Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಬೆಳಗಾವಿಯಲ್ಲಿ ‘ಡಿನ್ನರ್ ಡಿಪ್ಲೊಮಸಿ’ ಸಮರ: ಡಿಕೆಶಿಗೆ ಕೌಂಟರ್ ಕೊಡಲು ಸತೀಶ್ ಜಾರಕಿಹೊಳಿ ನೇತೃತ್ವದಲ್ಲಿ 36 ಶಾಸಕರ ಭರ್ಜರಿ ಶಕ್ತಿ ಪ್ರದರ್ಶನ!

Spread the love

ಬೆಳಗಾವಿಯ ಚಳಿಗಾಲದ ಅಧಿವೇಶನದ ನಡುವೆಯೇ ರಾಜ್ಯ ಕಾಂಗ್ರೆಸ್‌ನಲ್ಲಿ ಬಣ ರಾಜಕೀಯದ ಕಿಚ್ಚು ಮತ್ತೆ ಜೋರಾಗಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಬೆಂಬಲಿಗರ ನಡುವೆ ‘ಡಿನ್ನರ್ ಮೀಟಿಂಗ್’ ಮೂಲಕ ಶಕ್ತಿ ಪ್ರದರ್ಶನ ನಡೆದಿದೆ. ಇತ್ತೀಚೆಗಷ್ಟೇ ಡಿ.ಕೆ. ಶಿವಕುಮಾರ್ ಅವರು ಆಯೋಜಿಸಿದ್ದ ಔತಣಕೂಟಕ್ಕೆ ಪ್ರತಿಯಾಗಿ, ಸಿದ್ದರಾಮಯ್ಯ ಅವರ ಆಪ್ತ ಬಣದ ಪ್ರಭಾವಿ ನಾಯಕ ಸತೀಶ್ ಜಾರಕಿಹೊಳಿ ಅವರು ಬೆಳಗಾವಿಯ ಖಾಸಗಿ ಹೋಟೆಲ್‌ನಲ್ಲಿ ಮತ್ತೊಂದು ಡಿನ್ನರ್ ಸಭೆ ಏರ್ಪಡಿಸುವ ಮೂಲಕ ಹೈಕಮಾಂಡ್‌ಗೆ ಪ್ರಬಲ ಸಂದೇಶ ರವಾನಿಸಿದ್ದಾರೆ.

ಈ ಸಭೆಯಲ್ಲಿ ಸಿಎಂ ಪುತ್ರ ಯತೀಂದ್ರ ಸಿದ್ದರಾಮಯ್ಯ ಸೇರಿದಂತೆ ಸುಮಾರು 36 ಮಂದಿ ಶಾಸಕರು ಭಾಗವಹಿಸಿರುವುದು ವಿಶೇಷವಾಗಿದ್ದು, ಇದು ನೇರವಾಗಿ ಡಿ.ಕೆ. ಶಿವಕುಮಾರ್ ಅವರಿಗೆ ನೀಡಿದ ಕೌಂಟರ್ ಎಂದೇ ವಿಶ್ಲೇಷಿಸಲಾಗುತ್ತಿದೆ. ಅಧಿಕಾರ ಹಂಚಿಕೆ ಮತ್ತು ಮುಖ್ಯಮಂತ್ರಿ ಬದಲಾವಣೆಯ ಚರ್ಚೆಗಳು ಹೈಕಮಾಂಡ್ ಅಂಗಳದಲ್ಲಿ ನಡೆಯುತ್ತಿರುವಾಗಲೇ, ನಮ್ಮ ಹಿಂದೆ ದೊಡ್ಡ ಸಂಖ್ಯೆಯ ಶಾಸಕರ ಬಲವಿದೆ ಎಂದು ತೋರಿಸಲು ಸಿದ್ದರಾಮಯ್ಯ ಆಪ್ತರು ಈ ತಂತ್ರಗಾರಿಕೆ ರೂಪಿಸಿದ್ದಾರೆ ಎನ್ನಲಾಗಿದೆ.

ಈ ಡಿನ್ನರ್ ಸಭೆಯಲ್ಲಿ ಕೆ.ಎನ್. ರಾಜಣ್ಣ, ರವಿ ಬೋಸರಾಜು, ಅಪ್ಪಾಜಿ ನಾಡಗೌಡ, ಶ್ರೀನಿವಾಸ್ ಮಾನೆ ಸೇರಿದಂತೆ ಹಲವು ಪ್ರಮುಖ ಶಾಸಕರು ಉಪಸ್ಥಿತರಿದ್ದು, ಆಡಳಿತ ಪಕ್ಷದ ಒಳಗಿನ ಮುಸುಕಿನ ಗುದ್ದಾಟವನ್ನು ಬಹಿರಂಗಪಡಿಸಿದೆ. ಮೇಲ್ನೋಟಕ್ಕೆ ಇದು ಕೇವಲ ಸೌಜನ್ಯದ ಕೂಟ ಎಂದು ಬಿಂಬಿಸಲಾಗುತ್ತಿದ್ದರೂ, ಆಂತರಿಕವಾಗಿ ರಾಜ್ಯ ರಾಜಕಾರಣದ ದಿಕ್ಕನ್ನು ಬದಲಿಸುವ ನಿಟ್ಟಿನಲ್ಲಿ ನಡೆದ ಮಹತ್ವದ ಸಮಾಲೋಚನೆ ಇದಾಗಿದೆ ಎಂದು ಹೇಳಲಾಗುತ್ತಿದೆ.

ಒಂದೆಡೆ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿಯಾಗಿ ಮುಂದುವರಿಯಬೇಕು ಎಂಬ ಕೂಗು ಬಲವಾಗುತ್ತಿದ್ದರೆ, ಇನ್ನೊಂದೆಡೆ ಒಪ್ಪಂದದ ಪ್ರಕಾರ ಅಧಿಕಾರ ಹಂಚಿಕೆಯಾಗಬೇಕು ಎಂಬ ಒತ್ತಡವೂ ಇದೆ. ಈ ಎಲ್ಲಾ ಗೊಂದಲಗಳ ನಡುವೆ ಬೆಳಗಾವಿಯಲ್ಲಿ ನಡೆದ ಈ ‘ಡಿನ್ನರ್ ಡಿಪ್ಲೊಮಸಿ’ ರಾಜ್ಯ ಕಾಂಗ್ರೆಸ್‌ನಲ್ಲಿ ಮುಂದಿನ ದಿನಗಳಲ್ಲಿ ಯಾವ ತಿರುವು ಪಡೆಯಲಿದೆ ಎಂಬುದು ತೀವ್ರ ಕುತೂಹಲ ಮೂಡಿಸಿದೆ.


Spread the love
Share:

administrator

Leave a Reply

Your email address will not be published. Required fields are marked *