ಸಾಲಬಾಧೆಯಿಂದ ಮನನೊಂದು ಉದ್ಯಮಿ ಆತ್ಮಹತ್ಯೆ; ಫೇಸ್‌ಬುಕ್‌ನಲ್ಲಿ ಕಣ್ಣೀರ ಸಂದೇಶ!

ಉತ್ತರ ಪ್ರದೇಶ :ಸಾಲಬಾಧೆಯಿಂದ ಬಳಲುತ್ತಿದ್ದ ರಿಯಲ್ ಎಸ್ಟೇಟ್ ಉದ್ಯಮಿಯೊಬ್ಬರು, ಮಧುಮೇಹಿ ಮಗಳಿಗೆ ಇನ್ಸುಲಿನ್ ಇಂಜೆಕ್ಷನ್ ನೀಡಲು ಸಾಧ್ಯವಾಗುತ್ತಿಲ್ಲ ಎಂದು ಫೇಸ್‌ಬುಕ್‌ನಲ್ಲಿ ಹತಾಶೆ ತೊಡಿಕೊಂಡ ನಂತರ ಗುಂಡುಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಉತ್ತರ ಪ್ರದೇಶದ ಲಕ್ನೋದಲ್ಲಿ ಗುರುವಾರ ನಡೆದಿದೆ.

ತನ್ನ ಕಚೇರಿಯಲ್ಲಿ ಭದ್ರತಾ ಸಿಬ್ಬಂದಿಯ ಬಂದೂಕಿನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಆ ವ್ಯಕ್ತಿಯ ಗುರುತನ್ನು ಬಹಿರಂಗಪಡಿಸಿಲ್ಲ.
ತಮ್ಮ ಸಾವಿಗೆ ಸ್ವಲ್ಪ ಮೊದಲು ಪೋಸ್ಟ್ ಮಾಡಿದ ಫೇಸ್‌ಬುಕ್ ಲೈವ್ ವೀಡಿಯೊದಲ್ಲಿ, ಉದ್ಯಮಿ ಸೆಲೆಬ್ರಿಟಿಗಳು ಮತ್ತು ಕೈಗಾರಿಕೋದ್ಯಮಿಗಳಿಗೆ ತಮ್ಮ ಕುಟುಂಬಕ್ಕೆ ಬೆಂಬಲ ನೀಡುವಂತೆ ಮನವಿ ಮಾಡಿದರು. ಬಾಕಿ ಇರುವ ಸಾಲಗಳು ಮತ್ತು ಹಣಕಾಸಿನ ಬಾಧ್ಯತೆಗಳ ಒತ್ತಡವನ್ನು ಇನ್ನು ಮುಂದೆ ಸಹಿಸಲು ಸಾಧ್ಯವಿಲ್ಲ. ಅಲ್ಲದೆ, ಮಧುಮೇಹದಿಂದ ಬಳಲುತ್ತಿರುವ ತನ್ನ ಮಗಳಿಗೆ ಜೀವ ಉಳಿಸುವ ಇನ್ಸುಲಿನ್ ಖರೀದಿಸಲು ಹಣ ಹೊಂದಿಸಲು ಸಹ ಸಾಧ್ಯವಿಲ್ಲ ಎಂದು ಅವರು ವಿಡಿಯೋದಲ್ಲಿ ಹೇಳಿದ್ದಾರೆ.
