಸುವ ದೇವತೆಯಾಗಿದ್ಲು. ಕೃತಿಕಾ-ಮಹೇಂದ್ರರ ಮದುವೆ ಭಾರಿ ಅದ್ಧೂರಿಯಾಗಿ ನಡೆದಿತ್ತು. ಇನ್ನು, ಕೃತಿಕಾ ಆಗರ್ಭ ಶ್ರೀಮಂತೆಯಾಗಿದ್ದಳು. ಆಕೆಯ ತಂದೆ ಮುನಿರೆಡ್ಡಿ ನೂರಾರು ಕೋಟಿಯ ಒಡೆಯರಾಗಿದ್ದಾರೆ. ಮಗಳ ಮದುವೆಯನ್ನ ಅದ್ಧೂರಿಯಾಗಿ ಮಾಡಿಸಿದ್ರು. 2024ರ ಮೇ 26ರಂದು ಹೊಸಜೀವನಕ್ಕೆ ಕಾಲಿಟ್ಟಿದ್ದರು. ಆದ್ರೆ ಮದುವೆಯಾಗಿ ಕೆಲವೇ ತಿಂಗಳಲ್ಲಿ ವೈದ್ಯ ರಕ್ಕಸನಾಗಿ, ಕೃತಿಕಾಳನ್ನ ಕೊಂದಿದ್ದಾನೆ.