Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

20 ವರ್ಷ ಹಳೆಯ ವಿಮಾನ ಖರೀದಿಗೆ ವಿನಾಯಿತಿ ನೀಡಲಿರುವ ಡಿಜಿಸಿಎ

Spread the love

ಹೊಸದಿಲ್ಲಿ: ಜಾಗತಿಕ ವಿಮಾನ ಪೂರೈಕೆ ಸರಪಣಿಯಲ್ಲಿನ ವ್ಯತ್ಯಯದಿಂದಾಗಿ, ವಿಮಾನ ಪೂರೈಕೆಯಲ್ಲಿ ಸಮಸ್ಯೆ ತಲೆದೋರಿರುವ ಹಿನ್ನೆಲೆಯಲ್ಲಿ 20 ವರ್ಷದಷ್ಟು ಹಳೆಯದಾದ ವಿಮಾನಗಳನ್ನು ಆಮದು ಮಾಡಿಕೊಳ್ಳಲು ವಿಮಾನ ಯಾನ ಸಂಸ್ಥೆಗಳಿಗೆ ಅನುಮತಿ ನೀಡಲು ನಾಗರಿಕ ವಿಮಾನ ಯಾನ ಪ್ರಧಾನ ನಿರ್ದೇಶನಾಲಯ ನಿಯಮಗಳನ್ನು ತಿದ್ದುಪಡಿ ಮಾಡಲು ಮುಂದಾಗಿದೆ ಎಂದು ವರದಿಯಾಗಿದೆ.

ಸದ್ಯ ದೇಶದೊಳಕ್ಕೆ 18 ವರ್ಷಗಳಷ್ಟು ಹಳೆಯದಾದ ಪ್ರೆಷರೈಸ್ಡ್ ಏರ್ ಕ್ರಾಫ್ಟ್ ವಿಮಾನಗಳನ್ನು ಆಮದು ಮಾಡಿಕೊಳ್ಳಲು ಅವಕಾಶವಿದ್ದು, ಈ ಆಮದು ಕೆಲವು ಷರತ್ತುಗಳಿಗೆ ಒಳಪಟ್ಟಿದೆ.

ಚಾರ್ಟರ್, ಸಾಮಾನ್ಯ ವಾಯು ಯಾನ ಹಾಗೂ ಇನ್ನಿತರ ಕಾರ್ಯಾಚರಣೆಗಳು ಸೇರಿದಂತೆ ಪೂರ್ವನಿಗದಿತ ಹಾಗೂ ಪೂರ್ವನಿಗದಿತವಲ್ಲದ ಪ್ರಯಾಣಕ್ಕಾಗಿ ಆಮದು ಮಾಡಿಕೊಳ್ಳಲಾಗುವ ವಿಮಾನಗಳ ವಯಸ್ಸಿಗೆ ಸಂಬಂಧಿಸಿದ ನಾಗರಿಕ ವಿಮಾನ ಯಾನ ಅಗತ್ಯತೆಗಳು (ಸಿಎಆರ್) ಅನ್ನು ತಿದ್ದುಪಡಿ ಮಾಡುವ ಪ್ರಸ್ತಾವವನ್ನು ನಾಗರಿಕ ವಿಮಾನ ಯಾನ ಪ್ರಧಾನ ನಿರ್ದೇಶನಾಲಯ ಮಂಡಿಸಿದೆ.

