Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ನಿರ್ದೇಶಕ ಮೋಹನ್ ಶ್ರೀವತ್ಸರ ದುಡುಕಿನ ನಿರ್ಧಾರ: ಸಿನಿಮಾ ಫ್ಲಾಪ್ ಆದ ಕಾರಣ ಚಪ್ಪಲಿಯಲ್ಲಿ ಹೊಡೆದುಕೊಂಡು ಬೇಸರ

Spread the love

ಹೈದರಾಬಾದ್:‌ ಒಂದು ಸಿನಿಮಾ ಮಾಡಿ ಅದನ್ನು ಥಿಯೇಟರ್‌ಗೆ ತರಬೇಕಾದರೆ, ಅದರ ಹಿಂದೆ ನೂರಾರು ಕೆಲಸಗಳಿರುತ್ತದೆ. ಮೊದಲಿಗೆ ಪ್ರಚಾರ ಕೆಲಸವಾಗಬೇಕು, ಥಿಯೇಟರ್‌ ಸಿಗಬೇಕು ಈ ಎರಡು ಸರಿಯಾದ ರೀತಿಯಲ್ಲಿದ್ರೂ ಕೆಲವೊಮ್ಮೆ ಪ್ರೇಕ್ಷಕರು ಸಿನಿಮಾ ನೋಡೋಕೆ ಬರೋದೆ ಇಲ್ಲ.

ಸಿನಿಮಾ ರಿಲೀಸ್‌ಗೂ ಮುನ್ನ ನಟ – ನಟಿಯರು ಅಥವಾ ನಿರ್ದೇಶಕರು ನಮ್ಮ ಸಿನಿಮಾ ನಿಮಗೆ ಖಂಡಿತ ಇಷ್ಟವಾಗುತ್ತದೆ. ಇಷ್ಟವಾಗಿಲ್ಲ ಅಂದ್ರೆ ಟಿಕೆಟ್‌ ಹಣ ವಾಪಾಸ್‌ ನೀಡುತ್ತೇವೆ ಅದು – ಇದು ಎನ್ನುತ್ತಾ ಸಿನಿಮಾದ ಬಗ್ಗೆ ಹೇಗಾದರೂ ಮಾಡಿ ಹೈಪ್‌ ಹುಟ್ಟಿಸುವ ತಂತ್ರವನ್ನು ಮಾಡುತ್ತಾರೆ.

ಆದರೆ ಇಲ್ಲೊಬ್ಬ ನಿರ್ದೇಶಕರು ತನ್ನ ಸಿನಿಮಾ ಬಿಡುಗಡೆ ಆದ ಬಳಿಕ ಚಪ್ಪಲಿಯಲ್ಲಿ ತನ್ನ ತಲೆಗೆ ತಾನೇ ಹೊಡೆದುಕೊಂಡಿದ್ದಾರೆ.!

ಕೆಲ ದಿನಗಳ ಹಿಂದಷ್ಟೇ ಟಾಲಿವುಡ್‌ನಲ್ಲಿ ‘ಬಾರ್ಬರಿಕ್’ ಎನ್ನುವ ಸಿನಿಮಾ ತೆರೆಗೆ ಬಂದಿದೆ. ಬಹುಭಾಷಾ ನಟ, ಕನ್ನಡದ ವಸಿಷ್ಠ ಸಿಂಹ, ಹಿರಿಯ ನಟ ಸತ್ಯರಾಜ್ ಮುಂತಾದ ಚಿತ್ರದಲ್ಲಿ ನಟಿಸಿದ್ದಾರೆ.

ಸಿನಿಮಾ ರಿಲೀಸ್ ಆಗಿ ಕೆಲ ದಿನಗಳೇ ಕಳೆದಿದೆ. ಆದರೆ ಸಿನಿಮಾಕ್ಕೆ ಅಂದುಕೊಂಡ ಪ್ರತಿಕ್ರಿಯೆ ಬಂದಿಲ್ಲ. ನಿರೀಕ್ಷೆಗೆ ತಕ್ಕ ಹಾಗೆ ಚಿತ್ರ ಪ್ರದರ್ಶನಗೊಂಡಿಲ್ಲ. ಆ ನಿಟ್ಟಿನಲ್ಲಿ ಚಿತ್ರದ ನಿರ್ದೇಶಕರು ಬಹಳ ಹತಾಶೆಗೆ ಒಳಗಾಗಿದ್ದಾರೆ.

ಬಾರ್ಬರಿಕ್'(Barbarik Movie) ಚಿತ್ರವನ್ನು ಮೋಹನ್ ಶ್ರೀವತ್ಸ (Film Director Mohan Srivatsa) ನಿರ್ದೇಶನ ಮಾಡಿದ್ದಾರೆ. ಚಿತ್ರ ರಿಲೀಸ್‌ ಆಗುವ ಕೆಲ ದಿನಗಳ ಮುಂಚೆ ಮೋಹನ್‌ ಅವರು “ನಮ್ಮ ಸಿನಿಮಾ ಇಷ್ಟವಾಗದಿದ್ರೆ ನನ್ನ ಚಪ್ಪಲಿಯಲ್ಲಿ ನಾನೇ ಹೊಡೆದುಕೊಳ್ಳುತ್ತೇನೆ ” ಎನ್ನುವ ಮಾತನ್ನು ಹೇಳಿದ್ದರು.

