Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

“ಅತಿ ಬುದ್ಧಿವಂತನಾಗಬೇಡ!” – ಕೆಲಸದ ಸಮಯ, ಸಂಬಳ ಕೇಳಿದ ಅಭ್ಯರ್ಥಿಗೆ ಸಿಎ ಸಂಸ್ಥೆಯಿಂದ ಕಟು ಉತ್ತರ: ಪೋಸ್ಟ್ ವೈರಲ್!

Spread the love

The Pros and Cons of Using Telephone Interviews in Recruitment - Colorado  PEO: Payroll, Benefits, & HR Outsourcing Services | Denver

ಒಂದು ಸಂಸ್ಥೆಯಲ್ಲಿ ಕೆಲಸಕ್ಕೆ ಹೋಗಬೇಕಾದರೆ ಅಲ್ಲಿಯ ಸಮಯ ಹಾಗೂ ಸಂಬಳದ ಬಗ್ಗೆ ವಿಚಾರಿಸುವುದು ಸಹಜ. ಇದೀಗ ಇದೇ ವಿಚಾರಕ್ಕೆ ಸಂಬಂಧಪಟ್ಟ ಒಂದು ಪೋಸ್ಟ್​​​ ಸಖತ್​ ವೈರಲ್​ ಆಗಿದೆ. ಸಂದರ್ಶನ ಮೊದಲೇ ಅಭ್ಯರ್ಥಿಯೊಬ್ಬ ಕೆಲಸದ ಸಮಯ ಹಾಗೂ ಸ್ಟೈಫಂಡ್ ಬಗ್ಗೆ ಕೇಳಿದ್ದಾನೆ. ಇದರಿಂದ ಕೋಪಗೊಂಡ ಕಂಪನಿ, ಆತನಿಗೆ ಏನ್​​​ ಉತ್ತರ ನೀಡಿದೆ ಎಂಬುದನ್ನು ಇಲ್ಲಿ ನೋಡಬಹುದು.

ಒಂದು ಕೆಲಸಕ್ಕೆ ಸೇರಿಕೊಳ್ಳಬೇಕಾದರೆ ಅಲ್ಲಿನ ಸಮಯ ಹಾಗೂ ಸಂಬಳ ಬಗ್ಗೆ ಕೇಳುವುದು ಅಭ್ಯರ್ಥಿಯ ಕರ್ತವ್ಯ, ಆ ಆಧಾರ ಮೇಲೆಯೇ ಮುಂದೆ ಕೆಲಸ ಮಾಡಬೇಕು. ಈಗ ಎಲ್ಲ ಕಡೆಗಳಲ್ಲಿ ಸಂಬಳ ಹಾಗೂ ಸಮಯಕ್ಕೆ ಹೆಚ್ಚು ಪ್ರಾಮುಖ್ಯತೆ ನೀಡುವ ಕಾರಣ, ಹೀಗೆ ಕೇಳುತ್ತಾರೆ. ಮತ್ತು ಅದು ಅನಿವಾರ್ಯ ಕೂಡ ಹೌದು. ಇಲ್ಲೊಂದು ಇದೇ ವಿಚಾರಕ್ಕೆ ಸಂಬಂಧಪಟ್ಟ  ಪೋಸ್ಟ್​​​ ಭಾರೀ ಸದ್ದು ಮಾಡುತ್ತಿದ್ದು, ಕೆಲಸ ಪಡೆಯುವವನು, ಈ ಪ್ರಶ್ನೆಯನ್ನು ಕೇಳುವ ಹಕ್ಕು ಕೂಡ ಇಲ್ಲವೇ ಎಂದು ಅನೇಕರು ಅಕ್ರೋಶ ವ್ಯಕ್ತಪಡಿಸಿದ್ದಾರೆ. ಇಲ್ಲೊಬ್ಬ ಸಿಎ ವಿದ್ಯಾರ್ಥಿ ಸಿಎ ಆರ್ಟಿಕಲ್‌ಶಿಪ್​​ಗೆ ಅರ್ಜಿ ಹಾಕಿದ್ದಾನೆ. ಈ ವೇಳೆ CA ಸಂಸ್ಥೆ ಸಂದರ್ಶನದ ವೇಳೆ, ಈ ಸಿಎ ವಿದ್ಯಾರ್ಥಿ ಕೆಲಸದ ಸಮಯ ಮತ್ತು ಸ್ಟೈಫಂಡ್ (ಸಂಬಳದ) ಬಗ್ಗೆ, ಸಂದರ್ಶನದ ಬಗ್ಗೆ ಮೊದಲೇ ಕೇಳಿದ್ದಾನೆ. ಇದಕ್ಕೆ ಸಿಟ್ಟುಗೊಂಡ ಸಂಸ್ಥೆ ಆತನಿಗೆ ಮುಜುಗರ ಆಗುವ ರೀತಿಯಲ್ಲಿ ಉತ್ತರ ನೀಡಿದೆ. ಈ ಪೋಸ್ಟನ್ನು ಅಭ್ಯರ್ಥಿ ರೆಡ್ಡಿಟ್​​​ನಲ್ಲಿ ಹಂಚಿಕೊಂಡಿದ್ದಾನೆ. ಕಂಪನಿಯ ಈ ವರ್ತನೆಗೆ ಅನೇಕರು ಇದನ್ನು ವೃತ್ತಿಪರವಲ್ಲದ ಮತ್ತು ಶೋಷಣೆಯ ಕೆಲಸ ಎಂದು ಕರೆದಿದ್ದಾರೆ.

