ನಂದಿನಿ ಪಾರ್ಲರ್‌ನಲ್ಲಿ ಡಿಜಿಪಿ ಓಂ ಪ್ರಕಾಶ್ ಪುತ್ರಿ ಕೃತಿಕಾ ಹುಚ್ಚಾಟ-ಸಿಬ್ಬಂದಿಗೆ ಹಲ್ಲೆ

ಬೆಂಗಳೂರು :ಇತ್ತೀಚೆಗಷ್ಟೇ ಸ್ವಂತ ಹೆಂಡ್ತಿಯಿಂದಲೇ ಕೊಲೆಯಾದ ಡಿಜಿಪಿ ಓಂ ಪ್ರಕಾಶ್ ಪುತ್ರಿ ಕೃತಿಕಾ ಹುಚ್ಚಾಟ ಮೆರೆದಿದ್ದಾರೆ. ನಂದಿನಿ ಪಾರ್ಲರ್ ಗೆ ನುಗ್ಗಿ ವಸ್ತುಗಳನ್ನು ಪೀಸ್ ಪೀಸ್ ಮಾಡಿ ಉದ್ಧಟತನ ಮೆರೆದಿದ್ದಾರೆ.
ಕೃತಿಕಾ ಹುಚ್ಚಾಟದ ವಿಚಾರ ಈಗ ಎಲ್ಲೆಡೆ ದೊಡ್ಡ ಸದ್ದು ಮಾಡುತ್ತಿದೆ.

ಪಾರ್ಲರ್ ಸಿಬ್ಬಂದಿಗೆ ಕೂಡ ಕೃತಿಕಾ ಥಳಿಸಿದ್ದಾರೆ. ಕೃತ್ತಿಕಾ ವರ್ತನೆಗೆ ಸ್ಥಳೀಯರು ಶಾಕ್ ಆಗಿದ್ದಾರೆ. ಸಿಬ್ಬಂದಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದು, ಎಲ್ಲರೆದುರು ಹುಚ್ಚರಂತೆ ವರ್ತಿಸಿದ್ದಾರೆ.

ಆಕೆಯ ಮನೆ ಮುಂದೆಯೇ ಇರೋ ಅಂಗಡಿ ಬಳಿ ಬಂದು ಸ್ವಲ್ಪ ಹೊತ್ತು ಹಾಗೇ ನಿಂತು ಅಲ್ಲಿನ ಮಾಲೀಕನನ್ನು ಕೃತ್ತಿಕಾ ದಿಟ್ಟಿಸಿ ನೋಡಿದ್ದಾರೆ. ಏಕಾಏಕಿ ಮಾಲೀಕರನ್ನು ಬೈದ ಕೃತ್ತಿಕಾ ಅಂಗಡಿಗಳಲ್ಲಿದ್ದ ಎಲ್ಲಾ ವಸ್ತುಗಳನ್ನು ಹಾಳು ಮಾಡಿದ್ದಾರೆ. ಈ ವೇಳೆ ಪೊಲೀಸರು ಬಂದಾಕ್ಷಣ ಏನೂ ಗೊತ್ತಿಲ್ಲದಂತೆ ತಮ್ಮ ಮನೆಗೆ ತೆರಳಿದ್ದಾರೆ.
ನಿವೃತ್ತ ಡಿಜಿ ಓಂ ಪ್ರಕಾಶ್ ಕೊಲೆಯಾದ ನಂತರ ಕೃತ್ತಿಕಾ ಸಹೋದರ ಬೇರೆ ಕಡೆಗೆ ಶಿಫ್ಟ್ ಆಗಿದ್ದಾರೆ. ಇಡೀ ಮನೆಯಲ್ಲಿ ಮಗಳು ಕೃತಿಕಾ ಒಂಟಿಯಾಗಿ ವಾಸವಾಗಿದ್ದಾರೆ.