ಈ ಹಿಂದೆ ಕೆಲವು ಷರತ್ತುಗಳಿಗೊಳಪಟ್ಟಂತೆ 18 ವರ್ಷಗಳವರೆಗಿನ ಪ್ರೆಷರೈಸ್ಡ್ ಏರ್ ಕ್ರಾಫ್ಟ್ ವಿಮಾನವನ್ನು ಆಮದು ಮಾಡಿಕೊಳ್ಳವಲು ಇದ್ದ ಅನುಮತಿಯನ್ನು 20 ವರ್ಷಗಳಿಗೆ ಏರಿಕೆ ಮಾಡುವ ಪ್ರಸ್ತಾವವನ್ನು ಕರಡು ನಾಗರಿಕ ವಿಮಾನ ಯಾನ ಅಗತ್ಯತೆಗಳು ಒಳಗೊಂಡಿದ್ದು, ಈ ಹಿಂದೆ 20 ವರ್ಷಗಳಷ್ಟಿದ್ದ ಪ್ರೆಷರೈಸ್ಡ್ ಏರ್ ಕ್ರಾಫ್ಟ್ ವಿಮಾನಗಳ ಆಮದಿನ ಮಿತಿಯನ್ನು 25 ವರ್ಷಗಳಿಗೆ ಏರಿಕೆ ಮಾಡಲು ಉದ್ದೇಶಿಸಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ ಎಂದು PTI ಸುದ್ದಿ ಸಂಸ್ಥೆ ವರದಿ ಮಾಡಿದೆ.

ನಾಗರಿಕ ವಿಮಾನ ಯಾನ ಅಗತ್ಯತೆಗಳು ಕರಡು ಪ್ರಸ್ತಾವನೆ ಪ್ರಕಾರ, ಆಮದು ಮಾಡಿಕೊಳ್ಳಲು ಉದ್ದೇಶಿಸಲಾಗಿರುವ ಪ್ರೆಷರೈಸ್ಡ್ ಏರ್ ಕ್ರಾಫ್ಟ್ ವಿಮಾನಗಳನ್ನು ಪ್ರಯಾಣಿಕರ ಸೇವೆಗೆ ಬಳಸಬೇಕು (ಪೂರ್ವನಿಗದಿತ, ಪೂರ್ವನಿಗದಿತವಲ್ಲದ ಸೇವೆಗಳು) ಹಾಗೂ ಸಾಮಾನ್ಯ ವಿಮಾನ ಯಾನ ಸೇವೆಗೆ ಬಳಕೆಯಾಗುವ ವಿಮಾನಗಳ ಪ್ರೆಷರೈಸ್ಡ್ ಏರ್ ಕ್ರಾಫ್ಟ್ ಅವಧಿಯು 20 ವರ್ಷ ವಯಸ್ಸನ್ನು ಪೂರೈಸಿರಬಾರದು ಅಥವಾ ಶೇ. 65ರಷ್ಟು ಬಳಕೆಯ ಜೀವಿತಾವಧಿ ವಿನ್ಯಾಸವನ್ನು ಪೂರೈಸಿರಬಾರದು ಎಂಬ ಷರತ್ತು ವಿಧಿಸಲಾಗಿದೆ.

ಪ್ರೆಷರೈಸ್ಡ್ ಏರ್ ಕ್ರಾಫ್ಟ್ ವಿಮಾನಗಳು ಅತ್ಯಂತ ಎತ್ತರದಲ್ಲಿ ಹಾರಾಟ ನಡೆಸುವ ವಿಮಾನಗಳಾಗಿದ್ದು, ಸಾಮಾನ್ಯವಾಗಿ 10,000 ಅಡಿಗಿಂತ ಮೇಲೆ ಹಾರಾಟ ನಡೆಸುತ್ತವೆ. ವಾಣಿಜ್ಯ ವಿಮಾನಗಳಿಗಾಗಿ ಬಳಕೆಯಾಗುವ ಕಿರಿದಾದ ಹೊರಕವಚ ಹಾಗೂ ಅಗಲವಾದ ಹೊರಕವಚ ಹೊಂದಿರುವ ವಿಮಾನಗಳನ್ನು ಒತ್ತಡಕ್ಕೀಡಾದ ವಿಮಾನಗಳು ಎನ್ನಲಾಗುತ್ತದೆ.

