ಮನೆಕೆಲಸದವಳ ಅಸಹ್ಯ ಕೃತ್ಯ: ಪಾತ್ರೆಗಳ ಮೇಲೆ ಮೂತ್ರ ಚಿಮುಕಿಸುತ್ತಿದ್ದ ಮಹಿಳೆ ಸೆರೆ; ನ್ಯಾಯಾಂಗ ಬಂಧನಕ್ಕೆ

ಅನೇಕ ಕಡೆ ಕೆಲವು ಆರ್ಥಿಕವಾಗಿ ಸ್ಥಿತಿವಂತರಾಗಿರುವರು ಹಾಗೂ ಅನಾರೋಗ್ಯಕ್ಕೆ ಒಳಗಾಗಿರುವ ಹಿರಿಯರು, ವೃದ್ಧರು ಮನೆಗಳಲ್ಲಿ ಪಾತ್ರೆ ಬಟ್ಟೆ ತೊಳೆಯುವುದು ಸೇರಿದಂತೆ ಅಡಿಗೆ ಮಾಡುವುದಕ್ಕೆ ಕೆಲಸದಾಳುಗಳನ್ನು ಇಟ್ಟುಕೊಂಡಿರುತ್ತಾರೆ. ಆದರೆ ಈಗ ಇಲ್ಲಿ ನಡೆದಿರುವ ಘಟನೆ ನೋಡಿದರೆ ಮನೆ ಕೆಲಸಕ್ಕೆ ಜನ ಇಟ್ಟುಕೊಳ್ಳುವವರು ಬೆಚ್ಚಿ ಬೀಳುವಂತಾಗಿದೆ. ಹೌದು ಉದ್ಯಮಿಯೊಬ್ಬರ ಮನೆಯಲ್ಲಿ ಅಡುಗೆ ಹಾಗೂ ಮನೆ ಕೆಲಸ ಮಾಡುತ್ತಿದ್ದ ಮಹಿಳೆಯೊಬ್ಬಳು ಅಲ್ಲಿ ಮನೆ ಮಂದಿ ದಿನಾ ಬಳಸುತ್ತಿದ್ದ ಪಾತ್ರೆಯ ಮೇಲೆ ಮೂತ್ರ ಮಾಡಿದಂತಹ ಅಸಹ್ಯಕಾರಿ ಘಟನೆ ನಡೆದಿದೆ. ಮನೆ ಕೆಲಸದ ಮಹಿಳೆಯ ಈ ವಿಚಿತ್ರ ವರ್ತನೆ ಕ್ಯಾಮರಾದಲ್ಲಿ ಸೆರೆಯಾಗಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವೀಡಿಯೋ ವೈರಲ್ ಆಗುತ್ತಿದ್ದಂತೆ ಸಾಮಾಜಿಕ ಜಾಲತಾಣದಲ್ಲಿ ಭಾರಿ ಆಕ್ರೋಶ ಕೇಳಿ ಬಂದಿದೆ.

ಗ್ಲಾಸ್‌ಗೆ ಮೂತ್ರ ಮಾಡಿ ಸಿಂಕ್‌ನಲ್ಲಿದ್ದ ಪಾತ್ರೆಗಳಿಗೆ ಚಿಮುಕಿಸುತ್ತಿದ್ದ ಮನೆಕೆಲಸದಾಕೆ:
ಅಂದಹಾಗೆ ಈ ರೀತಿಯ ವಿಲಕ್ಷಣವಾದ ಘಟನೆ ನಡೆದಿರುವುದು ಉತ್ತರ ಪ್ರದೇಶದ ಬಿಜ್ನೋರ್‌ನಲ್ಲಿ ಈಕೆ ಅಲ್ಲಿನ ಸ್ಥಳೀಯ ಉದ್ಯಮಿಯೊಬ್ಬರ ಮನೆಯಲ್ಲಿ ಕಳೆದ 10 ವರ್ಷಗಳಿಂದ ಮನೆಕೆಲಸ ಮಾಡುತ್ತಿದ್ದಳು. ಆದರೆ ಈಗ ಆಘಾತಕಾರಿ ಕೃತ್ಯವೆಸಗುವ ವೇಳೆ ಸಿಕ್ಕಿಬಿದ್ದಿದ್ದಾಳೆ. ಈ ಕೃತ್ಯವೆಸಗಿದ ಮಹಿಳೆಯನ್ನು ಸಮಂತ್ರಾ ಎಂದು ಗುರುತಿಸಲಾಗಿದೆ. ಈಕೆ ಸಿಂಕ್‌ನಿಂದ ಗ್ಲಾಸೊಂದನ್ನು ತೆಗೆದು ಅದಕ್ಕೆ ನಿಂತುಕೊಂಡೆ ಮೂತ್ರ ಮಾಡಿದ್ದಾಳೆ. ಆ ಮೂತ್ರವನ್ನು ಅಲ್ಲಿ ವಾಸ್ ಬೆಸಿನ್‌ನಲ್ಲಿದ್ದ ಇತರ ಪಾತ್ರಗಳ ಮೇಲೆ ಚಿಮುಕಿಸಿದ್ದಾಳೆ.
