Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಕೆಎಸ್ಆರ್‌ಟಿಸಿ-ಬಿಎಂಟಿಸಿ ಸೇರಿದಂತೆ 4 ನಿಗಮಗಳ ಪಿಎಫ್ ಪಾವತಿಗೆ ವಿಳಂಬ

Spread the love

ಬೆಂಗಳೂರು: ಕೆಎಸ್ಆರ್​ಟಿಸಿ ಬಿಎಂಟಿಸಿ  ಸೇರಿದಂತೆ ನಾಲ್ಕು ನಿಗಮಳ ನೌಕರರ ಸಂಬಳದಲ್ಲಿ ಪ್ರತಿ ತಿಂಗಳು ಸಾವಿರಾರು ರೂಪಾಯಿ ಹಣವನ್ನು ಪಿಎಫ್​​ಗಾಗಿ ಕಡಿತ ಮಾಡಲಾಗುತ್ತದೆ. ‌ಆ ಹಣವನ್ನು ಪಿಎಫ್ ಟ್ರಸ್ಟ್​​ಗೆ ಪಾವತಿ ಮಾಡಬೇಕು. ಆದರೆ ಕಳೆದ ಒಂದು ವರ್ಷದಿಂದ ಪಿಎಫ್ ಟ್ರಸ್ಟ್​ಗೆ ಹಣ ಪಾವತಿ ಮಾಡಿಲ್ಲ ಎಂಬ ಆರೋಪ ಕೇಳಿಬಂದಿದೆ. ಇದರಿಂದ ಸಾರಿಗೆ ನೌಕರರು ಇದೀಗ ಕಷ್ಟದ ಸಮಯದಲ್ಲಿ ಪಿಎಫ್ ಹಣಕ್ಕಾಗಿ ಅರ್ಜಿ ಸಲ್ಲಿಸಿದರೂ ಹಣ ಸಿಗದಂತಾಗಿದೆ. ನೌಕರರ ಪಿಎಫ್ ಹಣವನ್ನು ದುರ್ಬಳಕೆ ಮಾಡಿಕೊಳ್ಳಲಾಗಿದೆ ಎಂದು ಸಾರಿಗೆ ನೌಕರರ ಮುಖಂಡ ಜಗದೀಶ್ ಆರೋಪಿಸಿದ್ದಾರೆ.

ಪಿಎಫ್ ಟ್ರಸ್ಟ್ ಗೆ ಪಾವತಿಸಬೇಕಿದ್ದ 3110 ಕೋಟಿ ರುಪಾಯಿ ಹಣವನ್ನು ನಾಲ್ಕು ಸಾರಿಗೆ ನಿಗಮಗಳು ಬಾಕಿ ಉಳಿಸಿಕೊಂಡಿವೆ. ಈ ಹಿನ್ನೆಲೆಯಲ್ಲಿ, ನಾಲ್ಕು ಸಾರಿಗೆ ನಿಗಮಗಳ ಎಂಡಿಗಳಿಗೆ ಪಿಎಫ್ ಟ್ರಸ್ಟ್​​ಗೆ ಪಾವತಿ ಮಾಡಬೇಕಿರುವ ಸಾವಿರಾರು ಕೋಟಿ ರುಪಾಯಿ ಹಣವನ್ನು ಪಾವತಿ ಮಾಡಿ ಎಂದು ಸಾರಿಗೆ ನೌಕರರರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಕಳೆದ ಒಂದು ವರ್ಷದಿಂದ ಪಿಎಫ್ ಟ್ರಸ್ಟ್​​ ನೌಕರರ ಹಣವನ್ನು ಪಾವತಿ ಮಾಡಿಲ್ಲ. ಇದರಿಂದ ಪಿಎಫ್ ಟ್ರಸ್ಟ್ ನಾಲ್ಕು ನಿಗಮಗಳಿಗೆ ಪಾವತಿ ಮಾಡಬೇಕಿರುವ 3110 ಕೋಟಿ ರೂಪಾಯಿಗೆ ಶೇ 37 ರ ವರೆಗೆ ಬಡ್ಡಿ ವಿಧಿಸಲಿದೆ ಎನ್ನಲಾಗಿದೆ.

