ಟ್ರಾಫಿಕ್‌ನಲ್ಲಿ ಗಾಡಿ ನಿಲ್ಲಿಸಿದ್ದ ಡೆಲಿವರಿ ಬಾಯ್‌ಗಳ ಮೇಲೆ ಹ*ಲ್ಲೆ ನಡೆದದ್ದೇಕೆ?

ಬೆಂಗಳೂರು: ಟ್ರಾಫಿಕ್ ಸಿಗ್ನಲ್ ಇದೆ ಎಂದು ಬೈಕ್ ನಿಲ್ಲಿಸಿದ ಡೆಲಿವರಿ ಬಾಯ್ (Delivery Boy) ಮೇಲೆ ಮೂವರು ಅಪರಿಚಿತ ವ್ಯಕ್ತಿಗಳು ಹಲ್ಲೆ ಮಾಡಿದ ಘಟನೆ ಬೆಂಗಳೂರಿನ (Bengaluru) ಮೋದಿ ಆಸ್ಪತ್ರೆ ಜಂಕ್ಷನ್ ಬಳಿ ಶನಿವಾರ ರಾತ್ರಿ ಸಂಭವಿಸಿದೆ. ಸ್ವಿಗ್ಗಿಯಲ್ಲಿ ಕೆಲಸ ಮಾಡುತ್ತಿದ್ದ ಡೆಲಿವರಿ ಎಕ್ಸಿಕ್ಯೂಟಿವ್ ಸಿಗ್ನಲ್ನಲ್ಲಿ ಕೆಂಪು ಲೈಟ್ ಇದೆ ಎಂದು ಬೈಕ್ ನಿಲ್ಲಿಸಿದ್ದರು. ಅದೇ ವೇಳೆ ಹಿಂದಿನಿಂದ ಬಂದ ಅಪರಿಚಿತರು ದಾರಿ ಬಿಡುವಂತೆ ಹೇಳಿದ್ದಲ್ಲೆ ಹಲ್ಲೆ ಮಾಡಿದ್ದಾರೆ. ಘಟನೆಯ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ನಗರದಲ್ಲಿ ಗಿಗ್ ಕಾರ್ಮಿಕರ ಸುರಕ್ಷತೆಯ ಬಗ್ಗೆ ಆತಂಕ ಮೂಡಿಸಿದೆ.

ಸಿಗ್ನಲ್ನಲ್ಲಿ ರೆಡ್ ಲೈಟ್ ಆನ್ ಆದಾಗ ಡೆಲಿವರಿ ಬಾಯ್ ಬೈಕನ್ನು ನಿಲ್ಲಿಸಿದ್ದಾರೆ. ಬೈಕ್ ಹಿಂದಿನಿಂದ ಬರುತ್ತಿದ್ದ ಕಾರಿನಲ್ಲಿದ್ದವರು ಹಾರ್ನ್ ಮಾಡಿ ಮುಂದೆ ಹೋಗುವಂತೆ ಸೂಚಿಸಿದ್ದರು. ಆಗ ಡೆಲಿವರಿ ಬಾಯ್, ತಾನು ಸಂಚಾರ ನಿಯಮಗಳನ್ನು ಪಾಲಿಸುತ್ತಿರುವುದಾಗಿ ಹೇಳಿದ್ದಾರೆ. ನಂತರ ವಾಗ್ವಾದ ನಡೆದು, ಕಾರಿನಲ್ಲಿದ್ದವರು ಡೆಲಿವರಿ ಬಾಯ್ ಮೇಲೆ ಹಲ್ಲೆ ನಡೆಸಿದ್ದಾರೆ.
ಅಪರಿಚಿತರು ಪದೇ ಪದೇ ಹಲ್ಲೆ ಮಾಡಿ, ಒದ್ದು ಸ್ಥಳದಿಂದ ಕಾಲ್ಕಿತ್ತಿರುವ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಇದರಿಂದಾಗಿ ಡೆಲಿವರಿ ಬಾಯ್ ಗಾಯಗೊಂಡು ರಸ್ತೆಬದಿಯಲ್ಲಿ ರಕ್ತಸ್ರಾವವಾಗಿ ಬಿದ್ದಿದ್ದಾರೆ.
ನಂತರ ಡೆಲಿವರಿ ಬಾಯ್ ಬಸವೇಶ್ವರನಗರ ಪೊಲೀಸ್ ಠಾಣೆಗೆ ದೂರು ನೀಡಿ, ಹಲ್ಲೆಕೋರರು ಮದ್ಯದ ಅಮಲಿನಲ್ಲಿದ್ದಂತೆ ಕಾಣಿಸಿತ್ತು ಎಂದು ಮಾಹಿತಿ ನೀಡಿದ್ದಾರೆ. ಪೊಲೀಸ್ ಅಧಿಕಾರಿಗಳು ದೂರು ಸ್ವೀಕರಿಸಿರುವುದಾಗಿ ದೃಢಪಡಿಸಿದ್ದು, ತನಿಖೆ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.
ಕೆಎಸ್‌ಆರ್‌ಟಿಸಿ ಬಸ್ – ಬೈಕ್ ಡಿಕ್ಕಿ: ಡೆಲಿವರಿ ಬಾಯ್ ಸಾವು
ಶುಕ್ರವಾರ ಮುಂಜಾನೆ ಬೆಂಗಳೂರಿನ ಮಧ್ಯಭಾಗದಲ್ಲಿರುವ ಮೈಸೂರು ಬ್ಯಾಂಕ್ ವೃತ್ತದಲ್ಲಿ ಕೆಎಸ್‌ಆರ್‌ಟಿಸಿ ಬಸ್ ಡಿಕ್ಕಿ ಹೊಡೆದ ಪರಿಣಾಮ 25 ವರ್ಷದ ಡೆಲಿವರಿ ಬಾಯ್ ವ್ಯಕ್ತಿ ಮೃತಪಟ್ಟಿದ್ದರು. ಮೃತ ವ್ಯಕ್ತಿಯನ್ನು ಅಜರ್ ಪಾಷಾ ಎಂದು ಗುರುತಿಸಲಾಗಿದ್ದು, ಅವರು ನೀಲಸಂದ್ರ ನಿವಾಸಿಯಾಗಿದ್ದರು.
ಅಜರ್ ಪಾಷಾ ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ನಲ್ಲಿ ಕೆಲಸ ಮಾಡುತ್ತಿದ್ದರು.ಉಪ್ಪಾರಪೇಟೆ ಸಂಚಾರ ಪೊಲೀಸರ ಪ್ರಕಾರ, ಪಾಷಾ ಕೆಲಸ ಮುಗಿಸಿ ಮನೆಗೆ ಹಿಂತಿರುಗುತ್ತಿದ್ದಾಗ ತಿರುಪತಿ-ಬೆಂಗಳೂರು ಕೆಎಸ್‌ಆರ್‌ಟಿಸಿ ಬಸ್ ಅವರ ಬೈಕ್ಗೆ ಡಿಕ್ಕಿ ಹೊಡೆದು ಗಂಭೀರವಾವಾಗಿ ಗಾಯಗೊಂಡಿದ್ದರು. ನಂತರ ಮೃತಪಟ್ಟಿದ್ದರು.