ಸಿಎ ವಿದ್ಯಾರ್ಥಿ ರೆಡ್ಡಿಟ್​​​ನ್ಲಿ ಹೇಳಿರುವ ಪ್ರಕಾರ, ನಾನು ಒಂದು ಸಂಸ್ಥೆಯಲ್ಲಿ ಸಿಎ ಆರ್ಟಿಕಲ್‌ಶಿಪ್​​ಗೆ ಅರ್ಜಿ ಹಾಕಿದ್ದೇ, ಅಲ್ಲಿನ ಸಂದರ್ಶನದ ವೇಳೆ ಸಮಯ ಮತ್ತು ನಿರೀಕ್ಷಿತ ಸ್ಟೈಫಂಡ್ ಕೇಳಿದೆ. ಅದಕ್ಕೆ ಅವರು ಅತಿ ಬುದ್ಧಿವಂತನಾಗುವ ಅಗತ್ಯವಿಲ್ಲ ಎಂದು ಉತ್ತರಿಸಿದ್ದಾರೆ. ಆದರೆ ಅವರು ಯಾಕೆ ಈ ರೀತಿ ಹೇಳಿದ್ರು ಗೊತ್ತಿಲ್ಲ? ನನ್ನ ಸಮಯವನ್ನು ಸರಿಹೊಂದಿಸಲು ಸಾಧ್ಯವಾಗದಿದ್ದರೆ, ಈ ಸಂಸ್ಥೆಗಳಲ್ಲಿ ಸಂದರ್ಶನಗಳಿಗೆ ನಾನು ಏಕೆ ಸಮಯ ವ್ಯರ್ಥ ಮಾಡುತ್ತೇನೆ? ಬದಲಾಗಿ, ನನ್ನ ಸಮಯವನ್ನು ಸರಿಹೊಂದಿಸಬಹುದಾದ ಸಂಸ್ಥೆಗಳಿಗೆ ನಾನು ಹೋಗಬಹುದು. ನಾನು ಕೇಳಿದ ಪ್ರಶ್ನೆಯಿಂದ ಕಂಪನಿಗೂ ಸಮಯ ಉಳಿಯುತ್ತದೆ. ಆದರೆ ಈ ರೀತಿಯ ನಡವಳಿಕೆಯು ಸಂಸ್ಥೆಯ ಇಮೇಜ್‌ಗೆ ಧಕ್ಕೆ ತರುತ್ತದೆ ಎಂದು ಬರೆದುಕೊಂಡಿದ್ದಾನೆ.

