Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ನಾಯಿಗಳ ಮೂಗಿನ ಶಕ್ತಿ ಮತ್ತು AI ತಂತ್ರಜ್ಞಾನ: ಕ್ಯಾನ್ಸರ್ ಪತ್ತೆಗೆ ಹೊಸ ಮಾರ್ಗ ಕಂಡುಕೊಂಡ ಬೆಂಗಳೂರಿನ ಸ್ಟಾರ್ಟಪ್

Spread the love

ಬೆಂಗಳೂರು: ನಾಯಿ ಹಲವು ನಿಸರ್ಗದತ್ತ ವಿಶೇಷ ಶಕ್ತಿಗಳನ್ನು ಹೊಂದಿರುವ ಪ್ರಾಣಿ. ಇದರ ವಾಸನಾ ಗ್ರಹಿಕೆ ಸಾಮರ್ಥ್ಯ ಮನುಷ್ಯರ ಅರಿವಿಗೆ ನಿಲುಕುವುದು ಕಷ್ಟ. ಒಬ್ಬ ವ್ಯಕ್ತಿಯನ್ನು ಆತನ ವಾಸನೆಯಿಂದಲೇ ಇದು ಗುರುತು ಹಿಡಿಯಬಲ್ಲಷ್ಟು ನೈಸರ್ಗಿಕವಾದ ಪವರ್ಫುಲ್ ಸೆನ್ಸಾರ್ (Canine Olfactory power) ಹೊಂದಿರುತ್ತದೆ.

ಅಪರಾಧ ಪ್ರಕರಣಗಳಲ್ಲಿ ಕೊಲೆಗಾರರನ್ನು ಹಿಡಿಯಲು ನಾಯಿಯನ್ನು ಬಳಸುತ್ತಾರೆ. ಬಾಂಬ್ಗಳು, ಮೃತದೇಹಗಳು, ಮಾದಕದ್ರವ್ಯಗಳು ಇತ್ಯಾದಿಯನ್ನು ಪತ್ತೆ ಮಾಡಲು ನಾಯಿಯನ್ನು ಬಳಸಲಾಗುತ್ತದೆ. ಬೆಂಗಳೂರಿನ ಸ್ಟಾರ್ಟಪ್ವೊಂದು ನಾಯಿಯ ಈ ವಾಸನಾ ಗ್ರಹಿಕೆ ಸಾಮರ್ಥ್ಯವನ್ನು ರೋಗಪತ್ತೆಗೆ (cancer detection) ಬಳಸುತ್ತಿದೆ. ಈ ಸ್ಟಾರ್ಟಪ್ ಹೆಸರು ಡಾಗ್ನಾಸಿಸ್ (Dognosis).

ಡಾಗ್ನಾಸಿಸ್ ಕಂಪನಿಯು ನಾಯಿಯ ವಿಶೇಷ ವಾಸನಾ ಗ್ರಹಿಕೆಯ ಶಕ್ತಿ ಜೊತೆಗೆ ಎಐ ತಂತ್ರಜ್ಞಾನ ನೆರವಿನಿಂದ ಮನುಷ್ಯರಲ್ಲಿರುವ ಕ್ಯಾನ್ಸರ್ನಂತಹ ಮಾರಕ ಕಾಯಿಲೆಯನ್ನು ಪತ್ತೆ ಮಾಡಲು ಬಳಸುತ್ತಿದೆ. ಕ್ಯಾನ್ಸರ್ ಅನ್ನು ಆರಂಭಿಕ ಹಂತದಲ್ಲೇ ಇದರಿಂದ ಪತ್ತೆ ಮಾಡಬಹುದು. ಕ್ಯಾನ್ಸರ್ ಮಾತ್ರವಲ್ಲ, ಕೋವಿಡ್, ಕ್ಷಯ ಇತ್ಯಾದಿ ರೋಗಗಳನ್ನೂ ನಾಯಿ ಮೂಲಕ ಪತ್ತೆ ಮಾಡಬಲ್ಲುದು ಡಾಗ್ನಾಸಿಸ್ನ ಯಂತ್ರ.

ನಾಯಿಗೆ ಹೇಗೆ ಗೊತ್ತಾಗುತ್ತೆ ರೋಗ? ಇಲ್ಲಿದೆ ಎಐ ಪ್ರಯೋಗ

ರೋಗ ತಪಾಸಣೆ ಮಾಡಬೇಕಾದ ವ್ಯಕ್ತಿಗೆ 10 ನಿಮಿಷ ಮಾಸ್ಕ್ ಹಾಕಲಾಗುತ್ತದೆ. ಈ ವೇಳೆ ಆತನ ಉಸಿರಾಟದ ಮೂಲಕ ಮಾಸ್ಕ್ಗೆ ವಿವಿಧ ರಾಸಾಯನಿಕಗಳು ಅಂಟಿಕೊಳ್ಳುತ್ತವೆ. ಈ ಮಾಸ್ಕ್ ಅನ್ನು ಡಾಗ್ನಾಸಿಸ್ ಲ್ಯಾಬ್ಗೆ ಕಳುಹಿಸಲಾಗುತ್ತದೆ.

