Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಡೇಟಿಂಗ್ ಆ್ಯಪ್‌ನ ಮಾಯಗಾತಿ ಜಾಲ; ಲಾಡ್ಜ್‌ನಲ್ಲಿ ನೀರು ಕುಡಿಸಿ ಯುವಕನಿಗೆ ₹6.89 ಲಕ್ಷ ಮೌಲ್ಯದ ಚಿನ್ನಾಭರಣ ವಂಚನೆ

Spread the love

ಬೆಂಗಳೂರು: ಗುರು-ಹಿರಿಯರು ನಿಶ್ಚಯ ಮಾಡಿದ ಮದ್ವೆಗಳೇ (Marriage) ಮುರಿದು ಬೀಳುವ ಕಾಲ ಇದು. ಅಂತದ್ದರಲ್ಲಿ ಡೇಟಿಂಗ್ ಆ್ಯಪ್ (Dating App) ಗಳಲ್ಲಿ ಪರಿಚಯವಾದ ಪ್ರೀತಿ, ಗೆಳೆತನ ಎಷ್ಟು ದಿನ ಬಾಳುತ್ತೆ ಹೇಳಿ? ಇತ್ತೀಚೆಗೆ ಡೇಟಿಂಗ್ ಆ್ಯಪ್ ಗಳ ಜಾಲ ಹೆಚ್ಚಾಗಿದೆ. ಹಣ ಕಟ್ಟಿ ರಿಜಿಸ್ಟರ್ ಮಾಡ್ಕೊಂಡ್ರೆ ಹುಡುಗನದ್ದೋ ಹುಡುಗಿಯದ್ದೋ ನಂಬರ್ ಸಿಗುತ್ತೆ. ಅಮೇಲೆ ಶುರುವಾಗೋದೇ ಅಸಲಿ ಆಟ. ಕೆಲ ಘಟನೆಗಳಲ್ಲಿ ಹೆಣ್ಣುಮಕ್ಕಳು ಯಾಮಾರಿದ್ರೆ, ಇನ್ನೂ ಕೆಲ ಪ್ರಕರಣಗಳ್ಳಿ ಗಂಡುಹೈಕಳನ್ನೇ ಯಾಮಾರಿಸುವ ಖತರ್ನಾಕ್‌ ಮಹಿಳೆಯರು ಇರ್ತಾರೆ. ಅಂತಹದ್ದೇ ಪ್ರಕರಣ ಬೆಂಗಳೂರಿನಲ್ಲಿ (Bengaluru) ನಡೆದಿದೆ.

ಡೇಟಿಂಗ್‌ ಆ್ಯಪ್‌ನಲ್ಲಿ (Dating App) ಪರಿಚಯವಾದ ಮಾಯಗಾತಿ ನಂಬಿ ಲಾಡ್ಜ್‌ಗೆ ಹೋಗಿದ್ದ ಯುವಕ ಲಕ್ಷಾಂತರ ಮೌಲ್ಯದ ಚಿನ್ನಾಭರಣ, ಹಣ ಕಳೆದುಕೊಂಡಿರುವ ಘಟನೆ ಬೆಂಗಳೂರು ಇಂದಿರಾನಗರದಲ್ಲಿ ನಡೆದಿದೆ.

ನೀರು ಕುಡಿಸಿ ಪ್ರಜ್ಞೆ ತಪ್ಪಿಸಿದ ಮಾಯಾಂಗನೆ
ಹೌದು. ಸ್ಥಳೀಯ ಯುವಕನಿಗೆ Happn app ಡೇಟಿಂಗ್‌ ಆಪ್‌ನಲ್ಲಿ 2 ತಿಂಗಳ ಹಿಂದೆ ಕವಿಪ್ರಿಯಾ ಹೆಸರಿನ ಮಾಯಗಾತಿ ಪರಿಚಯವಾಗಿದ್ದಾಳೆ. ನವೆಂಬರ್‌ 1ರಂದು ಇಬ್ಬರೂ ಇಂದಿರಾನಗರದ ರೆಸ್ಟೋರೆಂಟ್‌ನಲ್ಲಿ ಭೇಟಿಯಾಗಿದ್ದರು. ಎಣ್ಣೆ ಪಾರ್ಟಿ ಕೂಡ ಮಾಡಿದ್ದರು. ಎಣ್ಣೆ ಪಾರ್ಟಿ ಬಳಿಕ ಕವಿಪ್ರಿಯಾ ಯುವಕನನ್ನ ಲಾಡ್ಜ್‌ಗೆ ಕರೆದೊಯ್ದಿದ್ದಾಳೆ. ಮಧ್ಯರಾತ್ರಿ ತಾನೇ ಊಟ ಆರ್ಡರ್‌ ಮಾಡಿ ತರಿಸಿಕೊಂಡಿದ್ದಾಳೆ. ನಂತರ ಕವಿಪ್ರಿಯಾ ಕೊಟ್ಟ ನೀರು ಕುಡಿದ ಯುವಕ ಪ್ರಜ್ಞೆ ತಪ್ಪಿದ್ದಾನೆ. ಬೆಳಗ್ಗೆ ಕಣ್ಣು ಬಿಟ್ಟು ನೋಡಿದ್ರೆ ಆಕೆಯೂ ಇರಲಿಲ್ಲ. ತನ್ನ ಬಳಿ ಇದ್ದ ಚಿನ್ನ, ಹಣ ಎಲ್ಲವೂ ನಾಪತ್ತೆಗಿದೆ. ದುಬಾರಿ ಹೆಡ್ ಸೆಟ್, 28 ಗ್ರಾಂ. ಚಿನ್ನದ ಸರ, 30 ಗ್ರಾಂ ಚಿನ್ನದ ಕೈ ಬಳೆ, 10 ಸಾವಿರ ರೂ. ನಗದು ಸೇರಿ ಒಟ್ಟು 6.89 ಲಕ್ಷದ ವಸ್ತುಗಳು ನಾಪತ್ತೆಯಾಗಿದೆ.