ಇದೀಗ ಸಿನಿಮಾಕ್ಕೆ ನಿರಾಸದಾಯಕ ಪ್ರತಿಕ್ರಿಯೆ ಬಂದ ಹಿನ್ನೆಲೆಯಲ್ಲಿ ನಿರ್ದೇಶಕ ಮೋಹನ್‌ ಅವರು ಬೇಸರ ಹೊರಹಾಕಿದ್ದು, ಚಪ್ಪಲಿಯಲ್ಲಿ ತಲೆಗೆ ಹೊಡೆದುಕೊಂಡಿದ್ದಾರೆ.

ಈ ಬಗ್ಗೆ ಫೇಸ್‌ಬುಕ್‌ನಲ್ಲಿ ಅವರು ವಿಡಿಯೋ ಹಂಚಿಕೊಂಡಿದ್ದಾರೆ. “ನಾನು ನನ್ನ ಸಿನಿಮಾವನ್ನು ನೋಡಲು ಥಿಯೇಟರ್‌ಗೆ ಹೋಗಿದ್ದೆ. ಅಲ್ಲಿ 10 ಜನರಿದ್ದರು. ಅವರಿಗೆ ನಾನು ನಿರ್ದೇಶಕನೆಂದು ಹೇಳದೆ ಅಭಿಪ್ರಾಯ ಕೇಳುತ್ತಾ ಹೋದೆ. ಎಲ್ಲರೂ ಸಿನಿಮಾ ಚೆನ್ನಾಗಿದೆ ಅಂತ ಹೇಳಿದ್ರು. ಆ ಬಳಿಕ ನಾನು ಡೈರೆಕ್ಟರ್‌ ಅಂತ ಹೇಳಿದಾಗ ಎಲ್ಲರೂ ನನ್ನನ್ನು ತಬ್ಬಿಕೊಂಡು ಸಿನಿಮಾ ಅಭಿನಂದಿಸಿದರು” ಎಂದಿದ್ದಾರೆ.

“ನನ್ನ ಕಣ್ಣಲ್ಲಿ ನೀರು ಬಂತು. ಸಿನಿಮಾ ಚೆನ್ನಾಗಿದ್ರೆ 10 ಮಂದಿ ಮಾತ್ರ ಥಿಯೇಟರ್‌ನಲ್ಲಿ ಇದ್ದಾರೆ ಅಂಥ ಅನ್ನಿಸಿತು. ಜನ ಥಿಯೇಟರ್‌ಗೆ ಬರೋದಕ್ಕೆ ಏನೇನು ಮಾಡಬೇಕು. ನಾನು ತುಂಬಾ ಕಷ್ಟಪಟ್ಟಿದ್ದೇನೆ. ಏನು ಮಾಡುವುದೆಂದು ತೋಚುತ್ತಿಲ್ಲ. ಆತ್ಮಹತ್ಯೆ ಮಾಡಿಕೊಳ್ಳೋಣ ಎಂದು ಸಹ ಅನಿಸುತ್ತಿದೆ” ಎಂದು ಕಣ್ಣಿರು ಹಾಕಿದ್ದಾರೆ.

ಮಲಯಾಳಂ ಸಿನಿಮಾಗಳನ್ನು ನೋಡುತ್ತೀರಿ ನಮ್ಮ ಭಾಷೆಯ ಸಿನಿಮಾ ಯಾಕೆ ನೋಡುತ್ತಿಲ್ಲ. ನಾನು ಮಾಲಿವುಡ್‌ಗೆ ಹೋಗಿ ಅಲ್ಲೇ ಸಿನಿಮಾ ಮಾಡುತ್ತೇನೆ. ನನ್ನ ಜನರಿಗೆ ಸಿನಿಮಾ ಇಷ್ಟವಾಗದಿದ್ರೆ ಚಪ್ಪಲಿಯಲ್ಲಿ ಹೊಡೆದುಕೊಳ್ಳುತ್ತೇನೆ ಎಂದಿದ್ದೆ. ಹಾಗೆ ಮಾಡುತ್ತೇನೆ” ಎಂದಿದ್ದಾರೆ.

ತನಗೆ ತಾನೇ ಚಪ್ಪಲಿಯಲ್ಲಿ ನಿರ್ದೇಶಕರು ಹೊಡೆದುಕೊಂಡಿದ್ದು, ವಿಡಿಯೋ ವೈರಲ್‌ ಆಗಿದೆ.


Spread the love
Share:

administrator

Leave a Reply

Your email address will not be published. Required fields are marked *