‘ಧರ್ಮಸ್ಥಳ ಫೈಲ್ಸ್’ ಪ್ಯಾನ್ ಇಂಡಿಯಾ ಸಿನಿಮಾ ಖಚಿತ: ನಿರ್ಮಾಪಕ ಎ.ಗಣೇಶ್ ಅವರಿಂದ ಅಧಿಕೃತ ಘೋಷಣೆ!

ಧರ್ಮಸ್ಥಳ ಫೈಲ್ಸ್’ ಪ್ಯಾನ್ ಇಂಡಿಯಾ ಸಿನಿಮಾ ಬರ್ತಿದೆ ಎಂಬ ಸುದ್ದಿ ಇವತ್ತು ಬೆಳಿಗ್ಗೆಯಿಂದಲೇ ಓಡಾಡುತ್ತಿತ್ತು. ಧರ್ಮಸ್ಥಳ ಫೈಲ್ಸ್ ಸಿನಿಮಾಗೆ ಪ್ಲಾನ್ ಜೊತೆಗೆ ವೆಬ್ ಸಿರೀಸ್ ಮಾಡೋಕೆ ಸಿದ್ದತೆ ನಡೆದಿದೆ ಎಂದು ಸುದ್ದಿಯಾಗಿದೆ. ಫಿಲಂ ಚೇಂಬರ್ ನಲ್ಲಿ ಈಗಾಗಲೆ ಟೈಟಲ್ ರಿಜಿಸ್ಟರ್ ಮಾಡಿಸಿರೋ ಚಿತ್ರತಂಡ ಈ ಬಗ್ಗೆ ಇದೀಗ ಮಾಹಿತಿ ಬಿಡುಗಡೆ ಮಾಡಿದೆ.

ಈ ಸಿನಿಮಾ ಮಾಡೋದಕ್ಕೆ ಫಿಲಂ ಚೇಂಬರ್ ಟೈಟಲ್ ಕಮಿಟಿಯಿಂದಲೂ ಅನುಮತಿ ಪಡೆದಿದೆ. ಕಾನೂನು ತೊಡಕು ಉಂಟಾದ್ರೆ ಅದರ ಪ್ರಕ್ರಿಯೆ ಪಾಲಿಸಿ ಸಿನಿಮಾ ಮಾಡೋಕೆ ತಂಡ ರೆಡಿಯಾಗಿದೆ. ಈಗಾಗಲೇ ನುರಿತ ನಿರ್ದೇಶಕರಿಂದ ಕಥೆ ತಯಾರು ಮಾಡ್ತಿದೆಯಂತೆ ಚಿತ್ರತಂಡ. ವಿಕೆ ಪ್ರಕಾಶ್ ಮಲಯಾಳಿ ನಿರ್ದೇಶಕರಿಂದ ಸಿನಿಮಾ ಮಾಡ್ಸೋ ಪ್ಲಾನ್ ನಡೀತಿದೆ. ಎಂ ಎಸ್ ರಮೇಶ್ ಕಥೆ ತಯಾರು ಮಾಡ್ತಿದ್ದಾರೆ. ಶ್ರೀರಾಮ್ ಸೆರಿದಂತೆ ಹಲವು ಸಿನಿಮಾ ಮಾಡಿರೋ ನಿರ್ದೇಶಕರಿಂದ ಕಥೆ ತಯಾರಾಗ್ತಿದೆ. ಓಂ ಶ್ರೀ ಚಾಮುಂಡೇಶ್ವೇರಿ ಪ್ರೋಡಕ್ಷನ್ ನಡಿ ತಯಾರಾಗ್ತಿದೆ’ ಎಂದು ಈಗಾಗಲೇ ಸುದ್ದಿಯಾಗಿತ್ತು.
ಕೇರಳ ಫೈಲ್ಸ್, ಕಾಶ್ಮೀರಿ ಫೈಲ್ಸ್ ಸಿನಿಮಾಗಳು ಬಂದಿವೆ. ಅದೇ ರೀತಿಯಲ್ಲಿ ‘ಧರ್ಮಸ್ಥಳ ಫೈಲ್ಸ್’ ಸಿನಿಮಾ ಮಾಡೋ ಪ್ಲಾನ್ ನಡೀತಿದೆ ಅಂದಿರೋ ಚಿತ್ರತಂಡ. ಸದ್ಯದಲ್ಲಿಯೇ ಬಹಿರಂಗವಾಗಿ ಅನೌನ್ಸ್ ಮಾಡಲಿದೆ ಚಿತ್ರತಂಡ ಎನ್ನಲಾಗಿತ್ತು.. ಇದೀಗ ಕನ್ನಡದ ನಿರ್ಮಾಪಕರಾದ ಎ ಗಣೇಶ್ ಅವರು ಈ ಸಿನಿಮಾ ನಾನು ಮಾಡ್ತಿದ್ದೇನೆ ಎಂದು ಬಹಿರಂಗವಾಗಿಯೇ ಹೇಳಿಕೆ ನೀಡಿದ್ದಾರೆ.
ಕನ್ನಡದಲ್ಲಿ ಬರುತಿದೆ ಧರ್ಮಸ್ಥಳ ಫೈಲ್ಸ್; ಸಿನಿಮಾ ಮಾಡ್ತಿದ್ದೀನಿ ಎಂದ ನಿರ್ಮಾಪಕ ಎ ಗಣೇಶ್!
