ಬೆಂಗಳೂರಿನ ರೈಲ್ವೇ ನಿಲ್ದಾಣದ ಪ್ಲಾಟ್ಫಾರ್ಮ್‌ನಲ್ಲಿ ಹೆರಿಗೆ; 50ನೇ ವಯಸ್ಸಿನಲ್ಲಿ 14ನೇ ಮಗುವಿಗೆ ಜನ್ಮ ನೀಡಿದ ತಾಯಿ!

ಬೆಂಗಳೂರು : ಹುಟ್ಟು ಅನ್ನೋದೇ ಹಾಗೆ ಯಾವಾಗ ಎಲ್ಲಿ ತಾಯಿ ಜನ್ಮ ನೀಡುತ್ತಾಳೆ ಅನ್ನೋದು ಇವತ್ತಿಗೂ ಸೃಷ್ಟಿಯ ಕೌತುಕವೇ. ಇಲ್ಲೋರ್ವ ಮಹಾತಾಯಿ ಬೆಂಗಳೂರಿನ (Bengaluru) ರೈಲ್ವೇ ನಿಲ್ದಾಣದ (Railway Station) ಪ್ಲಾಟ್ಫಾರ್ಮ್‌ನಲ್ಲಿಯೇ ಗಂಡು ಮಗುವೊಂದಕ್ಕೆ (Baby Born) ಜನ್ಮ ನೀಡಿದ್ದಾರೆ.

ಗುರುವಾರ ಕೆಂಪೇಗೌಡ ರೈಲ್ವೇ ನಿಲ್ದಾಣದ ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಪ್ಲಾಟ್ಫಾರ್ಮ್‌ನಲ್ಲಿ ತುಂಬು ಗರ್ಭಿಣಿ ಮಹಿಳೆಯೊಬ್ಬರು ರೈಲಿಗಾಗಿ ಕಾಯುತ್ತಿದ್ದರು. ಈ ವೇಳೆ ಏಕಾಏಕಿ ಹೆರಿಗೆ ನೋವು ಸಂಭವಿಸಿದ್ದು, ಸಹಾಯಕ್ಕಾಗಿ ಕಿರುಚಾಡಿದ್ದಾರೆ.
ಕೂಡಲೇ ಎಚ್ಚೆತ್ತ ರೈಲ್ವೇ ಪೊಲೀಸರು, ಸಿಬ್ಬಂದಿಯ ಸಹಾಯದೊಂದಿಗೆ ಪ್ಲಾಟ್‌ಫಾರ್ಮ್‌ನಲ್ಲೇ ಹೆರಿಗೆ ಮಾಡಿಸಲಾಗಿದೆ. ಸದ್ಯ ಮಹಿಳೆ ಗಂಡು ಮಗುವಿಗೆ ಜನ್ಮ ನೀಡಿದ್ದು, ರೈಲ್ವೆ ಮಹಿಳಾ ಸಿಬ್ಬಂದಿಯ ಸಮಯ ಪ್ರಜ್ಞೆಯಿಂದ ತಾಯಿ ಮತ್ತು ಮಗು ಆರೋಗ್ಯವಾಗಿದ್ದಾರೆ. ಬಳಿಕ ಮಗುವನ್ನು ಸ್ಥಳೀಯ ಆಸ್ಪತ್ರೆಗೆ ಕರೆದೊಯ್ದು, ಅದಾದ ಬಳಿಕ ತಮ್ಮ ಮನೆಗೆ ತೆರಳಿದ್ದಾರೆ.
ಐವತ್ತನೇ ವಯಸ್ಸಿನಲ್ಲೂ 14ನೇ ಮಗುವಿಗೆ ಜನ್ಮ ನೀಡಿದ ತಾಯಿ.!
