ಆನೆ ಲದ್ದಿಯಿಂದ ಸಿಹಿತಿಂಡಿ? ಚೀನಾದ ಹೊಸ ಕ್ರೇಜಿ ಪ್ರಯೋಗ!

ಶಾಂಫೈ : ಈ ಚೀನಾದವರು ಏನನ್ನೂ ಬಿಡಲ್ಲ.. ಹಾವು,ಚೇಳು,ಹಲ್ಲಿ,ಕಪ್ಪೆ ಎಲ್ಲವನ್ನೂ ಚರ್ಮ ಸುಲಿದು ಉಪ್ಪು ಖಾರ ಹಾಕಿ ತಿಂದುಬಿಡ್ತಾರೆ. ಇದೀಗ ಇಲ್ಲಿನ ಶಾಂಫೈ ನ ರೆಸ್ಟೋರೆಂಟ್ ಒಂದು ತನ್ನ ಸಿಹಿ ತಿನಿಸಿನ ವಿಚಾರವಾಗಿ ಭಾರೀ ಸದ್ದು ಮಾಡಿದ್ದು,ಇಲ್ಲಿ ಆನೆಯ ಲದ್ದಿಯಿಂದ ಸ್ವೀಟ್ ಮಾಡ್ತಾರಂತೆ..

ಹೌದು ಈ ರೆಸ್ಟಾರೆಂಟ್ ತನ್ನ ವಿಲಕ್ಷಣ ಸಿಹಿತಿಂಡಿಗಾಗಿ ಈಗ ಇಂಟರ್ನೆಟ್ ನಲ್ಲಿ ಭಾರೀ ಸದ್ದು ಮಾಡ್ತಿದೆ. ಆನೆ ಲದ್ದಿಯನ್ನು ಒಣಗಿಸಿ, ಕ್ರಿಮಿನಾಶಕ ಸಿಂಪಡಿಸಿ ಅದರಿಂದ ಸಿಹಿ ಐಟಂ ತಯಾರಿಸಿ ಅದಕ್ಕೆ ಗಿಡಮೂಲಿಕೆಗಳು ಮತ್ತು ಜೇನುತುಪ್ಪದ ಸ್ಪರ್ಶವನ್ನು ನೀಡಿ ಗ್ರಾಹಕರಿಗೆ ದುಬಾರಿ ಬೆಲೆಗೆ ಮಾರಾಟ ಮಾಡ್ತಿದೆ.
ಈ ಆನೆ ಲದ್ದಿಯಲ್ಲಿ ತಯಾರಾಗುವ ಸಿಹಿ ತಿಂಡಿಯ ಬೆಲೆ barobbari 45,400/- ಅಂತೆ.ಫುಡ್ ಬ್ಲಾಗರ್ ಒಬ್ಬರು ಈ ರೆಸ್ಟೋರೆಂಟ್‌ನಲ್ಲಿ ಊಟ ಮಾಡಿದ ನಂತರ,ಈ ಆನೆ ಸಗಣಿ ಸಿಹಿತಿಂಡಿಯ ಬಗ್ಗೆ ನೆಟ್ಟಿಗರಿಗೆ ಮಾಹಿತಿ ನೀಡಿದ್ದು, ಇದು ಭಾರೀ ವೈರಲ್ ಆಗಿದೆ.
ಈ ಬ್ಲಾಗರ್ ತಿಳಿಸಿರುವಂತೆ ಸಿಹಿ ಖಾದ್ಯದ ಹೆಸರನ್ನು “ಎಲಿಫೆಂಟ್ ಡಂಗ್ ಡೆಸರ್ಟ್ ” ಎಂದು ತಿಳಿಸಿದ್ದು, ದುಡ್ಡು ಕೊಟ್ಟು ಆನೆ ಲದ್ದಿ ತಿನ್ನುವ ಗ್ರಾಹಕರನ್ನು ಹಲವು ನೆಟ್ಟಿಗರು ಹಾಸ್ಯಮಯವಾಗಿ ಟೀಕಿಸಿದ್ದಾರೆ.
