ಬಾಲಕರ ಮೇಲೆ ಜರ್ಮನ್ ಶೆಫರ್ಡ್ ನಾಯಿ ಛೂ ಬಿಟ್ಟ ಮಾಲೀಕ!
ಪಿಂಪ್ರಿ-ಚಿಂಚ್‌ವಾಡ್: ಬಾಲಕರ ಮೇಲೆ ಜರ್ಮನ್ ಶೆಫರ್ಡ್ ನಾಯಿ ಛೂ ಬಿಟ್ಟ ಮಾಲೀಕ!
ಪಿಂಪ್ರಿ-ಚಿಂಚ್‌ವಾಡ್‌ನ ಭೋಸಾರಿ ಪ್ರದೇಶದಲ್ಲಿ ಆಘಾತಕಾರಿ ಘಟನೆ ನಡೆದಿದ್ದು, ಜರ್ಮನ್ ಶೆಫರ್ಡ್ ತಳಿಯ ನಾಯಿಯ ಮಾಲೀಕನೇ ಉದ್ದೇಶಪೂರ್ವಕವಾಗಿ ಆ ನಾಯಿಯನ್ನು ಆಟವಾಡುತ್ತಿದ್ದ ಬಾಲಕರ ಮೇಲೆ ಛೂ ಬಿಟ್ಟಿದ್ದಾನೆ. ಪಿಂಪ್ರಿ-ಚಿಂಚ್‌ವಾಡ್‌ನ ಭೋಸಾರಿ MIDC ಬಳಿಯ ಸ್ವರಾಜ್ಯ ನಗರಿ ಪ್ರದೇಶದಲ್ಲಿ ಶನಿವಾರ ಈ ಘಟನೆ ನಡೆದಿದೆ.

ಸೊಸೈಟಿ ಆವರಣದಲ್ಲಿ ಮಕ್ಕಳು ಆಟವಾಡುತ್ತಿದ್ದರು. ನಾಯಿಯ ಮಾಲೀಕನು ಬೆಲ್ಟ್ ಹಿಡಿದು ನಾಯಿಯನ್ನು ಕರೆದುಕೊಂಡು ಬರುತ್ತಿದ್ದಾಗ, ಇದ್ದಕ್ಕಿದ್ದಂತೆ ನಾಯಿಯ ಕುತ್ತಿಗೆಯಿಂದ ಬೆಲ್ಟ್ ಅನ್ನು ತೆಗೆದಿದ್ದಾನೆ. ಬೆಲ್ಟ್ ಬಿಡುತ್ತಿದ್ದಂತೆಯೇ ನಾಯಿಯು ಏಕಾಏಕಿ ಓಡಿ ಹೋಗಿ ಬಾಲಕರನ್ನು ಅಟ್ಟಿಸಿಕೊಂಡು ಹೋಗಿದೆ. ಲಭ್ಯವಾದ ಮಾಹಿತಿಯ ಪ್ರಕಾರ, ನಾಯಿಯು ಓರ್ವ ಬಾಲಕನನ್ನು ಕಚ್ಚಿದೆ. ಈ ಘಟನೆಯ ವಿಡಿಯೋ ಕೂಡ ಲಭ್ಯವಾಗಿದ್ದು, ನಾಯಿ ಬಾಲಕನನ್ನು ಅಟ್ಟಿಸಿಕೊಂಡು ಹೋಗುವ ದೃಶ್ಯಗಳು ದಾಖಲಾಗಿವೆ.ಮಾಲೀಕನ ಈ ನಿರ್ಲಕ್ಷ್ಯದ ಮತ್ತು ಉದ್ದೇಶಪೂರ್ವಕ ಕೃತ್ಯದಿಂದಾಗಿ ಆಟವಾಡುತ್ತಿದ್ದ ಬಾಲಕರು ಗಾಯಗೊಂಡಿದ್ದು, ಈ ಘಟನೆಯು ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.