ಪ್ರೆಷರೈಸ್ಡ್ ಏರ್ ಕ್ರಾಫ್ಟ್ ವಿಮಾನಗಳು ಕೇವಲ ನೈಸರ್ಗಿಕ ವಾತಾವರಣದ ಒತ್ತಡದಲ್ಲಿ ಮಾತ್ರ ಹಾರಾಟ ನಡೆಸಬಲ್ಲವಾಗಿದ್ದು, ತರಬೇತಿ ವಿಮಾನಗಳಂತೆ ಕೇವಲ ಕಡಿಮೆ ಎತ್ತರದಲ್ಲಿ ಹಾರಾಟ ನಡೆಸಬಲ್ಲವಾಗಿರುತ್ತವೆ. ಈ ವಿಮಾನಗಳ ಹಾರಾಟದ ಎತ್ತರವನ್ನು ಸಾಮಾನ್ಯವಾಗಿ 10,000 ಅಡಿಗೆ ಮಿತಿಗೊಳಿಸಲಾಗಿರುತ್ತದೆ.

ಇತ್ತೀಚಿನ ದಿನಗಳಲ್ಲಿ ಭಾರತೀಯ ವಿಮಾನ ಯಾನ ಸಂಸ್ಥೆಗಳು ತಮ್ಮ ವಿಮಾನಗಳ ಸಂಖ್ಯೆಯನ್ನು ವಿಸ್ತರಿಸುತ್ತಿದ್ದು, ಸುಮಾರು 1,400ಕ್ಕೂ ಹೆಚ್ಚು ವಿಮಾನಗಳ ಪೂರೈಕೆ ಆದೇಶ ಈಗಲೂ ಬಾಕಿಯುಳಿದಿದೆ. ಜಾಗತಿಕ ಪೂರೈಕೆ ಸರಪಳಿ ಸಮಸ್ಯೆಯಿಂದಾಗಿ ವಿಮಾನಗಳ ಲಭ್ಯತೆ ಸವಾಲಾಗಿ ಪರಿಣಮಿಸಿದ್ದು, ಕೆಲವು ವಿಮಾನ ಯಾನ ಸಂಸ್ಥೆಗಳು ಕಡಿಮೆ ಅವಧಿಯ ವಿಮಾನ ಗುತ್ತಿಗೆಯ ಆಯ್ಕೆಯತ್ತ ಮುಖ ಮಾಡಿವೆ.

ಈ ಹಿನ್ನೆಲೆಯಲ್ಲಿ ವಿಮಾನ ಆಮದು ನಿಯಮಗಳಿಗೆ ತಿದ್ದುಪಡಿ ತರಲು ಮುಂದಾಗಿರುವುದರಿಂದ, ವಿಮಾನ ಆಮದು ನಿಯಮಗಳು ವಿಮಾನ ಯಾನ ಸಂಸ್ಥೆಗಳಿಗೆ ವಿಮಾನ ಗುತ್ತಿಗೆ ಆಯ್ಕೆಯಲ್ಲಿ ಮತ್ತಷ್ಟು ಸ್ವಾತಂತ್ರ್ಯ ನೀಡಿದಂತಾಗಲಿದೆ.

ವಿಮಾನ ಯಾನ ಮಾರುಕಟ್ಟೆಯಲ್ಲಿ ಭಾರತ ಜಗತ್ತಿನ ಮೂರನೆಯ ಅತಿ ದೊಡ್ಡ ಮಾರುಕಟ್ಟೆಯಾಗಿದ್ದು, 2030ರ ವೇಳೆಗೆ ವಿಮಾನ ಪ್ರಯಾಣಿಕರ ಸಂಖ್ಯೆ 50 ಕೋಟಿಗೆ ದ್ವಿಗುಣಗೊಳ್ಳುವ ಸಾಧ್ಯತೆ ಇದೆ ಎಂದು ನಿರೀಕ್ಷಿಸಲಾಗಿದೆ.


Spread the love
Share:

administrator

Leave a Reply

Your email address will not be published. Required fields are marked *