ಈ ಡಾಗ್ನಾಸಿಸ್ ಲ್ಯಾಬ್ನಲ್ಲಿ ವಿಶೇಷ ತರಬೇತಿ ಪಡೆದ ಶ್ವಾನಗಳಿರುತ್ತವೆ. ಮಾಸ್ಕ್ ಸ್ಯಾಂಪಲ್ ಅನ್ನು ಈ ಶ್ವಾನದಿಂದ ಮೂಸಿಸಲಾಗುತ್ತದೆ. ಹೀಗೆ ಮೂಸುವ ನಾಯಿಗೆ ಡಾಗ್ಸೆನ್ಸ್ ಎನ್ನುವ ಇಇಜಿ ಹೆಡ್ಸೆಟ್ಗಳನ್ನು ಹಾಕಲಾಗಿರುತ್ತದೆ. ಮಾಸ್ಕ್ ಸ್ಯಾಂಪಲ್ ಅನ್ನು ಆ ನಾಯಿ ಮೂಸಿದಾಗ ಅದರ ಮಿದುಳಿಂದ ಬರುವ ನ್ಯೂರಲ್ ಸಿಗ್ನಲ್ಗಳನ್ನು ಈ ಹೆಡ್ಸೆಟ್ಗಳು ಸೆರೆ ಹಿಡಿಯುತ್ತವೆ.

ಬಳಿಕ, ಡಾಗ್ಒಎಸ್ ಎನ್ನುವ ಎಐ ಪ್ಲಾಟ್ಫಾರ್ಮ್ಗೆ ಈ ಇಇಜಿ ದತ್ತಾಂಶವನ್ನು ಕಳುಹಿಸಲಾಗುತ್ತದೆ. ಈ ಇಂಟೆಲಿಜೆಂಟ್ ತಂತ್ರಾಂಶವು ದತ್ತಾಂಶವನ್ನು ಸಮರ್ಪಕವಾಗಿ ವಿಶ್ಲೇಷಿಸಿ, ಆ ಸ್ಯಾಂಪಲ್ನಲ್ಲಿ ಕ್ಯಾನ್ಸರ್ಕಾರಕ ಅಣುಗಳಿವೆಯಾ, ಅಥವಾ ಬೇರಾವುದೇ ರೋಗದ ಕಣಗಳಿವೆಯಾ ಎಂದು ಗುರುತಿಸುತ್ತದೆ.

ಆಕಾಶ್ ಕುಲಗೋಡ್ ಸ್ಥಾಪಿತ ಕಂಪನಿ ಡಾಗ್ನಾಸಿಸ್

ಕಾಗ್ನೈಟಿವ್ ಸೈಂಟಿಸ್ಟ್ ಆದ ಆಕಾಶ್ ಕುಲಗೋಡ್ (Akash Kulgod) ಹಾಗೂ ಮಾಜಿ ಇಸ್ರೇಲೀ ಕಮಾಂಡರ್ ಇಟಮರ್ ಬಿಟನ್ (Itamar Bitan) ಎನ್ನುವವರು ಡಾಗ್ನಾಸಿಸ್ ಕಂಪನಿಯ ಸ್ಥಾಪಕರಾಗಿದ್ದಾರೆ. ಇವರ ಸ್ಟಾರ್ಟಪ್ನಲ್ಲಿ ನ್ಯೂರೋಸೈನ್ಸ್, ಎಂಜಿನಿಯರಿಂಗ್, ಕ್ಲಿನಿಕಲ್ ಆಪರೇಷನ್ಸ್, ಸಾಫ್ಟ್ವೇರ್ ಕ್ಷೇತ್ರಗಳ ಹತ್ತಾರು ಇನ್ನೋವೇಟರ್ಗಳ ತಂಡ ಕೆಲಸ ಮಾಡುತ್ತಿದೆ.

ಆಕಾಶ್ ಕುಲಗೋಡ್ ಹಾಗೂ ಇಟಮರ್ ಬಿಟನ್

ಉಸಿರಾಟ, ಮೂತ್ರ ಮತ್ತು ಬೆವರುಗಳಲ್ಲಿರುವ ರಾಸಾಯನಿಕ ಬದಲಾವಣೆಗಳನ್ನು ನಾಯಿಗಳು ಗುರುತಿಸಬಲ್ಲುವು ಎಂದು ಬಹಳಷ್ಟು ಸಂಶೋಧನೆಗಳು ದೃಢಪಡಿಸಿವೆ. ಇದರ ಆಧಾರವಾಗಿ ಡಾಗ್ನಾಸಿಸ್ ತಪಾಸಣೆ ವಿಧಾನವನ್ನು ಆವಿಷ್ಕರಿಸಲಾಗಿದೆ. ವರದಿ ಪ್ರಕಾರ, ಡಾಗ್ನಾಸಿಸ್ ಸುಮಾರು 10 ವಿಧದ ಕ್ಯಾನ್ಸರ್ಗಳನ್ನು ಶೇ. 98ರಷ್ಟು ನಿಖರವಾಗಿ ಗುರುತಿಸಬಲ್ಲುದಂತೆ.


Spread the love
Share:

administrator

Leave a Reply

Your email address will not be published. Required fields are marked *