ಸಿಸಿಟಿವಿ ಅಳವಡಿಸಿದ ಕುಟುಂಬಕ್ಕೆ ಶಾಕ್
ಕೆಲದಿನಗಳಿಂದ ಈಕೆಯ ವಿಚಿತ್ರ ವರ್ತನೆಯ ಬಗ್ಗೆ ಉದ್ಯಮಿಯ ಕುಟುಂಬದವರಿಗೆ ಅನುಮಾನ ಬಂದ ಹಿನ್ನೆಲೆಯಲ್ಲಿ ಆಕೆಯನ್ನು ಅವರು ಸೂಕ್ಷ್ಮವಾಗಿ ಗಮನಿಸುತ್ತಿದ್ದು, ಆಕೆಯ ಕೃತ್ಯವನ್ನು ತಿಳಿಯಲು ಕಿಚನ್‌ನಲ್ಲಿ ರಹಸ್ಯ ಕ್ಯಾಮರಾ ಅಳವಡಿಸಿದರು. ಆ ಕ್ಯಾಮರಾದಲ್ಲಿ ಆಕೆ ಕೃತ್ಯ ಸೆರೆಯಾಗಿದೆ. ಇದು ನಂತರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ವೀಡಿಯೋ ನೋಡಿದ ನೆಟ್ಟಿಗರು ಮಹಿಳೆಯ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
10 ವರ್ಷದಿಂದ ಉದ್ಯಮಿ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಸಮಂತ್ರಾ:
ಕೆಲಸದಾಕೆಯ ಕೃತ್ಯ ಖಚಿತವಾದ ನಂತರ ಉದ್ಯಮಿ ಕುಟುಂಬದವರು ಪೊಲೀಸರಿಗೆ ದೂರು ನೀಡಿದ್ದಾರೆ. ಅವರು ನೀಡಿದ ದೂರಿನಲ್ಲಿರುವಂತೆ, ಈ ಕೃತ್ಯವೆಸಗಿರುವ , ಕೆಲಸದಾಕೆ ಸುಮಾರು ಹತ್ತು ವರ್ಷಗಳಿಂದ ಅವರ ಮನೆಯಲ್ಲಿ ಮನೆಗೆಲಸದವಳಾಗಿದ್ದಳು ಮತ್ತು ಮನೆಮಂದಿ ಎಲ್ಲರೂ ಅವಳ ಮೇಲೆ ನಂಬಿಕೆ ವಿಶ್ವಾಸ ಇಟ್ಟಿದ್ದರು. ಆದರೆ ಇತ್ತೀಚಿನ ಕೆಲ ವಾರಗಳಿಂದ ಆಕೆಯ ವರ್ತನೆಯಲ್ಲಿ ವಿಚಿತ್ರ ಬದಲಾವಣೆಯನ್ನು ಅವರ ಕುಟುಂಬ ಗಮನಿಸಿತ್ತು. ಹೀಗಾಗಿ ಆಕೆಯ ಮೇಲೆ ಸೂಕ್ಷ್ಮವಾಗಿ ಕಣ್ಣಿಡುವುದಕ್ಕೆ ಅವರ ಕುಟುಂಬ ನಿರ್ಧರಿಸಿತು. ನಂತರ ಗುಪ್ತ ಕ್ಯಾಮರಾದಲ್ಲಿ ಆಕೆಯ ಕೃತ್ಯ ನೋಡಿದ ಕುಟುಂಬ ಭಯಗೊಂಡಿದ್ದು, ಕೂಡಲೇ ಆಕೆಯ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ.
ಉದ್ಯಮಿ ಕುಟುಂಬ ದೂರು ನೀಡಿದ ನಂತರ ನಗೀನಾ ಪೊಲೀಸರು ಮನೆ ಕೆಲಸದಾಕೆಯನ್ನು ಬಂಧಿಸಿದ್ದಾರೆ. ಹಲವು ಸೆಕ್ಷನ್‌ಗಳಡಿ ಆಕೆಯ ವಿರುದ್ಧ ಪ್ರಕರಣ ದಾಖಲಾಗಿದೆ. ಆಕೆಯನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು, ಆಕೆಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಕಳೆದ ವರ್ಷ ಗಾಜಿಯಾಬಾದ್‌ನಲ್ಲಿ ಇದೇ ರೀತಿಯ ಘಟನೆಯೊಂದು ನಡೆದಿತ್ತು. , ಕ್ರಾಸಿಂಗ್ ರಿಪಬ್ಲಿಕ್ ಪ್ರದೇಶದಲ್ಲಿ ವಾಸ ಮಾಡುತ್ತಿದ್ದ ಕುಟುಂಬವೊಂದರ ಹಲವಾರು ಸದಸ್ಯರು ಪದೇ ಪದೇ ಅನಾರೋಗ್ಯಕ್ಕೆ ಒಳಗಾಗುತ್ತಿದ್ದರು. ಹೀಗಾಗಿ ಕುಟುಂಬದವರಿಗೆ ಮನೆಯಲ್ಲಿ ಅಡುಗೆ ಮಾಡುವವಳ ಮೇಲೆ ಅನುಮಾನ ಬಂದಿತ್ತು. ಹೀಗಾಗಿ ಸತ್ಯಾಸತ್ಯತೆ ತಿಳಿಯಲು ಅವರು ಮನೆಯ ಕಿಚನ್‌ನಲ್ಲಿ ಸಿಸಿಟಿವಿ ಅಳವಡಿಸಿದ್ದರು. ಈ ವೇಳೆ ಮನೆಕೆಲಸದಾಕೆ ಆಹಾರದಲ್ಲಿ ಮೂತ್ರ ಬೆರೆಸುತ್ತಿರುವುದು ವೀಡಿಯೋದಲ್ಲಿ ಸೆರೆಯಾಗಿ ಮನೆಮಂದಿ ಹೌಹಾರುವಂತೆ ಮಾಡಿತ್ತು. ನಂತರ ಮನೆ ಮಾಲೀಕರು ಪೊಲೀಸರಿಗೆ ದೂರು ನೀಡಿದರು. ನಂತರ ಪೊಲೀಸರು ಮನೆಕೆಲಸದಾಕೆಯನ್ನು ಬಂಧಿಸಿದ್ದರು.
