Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ವಿಷದ ಪ್ಯಾಕೆಟ್ ಆರ್ಡರ್ ಮಾಡಿದ್ದ ವ್ಯಕ್ತಿಯ ಪ್ರಾಣ ಉಳಿಸಿದ ಡೆಲಿವರಿ ಬಾಯ್: ಸಮಯಪ್ರಜ್ಞೆಗೆ ನೆಟ್ಟಿಗರ ಸಲಾಂ!

Spread the love

ಚೆನ್ನೈ: ಓರ್ವ ಡೆಲಿವರಿ ಬಾಯ್ ಆತ್ಮಹತ್ಯೆಗೆ ನಿರ್ಧರಿಸಿದ್ದ ಮಹಿಳೆಯನ್ನು ಮಾತನಾಡಿಸಿ, ಸಾವಿನ ಸುಳಿಯಿಂದ ರಕ್ಷಣೆ ಮಾಡಿದ ಘಟನೆ ತಮಿಳುನಾಡಿನ (Tamilnadu) ಚೆನ್ನೈನಲ್ಲಿ (Chennai) ನಡೆದಿದೆ.

ಚೆನ್ನೈನಲ್ಲಿ ಮಹಿಳೆಯೋರ್ವರು ತಡರಾತ್ರಿ ಆಪ್‌ವೊಂದರ ಮೂಲಕ ಮೂರು ಪ್ಯಾಕೆಟ್ ಇಲಿ ಪಾಷಾಣ ಆರ್ಡರ್ ಮಾಡಿದ್ದರು. ಅದರಂತೆ ಡೆಲಿವರಿ ಬಾಯ್ ಪಾರ್ಸೆಲ್‌ನ್ನು ನೀಡಲು ಹೋದಾಗ ಮನೆಯ ಬಾಗಿಲು ತೆರೆದು ಮಹಿಳೆ ಅಳುತ್ತಿದ್ದರು. ಇದನ್ನು ಗಮನಿಸಿದ ಡೆಲಿವರಿ ಬಾಯ್, ಸುಮ್ಮನೆ ಆರ್ಡರ್ ನೀಡಿ ಅಲ್ಲಿಂದ ಹೊರಗೆ ಹೋಗದೆ, ಆಕೆಯ ಬಳಿ ಹೋಗಿ ಮಾತನಾಡಿಸಿದ್ದಾನೆ. 

ಸಮಸ್ಯೆ ಏನೇ ಇರಲಿ, ದಯವಿಟ್ಟು ಆತ್ಮಹತ್ಯೆಯಂತಹ ನಿರ್ಧಾರ ತೆಗೆದುಕೊಳ್ಳಬೇಡಿ. ನಿಮ್ಮ ಜೀವ ಅಮೂಲ್ಯವಾದುದು. ಕಷ್ಟದ ಕ್ಷಣಗಳು ಶಾಶ್ವತವಲ್ಲ, ಅವು ಕಳೆದು ಹೋಗುತ್ತವೆ ಎಂದು ಸಮಾಧಾನಪಡಿಸಿದ್ದಾರೆ. ಬಳಿಕ ಆರ್ಡರ್ ಕ್ಯಾನ್ಸಲ್ ಮಾಡಿ, ವಿಷದ ಪ್ಯಾಕೆಟ್‌ಗಳನ್ನು ವಾಪಸ್ ತೆಗೆದುಕೊಂಡು ಹೋಗಿದ್ದಾನೆ.

ಈ ಘಟನೆಯನ್ನು ಯುವಕ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಇಂದು ನಾನು ಏನೋ ಒಂದು ದೊಡ್ಡ ಸಾಧನೆ ಮಾಡಿದ ತೃಪ್ತಿ ಇದೆ ಎಂದು ಬರೆದುಕೊಂಡಿದ್ದಾನೆ. ನೆಟ್ಟಿಗರು `ರಿಯಲ್ ಹೀರೋ’ ಎಂದು ಶ್ಲಾಘಿಸಿದ್ದಾರೆ.


Spread the love
Share:

administrator

Leave a Reply

Your email address will not be published. Required fields are marked *