ಇನ್ನು ತಾನು ಹಂಚಿಕೊಂಡಿರುವ ಪೋಸ್ಟ್​​ನಲ್ಲಿ ವಾಟ್ಸಾಪ್ ಸ್ಕ್ರೀನ್‌ಶಾಟ್‌ ಕೂಡ ಹಂಚಿಕೊಂಡಿದ್ದಾನೆ. ಎಷ್ಟು ಸಮಯ ಮತ್ತು ಸ್ಟೈಫಂಡ್ ಬಗ್ಗೆ ಕೇಳುತ್ತಿರುವುದನ್ನು ಈ ಸ್ಕ್ರೀನ್‌ಶಾಟ್‌ ನೋಡಬಹುದು. ಇದಕ್ಕೆ ಸಂಸ್ಥೆಯೂ ಅಭ್ಯರ್ಥಿಗೆ ನಾಚಿಗೆ ಆಗುವಂತೆ ಉತ್ತರಿಸುತ್ತದೆ. ಹಾಗೂ ನಮ್ಮ ಸಂಸ್ಥೆಗೆ ಬರಬೇಡ ಎಂದು ಹೇಳುವ ಸಂದೇಶವನ್ನು ಇಲ್ಲಿ ಕಾಣಬಹುದು. ಈ ಪೋಸ್ಟ್​​ ನೋಡಿ ರೆಡ್ಡಿಟ್​​​ ಬಳಕೆದಾರರೂ ತರಹೇವಾರಿ ಕಮೆಂಟ್ ಮಾಡಿದ್ದಾರೆ. ಈ ಬಳಕೆದಾರರಲ್ಲಿ ಒಬ್ಬರು , ಇದು ಒಬ್ಬ ವ್ಯಕ್ತಿ “ಕೆಟ್ಟ ಕೆಲಸದ ಸಂಸ್ಕೃತಿಯ ಆರಂಭಿಕ ವರ್ತನೆ ಎಂದು ಹೇಳಿದ್ದಾರೆ. ಮತ್ತೊಬ್ಬ ಬಳಕೆದಾರ, ಭಾರತೀಯ ಶಬ್ದಕೋಶದಲ್ಲಿ ಅತಿ ಬುದ್ಧಿವಂತಿಕೆ ಅತ್ಯಂತ ಹಿಂದುಳಿದ ಪದವಾಗಿದೆ. ಕೆಲವು ಕಾನೂನುಬದ್ಧ ಪ್ರಶ್ನೆಗಳಿಗೆ ಉತ್ತರಿಸಲು ತುಂಬಾ ಹೆದರುವ ಭ್ರಷ್ಟ ಜನರು ಇದನ್ನು ಹೆಚ್ಚಾಗಿ ಬಳಸುತ್ತಾರೆ ಎಂದು ಹೇಳಿದ್ದಾರೆ. ಇನ್ನೊಬ್ಬ ಬಳಕೆದಾರ ನೀವು ಸಮಯದ ಬಗ್ಗೆ ಕೇಳಿರುವುದು ತಪ್ಪಲ್ಲ, ಆದರೆ ಸಂಬಳದ ಬಗ್ಗೆ ಕೊನೆಯಲ್ಲಿ ಕೇಳಬೇಕಿತ್ತು. ಈ ಆಧಾರದ ಮೇಲೆ ಈ ಕಂಪನಿಗೆ ನೀವು ಸೇರಬೇಕಾ-ಬೇಡವೇ ಎಂಬುದನ್ನು ನಿರ್ಧಾರಿಸಬೇಕು ಎಂದು ಹೇಳಿದ್ದಾರೆ.


Spread the love
Share:

administrator

Leave a Reply

Your email address will not be published. Required fields are marked *