Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಸಾರ್ವಜನಿಕ ಸಾರಿಗೆಯಲ್ಲಿ ವ್ಯತ್ಯಯ: ಕಳೆದ 2 ವರ್ಷಗಳಿಂದ ಭತ್ಯೆ ನೀಡುತ್ತಿಲ್ಲ; ಬೇಡಿಕೆ ಈಡೇರುವವರೆಗೆ ಬಸ್ ತೆಗೆಯುವುದಿಲ್ಲ ಎಂದು ಚಾಲಕರ ಪಟ್ಟು

Spread the love

ಬೆಂಗಳೂರು: ಅಟೆಂಡೆನ್ಸ್ ಬೋನಸ್ ಹಾಗೂ ವೇತನ‌ಭತ್ಯೆಗೆ ಆಗ್ರಹಿಸಿ ಮೈಸೂರು ರಸ್ತೆಯ ದೀಪಾಂಜಲಿ ನಗರದಲ್ಲಿರುವ ಬಿಎಂಟಿಸಿ (BMTC) ಡಿಪೋದಲ್ಲಿ ಎಲೆಕ್ಟ್ರಿಕ್‌ ಬಸ್‌ ಚಾಲಕರು (Electric Bus Driver) ದಿಢೀರ್‌ ಪ್ರತಿಭಟನೆ (Protest) ನಡೆಸುತ್ತಿದ್ದಾರೆ.

ಬಸ್ಸುಗಳನ್ನು ತೆಗೆಯದೇ ಡಿಪೋ ನಂಬರ್ 16ರ 100 ಕ್ಕೂ ಇವಿ ಬಸ್ಸುಗಳ ಚಾಲಕರ ಪ್ರತಿಭಟನೆ ನಡೆಸುತ್ತಿರುವ ಕಾರಣ ಸಂಚಾರದಲ್ಲಿ ವ್ಯತ್ಯಯವಾಗಿದೆ. 

ಕಳೆದ ಎರಡು ವರ್ಷಗಳಿಂದ ಅಟೆಂಡೆನ್ಸ್ ಬೋನಸ್, ವೇತನ ಭತ್ಯೆ ನೀಡುತ್ತಿಲ್ಲ. ಅಪಘಾತವಾದಾಗ ಸರಿಯಾಗಿ ಪ್ರತಿಕ್ರಿಯೆ ನೀಡುವುದಿಲ್ಲ. ಚಾಲಕರಿಗೆ ಭದ್ರತೆಯಿಲ್ಲ. ನಮ್ಮ ಬೇಡಿಕೆ ಈಡೇರುವವರೆಗೆ ಇವಿ ಬಸ್ ತೆಗೆಯುವುದಿಲ್ಲ ಎಂದು ಚಾಲಕರು ಪಟ್ಟು ಹಿಡಿದಿದ್ದಾರೆ.

ಎಲೆಕ್ಟ್ರಿಕ್‌ ಬಸ್ಸು ಚಾಲಕರು ನೇರವಾಗಿ ಬಿಎಂಟಿಸಿ ವ್ಯಾಪ್ತಿಗೆ ಬರುವುದಿಲ್ಲ. ಇವರು ಗುತ್ತಿಗೆ ನೌಕರರಾಗಿದ್ದು ಖಾಸಗಿ ಸಂಸ್ಥೆ ನೇಮಕ ಮಾಡುತ್ತದೆ. ಈ ಸಂಸ್ಥೆ ಚಾಲಕರನ್ನು ನೇಮಕ ಮಾಡುವಾಗ ಯಾವ ರೀತಿ ಒಪ್ಪಂದ ಮಾಡಿಕೊಂಡಿರುತ್ತದೋ ಒಪ್ಪಂದಂತೆ ಸಂಬಳ, ಭತ್ಯೆಯನ್ನು ನೀಡಬೇಕಾಗುತ್ತದೆ.


Spread the love
Share:

administrator

Leave a Reply

Your email address will not be published. Required fields are marked *