ರಕ್ಷಣಾ ಇಲಾಖೆಯಿಂದ ₹1.05 ಲಕ್ಷ ಕೋಟಿ ಮೌಲ್ಯದ ಶಸ್ತ್ರಾಸ್ತ್ರ ಖರೀದಿಗೆ ಅನುಮೋದನೆ: ‘ಮೇಕ್ ಇನ್ ಇಂಡಿಯಾ’ಗೆ ಒತ್ತು!

ನವದೆಹಲಿ : ಬರೋಬ್ಬರಿ 1.05 ಲಕ್ಷ ಕೋಟಿ ಮೊತ್ತದ ಶಸ್ತ್ರಾಸ್ತ್ರ ಖರೀದಿ ಒಪ್ಪಂದಕ್ಕೆ ರಕ್ಷಣಾ ಇಲಾಖೆ ಒಪ್ಪಿಗೆ ನೀಡಿದೆ. ರಕ್ಷಣಾ ಮಂತ್ರಿ ರಾಜನಾಥ್ ಸಿಂಗ್ ಅಧ್ಯಕ್ಷತೆಯಲ್ಲಿ ಇಂದು ನಡೆದ ರಕ್ಷಣಾ ಇಳಾಖೆಯ ಸಭೆಯಲ್ಲಿ, ಮೇಕ್ ಇನ್ ಇಂಡಿಯಾ ಮೂಲಕ 1.05 ಲಕ್ಷ ಕೋಟಿ ಮೌಲ್ಯದ ಶಸ್ತ್ರಾಸ್ತ್ರ ಖರೀದಿಗೆ ಅನುಮತಿ ನೀಡಲಾಗಿದೆ.

ಏನೇನೆಲ್ಲಾ ಖರೀದಿಸುತ್ತೆ ಭಾರತ
ಶಸ್ತ್ರಸಜ್ಜಿತ ವಾಹನಗಳು, ಅತ್ಯಾಧುನಿಕ ಕ್ಷಿಪಣಿಗಳು, ಮೈನ್ ಕೌಂಟರ್ ವೆಸೆಲ್ಸ್, ಸೂಪರ್ ಱಪಿಡ್ ಗನ್ ಮೌಂಟ್ಗಳನ್ನು ಖರೀದಿಸಲಾಗುತ್ತದೆ. ಭೂಸೇನೆ, ನೌಕಾಪಡೆ ಮತ್ತು ವಾಯುಪಡೆಗೆ ಶಸ್ತ್ರಾಸ್ತ್ರ ಪೂರೈಸಲು ಬೇಕಾಗುವ ವ್ಯವಸ್ಥೆಗೆ ವೇಗನ ನೀಡುವುದಕ್ಕೆ ಬೇಕಾದ ವ್ಯವಸ್ಥೆ ಮಾಡಲಾಗುತ್ತದೆ.

ಭಾರತದ್ದೇ ಸ್ವಂತ ಏರ್ ಡಿಫೆನ್ಸ್ ಸಿಸ್ಟಂಗಳು
ಭಾರತದ ಏರ್ ಡಿಫೆನ್ಸ್ ವ್ಯವಸ್ಥೆಯಲ್ಲಿ ವಿವಿಧ ಏರ್ ಡಿಫೆನ್ಸ್ ಸಿಸ್ಟಂಗಳಿವೆ. ಇಸ್ರೇಲ್ನ ಐರನ್ ಡೋಮ್, ರಷ್ಯಾದ ಎಸ್-400 ಇದರ ಭಾಗ ಮಾತ್ರ. ಭಾರತವೇ ಸ್ವಂತವಾಗಿ ಅಭಿವೃದ್ಧಿಪಡಿಸಿದ ಡಿಫೆನ್ಸ್ ಸಿಸ್ಟಂಗಳು ಭಾರತಕ್ಕೆ ಅಭೇದ್ಯ ರಕ್ಷಣಾ ಕೋಟೆ ನಿರ್ಮಿಸಲು ಸಹಾಯವಾಗಿವೆ.
ಪೆಚೋರಾ, ಒಎಸ್ಎ-ಎಕೆ, ಎಲ್ಎಲ್ಎಡಿ ಗನ್ ಇತ್ಯಾದಿ ಏರ್ ಡಿಫೆನ್ಸ್ ಸಿಸ್ಟಂಗಳಿವೆ. ಪೂರ್ಣ ದೇಶೀಯವಾಗಿ ಅಭಿವೃದ್ಧಿಪಡಿಸಿದ ಆಕಾಶ್ ಏರ್ ಮಿಸೈಲ್ ಸಿಸ್ಟಂ ಇದೆ. ಆಕಾಶ್ ಸಿಸ್ಟಂ ಏಕಕಾಲದಲ್ಲಿ ಹಲವು ಟಾರ್ಗೆಟ್ಗಳನ್ನು ಟ್ರ್ಯಾಕ್ ಮಾಡಿ ಹೊಡೆಯಬಲ್ಲುದು.
ಸೂಸೈಡ್ ಡ್ರೋನ್ಗಳನ್ನೂ ನಿರ್ಮಿಸಿದೆ ಭಾರತ
ಆಪರೇಷನ್ ಸಿಂಧೂರ ನಡೆದಾಗ ಭಾರತ ಕೇವಲ 23 ನಿಮಿಷದಲ್ಲಿ ಪಾಕಿಸ್ತಾನದ 11 ಮಿಲಿಟರಿ ನೆಲೆಗಳನ್ನು ಉಡಾಯಿಸಿತ್ತು. ಚೀನೀ ನಿರ್ಮಿತ ಏರ್ ಡಿಫೆನ್ಸ್ ಸಿಸ್ಟಂಗಳನ್ನು ನಿಷ್ಕ್ರಿಯಗೊಳಿಸಿತ್ತು. ಈ ದಾಳಿಯಲ್ಲಿ ಲಾಯ್ಟರಿಂಗ್ ಮ್ಯೂನಿಶನ್ಸ್, ಲಾಂಗ್ ರೇಂಜ್ ಡ್ರೋನ್ಗಳನ್ನೂ ಬಳಸಲಾಗಿತ್ತು. ಈ ಡ್ರೋನ್ಗಳೆಲ್ಲವನ್ನೂ ಭಾರತೀಯ ಕಂಪನಿಗಳೇ ತಯಾರಿಸಿದ್ದುವು. ಅಮೆರಿಕವನ್ನೂ ಬೆಚ್ಚಿಬೀಳಿಸಿದ ನೂರ್ ಖಾನ್ ಏರ್ ಬೇಸ್ ಮೇಲಿನ ದಾಳಿ ಮಾಡಿದ್ದು ಇದೇ ಲಾಯ್ಟರಿಂಗ್ ಮ್ಯೂನಿಶನ್ಗಳೇ.