ಸದ್ಯ ಹಣ, ಚಿನ್ನ ಕಳೆದುಕೊಂಡ ಯುವಕ ಘಟನೆ ಸಂಬಂಧ ಇಂದಿರಾನಗರದ ಠಾಣೆಗೆ ದೂರು‌ ನೀಡಿದ್ದಾನೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆ ಮಾಯಗಾತಿಯಾಗಿ ಶೋಧ ಆರಂಭಿಸಿದ್ದಾರೆ.

ಕೇಸ್‌-2: ಮತ್ತೊಬ್ಬಳಿಂದ 1.29 ಕೋಟಿ ವಂಚನೆ
ಈ ಬೆನ್ನಲ್ಲೇ ಮತ್ತೊಂದು ಪ್ರಕರಣದಲ್ಲಿ ಡೇಟಿಂಗ್‌ ಆ್ಯಪ್‌ನಲ್ಲಿ ಪರಿಚಯವಾದ ಯುವತಿಯೊಬ್ಬಳು ವೃದ್ಧಾಶ್ರಮ, ಹೂಡಿಕೆ ಹೆಸರಲ್ಲಿ ಬೆಂಗಳೂರಿನ ವ್ಯಕ್ತಿಗೆ 1.29 ಕೋಟಿ ಹಣ ವಂಚಿಸಿರುವ ಘಟನೆ ನಡೆದಿದೆ.

ಆ್ಯಪ್‌ನಲ್ಲಿ ಪರಿಚಯವಾದ ಮೇಘನಾ ರೆಡ್ಡಿ ಹೆಸರಿನ ಯುವತಿ ವ್ಯಕ್ತಿಯೊಂದಿಗೆ ಟೆಲಿಗ್ರಾಂನಲ್ಲಿ ಚಾಟಿಂಗ್‌ ಮಾಡಲು ಶುರು ಮಾಡಿದ್ದಾಳೆ. ಬಳಿಕ ಆತನ ತಂದೆ ಹೆಸರಲ್ಲಿ ವೃದ್ಧಾಶ್ರಮ ಕಟ್ಟಿಸೋದಾಗಿ ಆಸೆ ತೋರಿಸಿದ್ದಾಳೆ. ಇದಕ್ಕಾಗಿ ಷೇರು ಮಾರುಕಟ್ಟೆಯಲ್ಲಿ ಹಣ ಕೂಡಿಕೆ ಮಾಡಿ ಅಂತ ಆಮಿಷ ಒಡ್ಡಿದ್ದಾಳೆ. ಮಾಯಗಾತಿಯ ಮಾತು ನಂಬಿದ ವ್ಯಕ್ತಿ. ವೆಬ್‌ಸೈಟ್‌ವೊಂದರ ಮೂಲಕ 1.29 ಕೋಟಿ ಹಣ ಹೂಡಿಕೆ ಮಾಡಿದ್ದಾನೆ. ಕೊನೆಗೆ ಲಾಭವಿರಲಿ, ಹೂಡಿಕೆ ಮಾಡಿದ ಹಣವೂ ಸಿಗದೇ ಪಂಗನಾಮ ಹಾಕಿಸಿಕೊಂಡಿದ್ದಾನೆ. ಈ ಸಂಬಂಧ ಉತ್ತರ ಸೈಬರ್ ಕ್ರೈಂ ಠಾಣೆಯಲ್ಲಿ ಕೇಸ್‌ ದಾಖಲಾಗಿದೆ.


Spread the love
Share:

administrator

Leave a Reply

Your email address will not be published. Required fields are marked *