ನಿದ್ರೆಯಲ್ಲಿದ್ದವರ ಮೇಲೆ ಮಾರಣಾಂತಿಕ ದಾಳಿ: ಹಿರಿಯ ಮಗಳು ಆಸ್ಪತ್ರೆಗೆ ದಾಖಲು, ಘಟನೆಯ ಕರಾಳ ಸತ್ಯ ಬಿಚ್ಚಿಟ್ಟಳು.

ಹೈದರಾಬಾದ್: ವ್ಯಕ್ತಿಯೊಬ್ಬ ಪತ್ನಿ, ಮಗಳು ಹಾಗೂ ನಾದಿನಿಯ ಕೊಲೆ(Murder) ಮಾಡಿ ತಾನೂ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಹೈದರಾಬಾದಿನ ವಿಕಾರಾಬಾದ್ನಲ್ಲಿ ನಡೆದಿದೆ. ಕುಲ್ಕಚೆರ್ಲಾ ಮಂಡಲದಲ್ಲಿರುವ ಅವರ ಮನೆಯಲ್ಲಿ ಬೆಳಗಿನ ಜಾವ 2.30 ರಿಂದ 3 ಗಂಟೆಯ ನಡುವೆ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಅಧಿಕಾರಿಗಳ ಪ್ರಕಾರ, ಆ ವ್ಯಕ್ತಿ ಕತ್ತಿ ಬಳಸಿ 30 ವರ್ಷದ ಪತ್ನಿ, ಸುಮಾರು 10 ವರ್ಷದ ಕಿರಿಯ ಮಗಳು ಮತ್ತು 40 ವರ್ಷದ ನಾದಿನಿಯನ್ನು ಮಲಗಿದ್ದಾಗ ಕೊಲೆ ಮಾಡಿದ್ದಾನೆ. ತುರ್ತು ಸಹಾಯವಾಣಿಯ ಮೂಲಕ ಪೊಲೀಸರಿಗೆ ಘಟನೆಯ ಬಗ್ಗೆ ಮಾಹಿತಿ ನೀಡಲಾಗಿತ್ತು ಮತ್ತು ಕರೆ ಬಂದ ಸ್ವಲ್ಪ ಸಮಯದ ನಂತರ ಸ್ಥಳಕ್ಕೆ ಬಂದಿದ್ದರು.
ಆ ವ್ಯಕ್ತಿ ತನ್ನ ಹಿರಿಯ ಮಗಳನ್ನು ಸಹ ಕೊಲ್ಲಲು ಪ್ರಯತ್ನಿಸಿದ್ದ, ಆದರೆ ತಲೆಗೆ ಗಾಯಗಳಾಗಿದ್ದು ಅಪಾಯದಿಂದ ಪಾರಾಗಿದ್ದಾಳೆ. ಪ್ರಸ್ತುತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ನಂತರ ಆರೋಪಿ ಮನೆಯೊಳಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ದೃಢಪಡಿಸಿದ್ದಾರೆ.
ಪ್ರಾಥಮಿಕ ತನಿಖೆಯಲ್ಲಿ ಪತಿ ಮತ್ತು ಆತನ ಪತ್ನಿಯ ನಡುವಿನ ಕೌಟುಂಬಿಕ ಕಲಹಗಳು ದುರಂತಕ್ಕೆ ಕಾರಣವಾಗಿರಬಹುದು ಎಂದು ಅಂದಾಜಿಸಲಾಗಿದೆ. ಆಸ್ಪತ್ರೆಯಿಂದ ಪೊಲೀಸರೊಂದಿಗೆ ಮಾತನಾಡಿದ ಕುಟುಂಬದ ಮಗಳು, ರಾತ್ರಿಯ ಭಯಾನಕ ಘಟನೆಗಳನ್ನು ವಿವರಿಸಿದ್ದಾಳೆ.
ಶನಿವಾರ ತನ್ನ ಹೆತ್ತವರ ನಡುವೆ ತೀವ್ರ ಜಗಳವಾಗಿದೆ. ನಂತರ ತಾಯಿ ಮನೆಯಿಂದ ಹೊರಟುಹೋದರು ಎಂದು ಆಕೆ ಹೇಳಿದ್ದಾಳೆ. ಅವರು ಮಲಗಿದ್ದಾಗ ಪರಿಸ್ಥಿತಿ ಹೇಗೆ ಮಾರಕವಾಯಿತು ಎಂದು ಅವರು ವಿವರಿಸಿದ್ದಾಳೆ.
ಕುಟುಂಬದವರು ಗಾಢ ನಿದ್ರೆಯಲ್ಲಿದ್ದಾಗ, ತನ ತಂದೆ ಮೊದಲು ನನ್ನ ಚಿಕ್ಕಮ್ಮನನ್ನು ಕತ್ತಿಯಿಂದ ಹೊಡೆದು ಕೊಂಡಿದ್ದಾರೆ. ನನ್ನ ತಾಯಿ ಆಕೆಯನ್ನು ಉಳಿಸಲು ಪ್ರಯತ್ನಿಸಿದಾಗ, ಅವರು ಅವಳ ಮೇಲೂ ದಾಳಿ ಮಾಡಿದ್ದಾರೆ ಪರಿಣಾಮವಾಗಿ ಇಬ್ಬರೂ ಸಾವನ್ನಪ್ಪಿದ್ದಾರೆ.
ನಂತರ ತನ್ನ ತಂದೆ ನನ್ನ ಮೇಲೆ ಮತ್ತು ತನ್ನ ತಂಗಿಯ ಮೇಲೆ ಹಲ್ಲೆ ಮಾಡಿದ್ದರು. ದಾಳಿ ಮಾಡುವ ಮೊದಲು ಎಲ್ಲರೂ ಸತ್ತ ನಂತರ ನಿಮ್ಮನ್ನು ಯಾರು ನೋಡಿಕೊಳ್ಳುತ್ತಾರೆ ಎಂದು ತಂದೆ ಪ್ರಶ್ನಿಸಿದ್ದರು. ತಂಗಿಯ ಮೇಲೆ ಹಲ್ಲೆ ನಡೆಸಿ ನನ್ನ ಮೇಲೆ ಹಲ್ಲೆ ನಡೆಸಿದ ಬಳಿಕ ತಾನು ಓಡಿ ಹೋಗಿ ಅಕ್ಕಪಕ್ಕದ ಮನೆಯವರಿಗೆ ಮಾಹಿತಿ ನೀಡಿದೆ ಎಂದು ಆಕೆ ಮಾಹಿತಿ ನೀಡಿದ್ದಾಳೆ.