ಯಾವ ನಿಗಮದಿಂದ ಎಷ್ಟು ಬಾಕಿ?

ಕೆಎಸ್ಆರ್ಟಿಸಿ- 891 ಕೋಟಿ ರುಪಾಯಿ, ಬಿಎಂಟಿಸಿ-958 ಕೋಟಿ ರುಪಾಯಿ, ಎನ್ಡಬ್ಲೂಕೆಆರ್ಟಿಸಿ- 1184 ಕೋಟಿ ರುಪಾಯಿ ಹಾಗೂ ಕೆಕೆಆರ್ಟಿಸಿ- 76 ಕೋಟಿ ರುಪಾಯಿ ಸೇರಿ ಒಟ್ಟು3110 ಕೋಟಿ ರುಪಾಯಿ ಬಾಕಿ ಉಳಿಸಿಕೊಳ್ಳಲಾಗಿದೆ. ಪಿಎಫ್ ಟ್ರಸ್ಟ್​​ಗೆ ಪಾವತಿ ಮಾಡದ ಹಿನ್ನೆಲೆಯಲ್ಲಿ ದಿನದಿಂದ ದಿನಕ್ಕೆ ಬಡ್ಡಿ ಪ್ರಮಾಣ ಹಚ್ಚಳವಾಗುತ್ತಲೇ ಇದೆ ಎನ್ನಲಾಗಿದೆ.

ಸಾರಿಗೆ ಇಲಾಖೆ ಕಾರ್ಯದರ್ಶಿ ಹೇಳಿದ್ದೇನು?

ಸಾರಿಗೆ ನೌಕರರ ಪಿಎಫ್ ಹಣವನ್ನು ಪಿಎಫ್ ಟ್ರಸ್ಟ್​ಗೆ ಪಾವತಿ ಮಾಡಲು ರಾಜ್ಯ ಸರ್ಕಾರ ಎರಡು ಸಾವಿರ ಕೋಟಿ ಸಹಾಯಧನವನ್ನು ನೀಡಲು ಗ್ರೀನ್ ಸಿಗ್ನಲ್ ನೀಡಿದೆ. ನಾಲ್ಕು ನಿಗಮಗಳು ಸಾಲ ಪಡೆದುಕೊಂಡು ಪಿಎಫ್ ಟ್ರಸ್ಟ್​​ಗೆ ಹಣವನ್ನು ಪಾವತಿ ಮಾಡಲಿದೆ. ನಂತರ ಆ ಹಣವನ್ನು ಸರ್ಕಾರ ನಾಲ್ಕು ನಿಗಮಗಳಿಗೆ ನೀಡಲಿದೆ. ಹಂತ ಹಂತವಾಗಿ ಪಿಎಫ್ ಟ್ರಸ್ಟ್​​ಗೆ ಹಣ ಪಾವತಿ ಮಾಡಲಾಗುತ್ತದೆ ಎಂದು ಸಾರಿಗೆ ಇಲಾಖೆ ಕಾರ್ಯದರ್ಶಿ ಡಾ. ಎನ್​ವಿ ಪ್ರಸಾದ್ ಮಾಹಿತಿ ನೀಡಿದ್ದಾರೆ.

ಒಟ್ಟಿನಲ್ಲಿ ಸಾರಿಗೆ ನೌಕರರಿಗೆ ತಮ್ಮದೇ ಪಿಎಫ್​ ಹಣ ಕಷ್ಟಕಾಲದಲ್ಲಿ ನೆರವಿಗೆ ಸಿಗದಂತಾಗಿದೆ. ಸರ್ಕಾರ ಈ ಬಗ್ಗೆ ಗಮನಹರಿಸಿ ತಕ್ಷಣವೇ ಕ್ರಮ ಕೈಗೊಳ್ಳಬೇಕು ಎಂದು ಸಾರಿಗೆ ಮುಖಂಡರು ಆಗ್ರಹಿಸಿದ್ದಾರೆ.


Spread the love
Share:

administrator

Leave a Reply

Your email address will not be published. Required fields are marked *