ಹೌದು, ಎ ಗಣೇಶ್ ( A Ganesh) ಈ ಸಿನಿಮಾ ಮಾಡೋ ಬಗ್ಗೆ ಇದೀಗ ಫಿಲಂ ಚೆಂಬರ್ ಅಂದ್ರೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ನರಸಿಂಹುಲು ಹೇಳಿದ್ದಾರೆ. ನಮ್ಮಲ್ಲಿ ಸಿನಿಮಾ ಟೈಟಲ್ ರಿಜಿಸ್ಟರ್ ಆಗಿದೆ. ನಿರ್ಮಾಪಕ ಎ ಗಣೇಶ್ ಟೈಟಲ್ ರಿಜಿಸ್ಟರ್ ಮಾಡಿಸಿದ್ದಾರೆ. ‘ಸಿನಿಮಾ ಬಗ್ಗೆ ಮುಂದಿನ ದಿನಗಳಲ್ಲಿ ಸಮಸ್ಯೆ ಆದ್ರೆ ಅದಕ್ಕೆ ಸಿನಿಮಾ ತಂದವೇ ಹೊಣೆ ಅಂತ ಮುಚ್ಚಳಿಕೆ ಬರೆಸಿಕೊಂಡು ಟೈಟಲ್ ಕೋಟಿದ್ದೇವೆ’ ಎಂದಿದ್ದಾರೆ ಫಿಲಂ ಚೇಂಬರ್ ಅಧ್ಯಕ್ಷರು.
‘ಕಾಶ್ಮೀರಿ ಫೈಲ್ಸ್ ಕೇರಳ ಫಿಲ್ಸ್ ಬಂದ ಹಾಗೆ ಧರ್ಮಸ್ಥಳ ಫಿಲ್ಸ್ ಕೂಡ ಗೆದ್ದು ದುಡ್ಡು ಮಾಡಲಿ’ ಎಂದಿದ್ದಾರೆ ನಿರ್ಮಾಪಕ ಎ ಗಣೇಶ್.
ಏಷ್ಯಾ ನೆಟ್ ಸುವರ್ಣ ನ್ಯೂಸ್ ಜೊತೆ ಧರ್ಮಸ್ಥಳ ಫೈಲ್ಸ್ ಸಿನಿಮಾ ಬಗ್ಗೆ ಮಾಹಿತಿ ಹಂಚಿಕೊಂಡ ನಿರ್ಮಾಪಕ ಎ ಗಣೇಶ್, ಸಿನಿಮಾ ಮಾಡಲು ಫಿಲಂಚೇಂಬರ್ ನಿಂದ ಅನುಮತಿ ಸಿಕ್ಕಿದೆ. ದೊಡ್ಡ ದೊಡ್ಡ ಸ್ಟಾರ್ ಗಳನ್ನ ಸಂಪರ್ಕ ಮಾಡ್ತಿದ್ದಿನಿ. ತುಂಬಾ ದೊಡ್ಡ ಸಿನಿಮಾ ಮಾಡ್ತಿನಿ, ಪಾನ್ ಇಂಡಿಯನ್ ಸಿನಿಮಾ ಆಗುತ್ತೆ, ಹಾಗೆ ವೆಬ್ ಸಿರೀಸ್ ಮಾಡುತ್ತೇವೆ’ ಎಂದಿದ್ದಾರೆ ಎ ಗಣೇಶ್.
ಮುಂಬರುವ ನಮ್ಮ ‘ಧರ್ಮಸ್ಥಳ ಫೈಲ್ಸ್’ಗೆ ನಿರ್ದೇಶಕರಾಗಿ ಕೆವಿ ಪ್ರಕಾಶ್ ಅವರನ್ನ ಸಂಪರ್ಕಿಸಿದ್ದಿನಿ.. ಎಂ ಎಸ್ ರಮೇಶ್ ಅವರಿಂದ ಕಥೆ ಬರೆಸೋ ಪ್ಲಾನ್ ನಡೀತಿದೆ. ಕೆರಳ ಫೈಲ್ಸ್… ಕಾಶ್ಮಿರ ಫೈಲ್ಸ್.. ರೀತಿ ಧರ್ಮಸ್ಥಳ ಫೈಲ್ಸ್ ಮಾಡೋ ಪ್ಲಾನ್ ಇದೆ. ಸಿನಿಮಾ ಮಾತ್ರವಲ್ಲ ವೆಬ್ ಸಿರೀಸ್ ಕೂಡ ಮಾಡ್ತೀವಿ.. ಈಗಾಗಲೇ ಪೋಸ್ಟರ್ ಡಿಜೈನ್ ಕೆಲಸ ಆರಂಭ ಆಗಿದೆ… ನವೆಂಬರ್ ನಿಂದ ಎಲ್ಲ ಕೆಲಸ ಶುರು ಆಗುತ್ತೆ.. ಕಾನೂನು ತೊಡಕು ಬಂದ್ರೆ ನಾವೇ ನಿಭಾಯಿಸಿಕೊಳ್ಳಬೇಕು.. ಅದಕ್ಕೆ ಎಲ್ಲ ಲೀಗಲ್‌ಟೀಂ ರೆಡಿ ಮಾಡಿ, 6 ಭಾಷೆಗಳಲ್ಲಿ ಪ್ಯಾನ್ ಇಂಡಿಯಾ ಸಿನಿಮಾ ಆಗುತ್ತೆ ಧರ್ಮಸ್ಥಳ ಫೈಲ್ಸ್’ ಎಂದಿದ್ದಾರೆ ಎ ಗಣೇಶ್.
