Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಆಳ ಸಮುದ್ರ ಯೋಜನೆಗೆ ಚಾಲನೆ: ಖನಿಜ ಪರಿಶೋಧನೆಗೆ ‘ಮತ್ಸ್ಯ-6000’ ವಾಹನ ಸಿದ್ಧ

Spread the love

ಹೊಸದಿಲ್ಲಿ: ಆಳ ಸಮುದ್ರದಲ್ಲಿರಬಹು ದಾದ ಖನಿಜಗಳ ಪರಿ ಶೋಧನೆಗಾಗಿ “ಆಳ ಸಮುದ್ರ ಯೋಜನೆ’ಯನ್ನು ಪ್ರಾರಂಭಿಸಿದೆ ಎಂದು ಸಚಿವ ಜಿತೇಂದ್ರ ಸಿಂಗ್‌ ಲೋಕಸಭೆಗೆ ತಿಳಿಸಿದ್ದಾರೆ.

ಇದಕ್ಕಾಗಿ ಅಂತಾರಾಷ್ಟ್ರೀಯ ಸಮು ದ್ರ ತಳ ಪ್ರಾಧಿಕಾರ(ಐಎಸ್‌ಎ) ಜತೆ 2 ಒಪ್ಪಂದಗಳಿಗೆ ಸಹಿ ಹಾಕಲಾಗಿದೆ.

2002 ರಲ್ಲಿ ಸಹಿ ಹಾಕಲಾದ ಒಪ್ಪಂದದಂತೆ ಹಿಂದೂ ಮಹಾಸಾಗರದ 75,000 ಚ.ಕಿ.ಮೀ.ವ್ಯಾಪ್ತಿಯಲ್ಲಿ, 2016ರ ಒಪ್ಪಂದದ ಪ್ರಕಾರ ಹಿಂದೂ ಮಹಾಸಾಗರದ ಆಳದಲ್ಲಿರುವ ಪರ್ವತದಂತಹ ರಚನೆಗಳಲ್ಲಿ ವಿವಿಧ ಲೋಹಗಳ ಲಭ್ಯತೆ ಕುರಿತು ಪರಿಶೋಧನೆ ನಡೆಯಲಿದೆ.

ಯೋಜನೆಗೆ ಪೂರಕವಾಗಿ ಭಾರತದ ಮೊದಲ ಮಾನವಸಹಿತ ಸಮುದ್ರಯಾನ ಯೋಜನೆಗೆ ನೆರವಾಗುವ 6000 ಮೀ. ಆಳ ಸಾಗಬಲ್ಲ ಮತ್ಸ್ಯ- 6000 ಎಂಬ ವಾಹನವನ್ನು ಚೆನ್ನೈನಲ್ಲಿ ಅಭಿವೃದ್ಧಿಪಡಿಸಲಾಗಿದೆ ಎಂದರು.

ಯೋಜನೆಯಲ್ಲಿ ಭಾಗಿಯಾಗಲಿರುವ ಭಾರತದ ಸಮುದ್ರಯಾನಿಗಳು ಹಾಗೂ ವಿಜ್ಞಾನಿಗಳಿಗೆ ಅಟ್ಲಾಂಟಿಕ್‌ ಸಾಗರದಲ್ಲಿ ಫ್ರಾನ್ಸ್‌ನ ತಜ್ಞರಿಂದ ತರಬೇತಿ ನೀಡುತ್ತಿದ್ದಾರೆ. ಮುಂಬರುವ ದಿನಗಳಲ್ಲಿ ದೇಶದ ಲೋಹ ಪೂರೈಕೆ ಖಾತ್ರಿಪಡಿಸಿಕೊಳ್ಳಲು ನೆರವಾಗಬಹುದು ಎನ್ನಲಾಗುತ್ತಿದೆ.


Spread the love
Share:

administrator

Leave a Reply

Your email address will not be published. Required fields are marked *