ನಾರ್ಮಲ್ ಆಗಿ 40 ವರ್ಷ ದಾಟಿದ ಬಳಿಕ ಮಹಿಳೆಯರಿಗೆ ಮಗು ಹೆರುವ ಸಮರ್ಥ ಕ್ಷೀಣಿಸುತ್ತಾ ಬರುತ್ತದೆ. ಅದರಲ್ಲೂ ಈಗ ಅಂತೂ 30 ವರ್ಷ ದಾಟಿದ ಮೇಲೆ ಮಕ್ಕಳು ಆಗೋದು ಕಷ್ಟ ಎಂದು ವೈದ್ಯರೇ ಹೇಳುತ್ತಾರೆ. ಆದರೆ ಇವೆಲ್ಲದಕ್ಕೂ ತದ್ವಿರುದ್ಧದಂತೆ ಇಲ್ಲೊಬ್ಬ ಮಹಿಳೆ ತನ್ನ 50 ವರ್ಷದಲ್ಲೂ ಮಗುವಿಗೆ ಜನ್ಮ ನೀಡಿದ್ದಾಳೆ.
ಉತ್ತರ ಪ್ರದೇಶದ ಪಿಳಖುವಾ ಕಾಲೊನಿಯ ಮೊಹಲ್ಲಾ ಬಜರಂಗಪುರಿಯ ನಿವಾಸಿ ಇಮಾಮುದ್ದೀನ್ ಎಂಬುವವರು ತಮ್ಮ 50 ನೇ ವಯಸ್ಸಿನಲ್ಲೂ ತನ್ನ 14ನೇ ಮಗುವಿಗೆ ಜನ್ಮ ನೀಡಿದ್ದು, ಸದ್ಯ ತಾಯಿ ಮಗು ಇಬ್ಬರೂ ಕೂಡ ಆರೋಗ್ಯವಾಗಿದ್ದಾರೆ.
ತುಂಬು ಗರ್ಭಿಣಿಯಾಗಿದ್ದ ಇಮಾಮುದ್ದೀನ್ ಗೆ ಏಕಾಏಕಿ ಹೆರಿಗೆ ನೋವು ಕಾಣಿಸಿಕೊಂಡಿದೆ. ಕೂಡಲೇ ಪತಿ ಗರ್ಬಿಣಿಯನ್ನು ಪಿಳಖುವಾದ ಸಿಎಚ್‌ಸಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿ ವೈದ್ಯರು ಗರ್ಭಿಣಿ ಪರೀಕ್ಷಿಸಿ ಮೀರತ್ ವೈದ್ಯಕೀಯ ಆಸ್ಪತ್ರೆಗೆ ಕರೆದೊಯ್ಯಲು ಸೂಚಿಸಿದ್ದಾರೆ.
ಅದರಂತೆ 108 ರಲ್ಲಿ ಮಹಿಳೆಯನ್ನು ಮೀರತ್ ವೈದ್ಯಕೀಯ ಆಸ್ಪತ್ರೆಗೆ ಕರೆದೊಯ್ಯುವಾಗ ಮಾರ್ಗ ಮಧ್ಯೆ ಅವರಿಗೆ ಹೆರಿಗೆ ನೋವು ಹೆಚ್ಚಾಗಿದೆ. ಈ ವೇಳೆ ಆಂಬ್ಯುಲೆನ್ಸ್ ಸಿಬ್ಬಂದಿ ಡೆಲಿವರಿ ಕಿಟ್ ಸಹಾಯದಿಂದ ಹೆರಿಗೆ ಮಾಡಿಸಿದ್ದಾರೆ.
ಹೆರಿಗೆಯ ಬಳಿಕ ತಾಯಿ ಮತ್ತು ಮಗುವನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಯಿತು. ವೈದ್ಯರು, ಇಬ್ಬರೂ ಆರೋಗ್ಯವಾಗಿದ್ದಾರೆ ಎಂದು ತಿಳಿಸಿದ್ದಾರೆ. ಇನ್ನು ಆಸ್ಪತ್ರೆಯಲ್ಲಿ ಬಾಣಂತಿ ತಾಯಿ ಜೊತೆ 22 ವರ್ಷದ ಪುತ್ರ ಇದ್ದರು.
