ದೆಹಲಿ-ಕೋಲ್ಕತ್ತಾ ಹೆದ್ದಾರಿಯಲ್ಲಿ ಭೀಕರ ಟ್ರಾಫಿಕ್ ಜಾಮ್: 20 ಕಿ.ಮೀ.ವರೆಗೆ ವಾಹನಗಳು ನಿಂತಲ್ಲೇ ನಿಂತಿವೆ; ಮೂರು ದಿನಗಳಿಂದ ಸಾವಿರಾರು ಜನರ ಪರದಾಟ

ದೆಹಲಿ-ಕೋಲ್ಕತ್ತಾ ನಡುವೆ ಕಳೆದ ಮೂರು ದಿನಗಳಿಂದ ವಿಪರೀತ ಸಂಚಾರ ದಟ್ಟಣೆಯುಂಟಾಗಿದೆ. 20ಕಿಮೀ ದೂರದವರೆಗೆ ಭಾರಿ ಟ್ರಾಫಿಕ್ ಜಾಮ್ ಇದ್ದು, ವಾಹನಗಳು ಮೂರು ದಿನಗಳಿಂದ ನಿಂತಲ್ಲೇ ನಿಂತಿವೆ, ಸಾವಿರಾರು ಜನರು ಪರದಾಡುವಂತಾಗಿದೆ. 24 ಗಂಟೆಗಳಲ್ಲಿ ಕೇವಲ 5ಕಿ.ಮೀ ದೂರವಷ್ಟೇ ಸಾಗಲು ಸಾಧ್ಯವಾಗಿದೆ. ಆಹಾರವಿಲ್ಲ, ರಸ್ತೆಬದಿಯಲ್ಲಿ ಸಣ್ಣ ಪುಟ್ಟ ಅಂಗಡಿಗಳಲ್ಲಿ ಸಿಗುವ ತಿಂಡಿಗಳಿಂದ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದೇವೆ ಎಂದು ಒಡಿಶಾದಿಂದ ದೆಹಲಿಗೆ ತೆರಳುತ್ತಿದ್ದ ಟ್ರಕ್ ಚಾಲಕ ದುಬನ್ ಕುಮಾರ್ ಹೇಳಿದ್ದಾರೆ. ಈ ಹೆದ್ದಾರಿಯು ಕೋಲ್ಕತ್ತಾ ಮತ್ತು ದೆಹಲಿಯನ್ನು ಸಂಪರ್ಕಿಸುತ್ತದೆ ಮತ್ತು ಆದ್ದರಿಂದ ಇದು ವ್ಯಾಪಾರ ಸಾರಿಗೆಗೆ ಪ್ರಾಥಮಿಕ ಮಾರ್ಗವಾಗಿದೆ. ಶಿವಸಾಗರ್ ಬಳಿ ಎನ್‌ಎಚ್‌ಎಐ ನಡೆಸುತ್ತಿರುವ ರಸ್ತೆ ವಿಸ್ತರಣೆ ಕಾಮಗಾರಿಯಿಂದಾಗಿ ಈ ಅಡಚಣೆ ಉಂಟಾಗಿದೆ. ಮಳೆಯೂ ಕೂಡ ಪ್ರಮುಖ ಕಾರಣವಾಗಿದೆ
