Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಸತ್ತಿದ್ದಾನೆಂದು ಅಂತ್ಯಕ್ರಿಯೆಗೆ ಸಿದ್ಧತೆ; ಶವ ಮನೆಗೆ ತಂದ ಕೂಡಲೇ ಕಣ್ಣು ಬಿಟ್ಟ ವ್ಯಕ್ತಿ, ಗದಗದಲ್ಲಿ ದೇವರ ಪವಾಡ!

Spread the love

ಗದಗ : ಈ ಒಂದು ಘಟನೆ ವಿಚಿತ್ರವೊ, ದೇವರ ಪವಾಡವೊ ಗೊತ್ತಿಲ್ಲ. ಆದರೆ ಸತತ ಆರು ಗಂಟೆಗಳ ಕಾಲ ಶಸ್ತ್ರಚಿಕಿತ್ಸೆಯ ಬಳಿಕ ಸಾವನ್ನಪ್ಪಿದ್ದ ವ್ಯಕ್ತಿ ಆತನ ಶವ ಮನೆಗೆ ತಂದ ಕೂಡಲೇ ಉಸಿರಾಡಿ ಕಣ್ಣು ತೆರೆದು ಮತ್ತೆ ಜೀವಂತವಾಗಿರುವ ಘಟನೆ ಗದಗದಲ್ಲಿ ನಡೆದಿದೆ.

ಹೌದು 6 ಗಂಟೆ ಶಸ್ತ್ರಚಿಕಿತ್ಸೆ ಬಳಿಕ ಪ್ರಾಣಬಿಟ್ಟ ವ್ಯಕ್ತಿ ಅಂತ್ಯಕಿಯೆ ವೇಳೆ ಉಸಿರಾಟಿ ಕಣ್ತೆರೆದ ಘಟನೆ ಗದಗ ಜಿಲ್ಲೆಯ ಬೆಟಗೇರಿಯಲ್ಲಿ ನಡೆದಿದೆ.ವ್ಯಕ್ತಿಯನ್ನು ಬೆಟಗೇರಿ ನಿವಾಸಿ 38 ವರ್ಷದ ನಾರಾಯಣ ಹೊನ್ನಲ್ ಎಂದು ಗುರುತಿಸಲಾಗಿದೆ. ಇದನ್ನು ಕಂಡ ಸ್ಥಳೀಯರು ಇದು ದೇವರ ಪವಾಡವೇ ಅಂತಿದ್ದಾರೆ. ಬೇಗ ಗುಣಮುಖರಾಗಿ ಬರಲಿ ಎಂದು ಕುಟುಂಬಸ್ಥರು, ಸ್ನೇಹಿತರು, ಬಂದು ಬಾಂಧವರು ದೇವರಲ್ಲಿ ಪ್ರಾರ್ಥನೆ ಮಾಡಿದ್ದಾರೆ.

ನಾರಾಯಣ ಅವರು ಪಿತ್ತಕೋಶದ ಸಮಸ್ಯೆಯಿಂದ ಧಾರವಾಡ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಸುಮಾರು 6 ಗಂಟೆಗಳ ಕಾಲ ವೈದ್ಯರು ಶಸ್ತ್ರಚಿಕಿತ್ಸೆ ನಡೆಸಿದ್ದರು. ಆದರೆ ಶಸ್ತ್ರಚಿಕಿತ್ಸೆ ಫಲಕಾರಿಯಾಗದೇ ನಾರಾಯಣ ಸಾವನ್ನಪ್ಪಿದ್ದರು. ಬಳಿಕ ಕುಟುಂಬಸ್ಥರು ಗದಗ ಜಿಲ್ಲೆಯಲ್ಲಿ ಅಂತ್ಯ ಸಂಸ್ಕಾರಕ್ಕೆ ಸಿದ್ಧತೆ ಮಾಡಿಕೊಂಡಿದ್ದರು. ಅಲ್ಲದೇ ಗದಗ-ಬೆಟಗೇರಿಯಲ್ಲಿ ಶ್ರದ್ಧಾಂಜಲಿಯ ಬ್ಯಾನರ್ ಕೂಡ ಕಟ್ಟಿದ್ದರು. ಅಂತ್ಯಸಂಸ್ಕಾರಕ್ಕೆ ಬಂಧು ಭಾಂದವರು ಸಹ ಬಂದಿದ್ದರು.

ನಾರಾಯಣ ಅವರ ದೇಹವನ್ನು ಆಸ್ಪತ್ರೆಯಿಂದ ಆಂಬ್ಯುಲೆನ್ಸ್ ಮೂಲಕ ಮನೆಗೆ ತಂದಿದ್ದಾರೆ. ಆದರೆ ಮನೆಗೆ ಬರುತ್ತಿದ್ದಂತೆ ನಾರಾಯಣ ಅವರು ಮತ್ತೆ ಉಸಿರಾಡಿ, ಕಣ್ಣು ಬಿಟ್ಟಿದ್ದಾರೆ. ಇದನ್ನು ಕಂಡು ಕುಟುಂಬಸ್ಥರು ಆಶ್ಚರ್ಯವಾಗಿದ್ದಾರೆ. ಕೂಡಲೇ ಬೆಟಗೇರಿ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು, ಸದ್ಯ ಚಿಕಿತ್ಸೆ ಮುಂದುವರಿದಿದೆ. ಆದರೆ ಈಗ ಮತ್ತೆ ಹುಟ್ಟಿ ಬಾ, ಆತ್ಮಕ್ಕೆ ಶಾಂತಿ ಸಿಗಲಿ, ರಿಪ್, ಭಾವಪೂರ್ಣ ಶ್ರದ್ಧಾಂಜಲಿ ಅಂತೆಲ್ಲಾ ಹಾಕಿದ್ದ ಬ್ಯಾನರ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗ್ತಿದೆ.


Spread the love
Share:

administrator

Leave a Reply

Your email address will not be published. Required fields are marked *