ಛೇ, ಇವನೆಂಥಾ ಅಪ್ಪ?: ಸ್ವಂತ ಮಗಳಿಗೇ ಅನ್ಯ ವ್ಯಕ್ತಿ ಜೊತೆ ಮಲಗುವಂತೆ ಒತ್ತಾಯಿಸಿದ!

ಚಿಕ್ಕಬಳ್ಳಾಪುರ: ತಂದೆ- ತಾಯಿಯನ್ನು (Father-Mother) ದೇವರು (God) ಅಂತಲೇ ಪೂಜಿಸ್ತಾರೆ. ಅದೇ ಅಪ್ಪ (Father) ಅಂದರೆ ಆಕಾಶ ಅಂತಾರೆ. ಅದರಲ್ಲೂ ಮಗಳಿಗೆ ಅಪ್ಪನೇ ಪ್ರಪಂಚ ಆಗಿರುತ್ತಾರೆ. ಆದರೆ ಇಲ್ಲೊಬ್ಬ ವ್ಯಕ್ತಿ ಅಪ್ಪ ಅನ್ನೋ ಹೆಸರಿಗೆ ಕಳಂಕ ತರುವ ಕೆಲಸ ಮಾಡಿದ್ದಾನೆ. ತನ್ನ ಮಗಳ ಮೇಲೆ ತಾನೇ ಹಲ್ಲೆ ಮಾಡಿದ್ದಾನೆ. ಅಲ್ಲದೇ ತಾನೇ ಮಗಳಿಗೆ ಅನ್ಯವ್ಯಕ್ತಿಯೊಂದಿಗೆ ಮಲಗುವಂತೆ ಒತ್ತಾಯ ಮಾಡಿದ್ದಾನೆ ಎಂಬ ಆರೋಪ ಕೇಳಿಬಂದಿದೆ.
ಇಲ್ಲೊಬ್ಬ ವ್ಯಕ್ತಿ ಮಾಡಿದ ಕೆಲಸ ಕೇಳಿದ್ರೆ ಇವನೆಂಥಾ ಅಪ್ಪ ಅನ್ಸುತ್ತೆ. ತನ್ನ ಮಗಳಿಗೆ ತಾನೇ ವಿಲನ್ ಆಗಿದ್ದಾನೆ. ಹೆತ್ತ ಮಗಳನ್ನೇ ಮತ್ತೋರ್ವ ಅನ್ಯ ವ್ಯಕ್ತಿಯೊಂದಿಗೆ ಸಂಬಂಧ ಬೆಳೆಸುವಂತೆ ಒತ್ತಾಯ ಮಾಡಿದ್ದಾನೆ ಎಂಬ ಆರೋಪ ಕೇಳಿಬಂದಿದೆ.
ತಂದೆಯಿಂದಲೇ ಅನ್ಯ ವ್ಯಕ್ತಿಯೊಂದಿಗೆ ಮಲಗುವಂತೆ ಅಪ್ರಾಪ್ತ ಬಾಲಕಿಗೆ ಬಲವಂತ ಮಾಡಿರುವ ಘಟನೆ ನಡೆದಿದೆ. ತನ್ನ ಹದಿನಾರು ವರ್ಷದ ಮಗಳಿಗೆ ತಂದೆಯೇ ಈ ನೀಚ ಕೆಲಸ ಮಾಡಿದ್ದಾರೆ. ಅನ್ಯವಕ್ತಿಯೊಂದಿಗೆ ಲೈಂಗಿಕ ಕ್ರಿಯೆಗಾಗಿ ಬಾಲಕಿಗೆ ಒತ್ತಾಯ ಮಾಡಿರುವ ಆರೋಪ ಕೇಳಿಬಂದಿದೆ. ಕೇವಲ ಹದಿನಾರು ವರ್ಷದ ಬಾಲಕಿಗೆ ಈ ರೀತಿ ಮಾಡುವಂತೆ ಅಪ್ಪ ಒತ್ತಾಯ ಮಾಡಿದ್ದಾನೆ ಎನ್ನಲಾಗಿದೆ.
ಒಪ್ಪದಿದ್ದಕ್ಕೆ ಮಗಳ ಮೇಲೆ ತಂದೆಯಿಂದ ಹಲ್ಲೆ!
ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ ತಾಲ್ಲೂಕಿನ ಕೆಂಚಾರ್ಲಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಬಾಲಕಿಗೆ ಲೈಂಗಿಕ ಕ್ರಿಯೆಗೆ ಒತ್ತಾಯ ಮಾಡಿದ್ದಲ್ಲದೇ ಆಕೆ ಒಪ್ಪದಿದ್ದಕ್ಕೆ ತಂದೆಯೇ ಹಲ್ಲೆ ಮಾಡಿದ ಆರೋಪ ಕೇಳಿಬಂದಿದೆ.
ಅನ್ಯವ್ಯಕ್ತಿಯೊಂದಿಗೆ ಲೈಂಗಿಕ ಕ್ರಿಯೆಗೆ ಒಪ್ಪದ ಬಾಲಕಿಗೆ ತಂದೆಯೇ ಹಲ್ಲೆ ಮಾಡಿ, ನಂತರ ಬಲವಂತವಾಗಿ ರೂಮಿನಲ್ಲಿ ಕೂಡು ಹಾಕಿ ಲೈಂಗಿಕ ಪ್ರಚೋದನೆಗೆ ಒತ್ತಾಯ ಮಾಡಿದ್ದಾನೆ ಎನ್ನಲಾಗಿದೆ. ನಂತರ ಪೊಲೀಸರು ಬಂದು ಬಾಲಕಿಯನ್ನು ರಕ್ಷಣೆ ಮಾಡಿದ್ದಾರೆ.
112 ಗೆ ಕರೆ ಮಾಡಿ, ಪೊಲೀಸರಿಂದ ಬಾಲಕಿ ರಕ್ಷಣೆ!
ಬಾಲಕಿ 112 ಗೆ ಕರೆ ಮಾಡಿದ್ದು, ಕೂಡಲೇ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಆಕೆಯನ್ನು ರಕ್ಷಣೆ ಮಾಡಿದ್ದಾರೆ. ಸದ್ಯ ಸಂತ್ರಸ್ತ ಬಾಲಕಿಗೆ ಚಿಕ್ಕಬಳ್ಳಾಪುರ ಬಾಲಮಂದಿರದಲ್ಲಿ ಹಾರೈಕೆ ಮಾಡಲಾಗುತ್ತಿದೆ.
ಇನ್ನೂ ಇತ್ತ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲ್ಲೂಕಿನ ಕೆಂಚಾರ್ಲಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ತಂದೆ ಮೇಲೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಪೊಲೀಸರು ಇದೀಗ ತನಿಖೆಗೆ ಇಳಿದಿದ್ದು, ವಿಚಾರಣೆ ನಡೆಸುತ್ತಿದ್ದಾರೆ.