Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ವರದಕ್ಷಿಣೆ ಸಾವಿನ ಪ್ರಕರಣ: ‘ಬ್ಲ್ಯಾಕ್ ಕ್ಯಾಟ್ ಕಮಾಂಡೋ’ಗೆ ಸುಪ್ರೀಂ ಕೋರ್ಟ್‌ನಿಂದ ಕ್ಲಾಸ್, ಜಾಮೀನು ವಿನಾಯಿತಿ ಮನವಿ ವಜಾ

Spread the love

40+ Courtroom Judge Lawyers India Stock Photos, Pictures & Royalty-Free  Images - iStock

ನವದೆಹಲಿ: ವರದಕ್ಷಿಣೆ ಸಾವಿನ ಪ್ರಕರಣದಲ್ಲಿ ಶರಣಾಗುವುದರಿಂದ ವಿನಾಯಿತಿ ನೀಡುವಂತೆ ಕೋರಿ ಆಪರೇಷನ್ ಸಿಂಧೂರ್ ನಲ್ಲಿ (Operation Sindhoor) ಭಾಗವಹಿಸಿದ್ದ ಬ್ಲ್ಯಾಕ್ ಕ್ಯಾಟ್ ಕಮಾಂಡೋ ಸಲ್ಲಿಸಿದ್ದ ಮನವಿಯನ್ನು ಸುಪ್ರೀಂ ಕೋರ್ಟ್ ಮಂಗಳವಾರ ವಜಾ ಮಾಡಿದ್ದು, ಅರ್ಜಿದಾರರಿಗೆ ಕ್ಲಾಸ್‌ ತೆಗೆದುಕೊಂಡಿದೆ.

ವಿನಾಯಿತಿ ಕೊಡಲ್ಲ ಎಂದ ಕೋರ್ಟ್‌
ನ್ಯಾಯಮೂರ್ತಿ ಉಜ್ಜಲ್ ಭುಯಾನ್ ಮತ್ತು ನ್ಯಾಯಮೂರ್ತಿ ವಿನೋದ್ ಚಂದ್ರನ್ ಅವರನ್ನೊಳಗೊಂಡ ಸುಪ್ರೀಂ ಕೋರ್ಟ್ ಪೀಠವು ಅರ್ಜಿದಾರರ ಹತ್ತು ವರ್ಷಗಳ ಕಠಿಣ ಜೈಲು ಶಿಕ್ಷೆಯನ್ನು ಎತ್ತಿಹಿಡಿದಿದ್ದು, ಆಪರೇಷನ್ ಸಿಂಧೂರ್ನಲ್ಲಿ ಭಾಗವಹಿಸುವುದರಿಂದ ಮನೆಯಲ್ಲಿ ದೌರ್ಜನ್ಯ ಎಸಗಲು ಲೈಸೆನ್ಸ್‌ ಸಿಗುವುದಿಲ್ಲ. ಹಾಗಾಗಿ ವಿನಾಯಿತಿ ಕೊಡಲು ಸಾಧ್ಯವಿಲ್ಲ ಎಂದಿದೆ.

ವಿನಾಯಿತಿ ಅಸಾಧ್ಯ ಎಂದು ನ್ಯಾಯಾಲಯ ಹೇಳಿದ ನಂತರ ಸಹ ಅರ್ಜಿದಾರರ ಪರ ವಕೀಲರು ಬಹಳ ಪ್ರಯತ್ನ ಮಾಡಿದ್ದಾರೆ. ಆದರೆ ಅವರು ವಾದವು ನ್ಯಾಯಪೀಠದ ಮೇಲೆ ಯಾವುದೇ ಪರಿಣಾಮ ಬೀರಲಿಲ್ಲ. ಅದರ ಬದಲು ಮನೆಯಲ್ಲಿ ದೌರ್ಜನ್ಯ ಎಸಗುವುದರಿಂದ ನಿಮಗೆ ವಿನಾಯಿತಿ ನೀಡುವುದಿಲ್ಲ. ನೀವು ದೈಹಿಕವಾಗಿ ಎಷ್ಟು ಸದೃಢರಾಗಿದ್ದೀರಿ ಮತ್ತು ನೀವು ನಿಮ್ಮ ಹೆಂಡತಿಯನ್ನು ಕತ್ತು ಹಿಸುಕಿ ಕೊಂದಿದ್ದೀರಿ. ಹಾಗಾಗಿ ಯಾವುದೇ ಕಾರಣಕ್ಕೂ ವಿನಾಯಿತಿ ಕೊಡಲ್ಲ ಎಂದಿದ್ದಾರೆ.

ಹೆಂಡತಿಯನ್ನ ಸಾಯಿಸಿದ್ದ ಕಮಾಂಡೋ
ಕಮಾಂಡೋ ಬಲ್ಜಿಂದರ್ ಸಿಂಗ್ ಎನ್ನುವ ವ್ಯಕ್ತಿ ತನ್ನ ಹೆಂಡತಿಯನ್ನ ದುಪ್ಪಟ್ಟದಿಂದ ಕತ್ತು ಹಿಚುಕಿ ಸಾಯಿಸಿದ್ದಾರೆ. ಇದಕ್ಕೆ ಅವರ ತಾಯಿ ಹಾಗೂ ಸಹೋದರಿ ಸಾಥ್‌ ನೀಡಿದ್ದು, ಈ ಸಮಯದಲ್ಲಿ ಕೈ -ಕಾಲುಗಳನ್ನ ಹಿಡಿದುಕೊಂಡಿದ್ದರು ಎನ್ನಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ 2004 ರಲ್ಲಿ ಅಮೃತಸರ ನ್ಯಾಯಾಲಯವು ಐಪಿಸಿಯ ಸೆಕ್ಷನ್ 304 ಬಿ ಅಡಿಯಲ್ಲಿ ಶಿಕ್ಷೆ ವಿಧಿಸಿತ್ತು.


Spread the love
Share:

administrator

Leave a Reply

Your email address will not be published. Required fields are marked *