Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ದರ್ಶನ್ vs ತೆಲುಗು ಸ್ಟಾರ್ ಫ್ಯಾನ್ಸ್: ಸೋಶಿಯಲ್ ಮೀಡಿಯಾ ಯುದ್ಧ

Spread the love

ಸೋಶಿಯಲ್ ಮೀಡಿಯಾದಲ್ಲಿ ಕಳೆದರಡು ದಿನಗಳಿಂದ ನಟ ದರ್ಶನ್ ಫ್ಯಾನ್ಸ್ ಆರ್ಭಟ ಜೋರಾಗಿದೆ. ಕೆಲ ಕಿಡಿಗೇಡಿಗಳ ಹುಚ್ಚಾಟಕ್ಕೆ ಸುಖಾಸುಮ್ಮನೆ ಟ್ರೆಂಡ್ ಶುರುವಾಗಿ ವೈರಲ್ ಆಗುವಂತಾಯಿತು. ಟ್ವಿಟ್ಟರ್ ತುಂಬಾ ಮೀಮ್ಸ್, ಟ್ರೋಲ್ ಪೋಸ್ಟ್‌ಗಳು ಸಿಕ್ಕಾಪಟ್ಟೆ ಸದ್ದು ಮಾಡುತ್ತಿವೆ.
ಕೆಲವರು ಇನ್ನು ದರ್ಶನ್ ಅಭಿಮಾನಿಗಳನ್ನು ಕೆಣಕುತ್ತಲೇ ಇದ್ದಾರೆ.

“KFI ಕ್ರಿಮಿನಲ್ ದರ್ಶನ್” ಹಾಗೂ “KFI ಕ್ರಿಮಿನಲ್ ಡಿಬಾಸ್” ಎಂಬ ಹ್ಯಾಷ್‌ಟ್ಯಾಗ್‌ ಅನ್ನು ಕೆಲವರು ಟ್ರೆಂಡ ಮಾಡುತ್ತಲೇ ಇದ್ದಾರೆ. ಇದಕ್ಕೆ ದರ್ಶನ್ ಅಭಿಮಾನಿಗಳು ತಕ್ಕ ಉತ್ತರ ಕೊಡುತ್ತಿದ್ದಾರೆ. ಇದೆಲ್ಲದರ ನಡುವೆ ಕೆಲವರು ಇದನ್ನು ಇಲ್ಲಿಗೆ ಬಿಟ್ಟು ಬಿಡೋಣ ಎಂದು ಕೇಳುತ್ತಿದ್ದಾರೆ. ಆದರೆ ದರ್ಶನ್ ಫ್ಯಾನ್ಸ್ ಇದಕ್ಕೆ ಒಪ್ಪುತ್ತಿಲ್ಲ. ತೆಲುಗು ಸ್ಟಾರ್ ನಟರ ಅಭಿಮಾನಿಗಳು ದರ್ಶನ್ ಅಭಿಮಾನಿಗಳನ್ನು ಕೆಣಕಿ ಈಗ ರಾಜಿ ಮಾತು ಆಡುತ್ತಿದ್ದಾರೆ.

ಇತ್ತೀಚೆಗೆ ನಟ ದರ್ಶನ್ ಫ್ಯಾಮಿಲಿ ಸಮೇತ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿದ್ದರು. ಅದಕ್ಕೆ ಸಂಬಂಧಿಸಿದ ವೀಡಿಯೋವನ್ನು ದರ್ಶನ್ ಅಭಿಮಾನಿಯೊಬ್ಬರು ಹಂಚಿಕೊಂಡಿದ್ದರು. ಅದನ್ನು ನೋಡಿ ಕೆಲ ತೆಲುಗು ನೆಟ್ಟಿಗರು ಟ್ರೋಲ್ ಮಾಡಲು ಆರಂಭಿಸಿದ್ದರು. ಕೊಲೆ ಪ್ರಕರಣದಲ್ಲಿ ಜೈಲಿಗೆ ಹೋಗಿ ಬಂದವರಿಗೆ ಈ ಬಿಲ್ಡಪ್ ಬೇಕಾ? ಎಂದು ಟ್ರೋಲ್ ಮಾಡಿದ್ದರು. ಇದಕ್ಕೆ ದರ್ಶನ್ ಅಭಿಮಾನಿಗಳು ತಿರುಗೇಟು ಕೊಡಲು ಆರಂಭಿಸಿದರು. ಮುಂದೆ ಇದು ಸೋಶಿಯಲ್ ಮೀಡಿಯಾ ವಾರ್‌ಗೆ ವೇದಿಕೆ ಆಗಿತ್ತು.

ದರ್ಶನ್ ಬಗ್ಗೆ ತೆಲುಗು ನಟರ ಅಭಿಮಾನಿಗಳು ಟ್ರೋಲ್ ಮಾಡಿದ್ದರು. ಪವನ್ ಕಲ್ಯಾಣ್, ಪ್ರಭಾಸ್, ಜ್ಯೂ. ಎನ್‌ಟಿಆರ್ ಫ್ಯಾನ್ಸ್ ಒಟ್ಟಾಗಿ ಮುಗಿಬಿದ್ದರು. ತಮ್ಮ ತಮ್ಮಲೇ ಕೆಸರೆರಚಾಟ ಮಾಡುತ್ತಿದ್ದವರು ಒಮ್ಮೆಲೆ ದರ್ಶನ್ ಅಭಿಮಾನಿಗಳ ವಿರುದ್ಧ ನಿಂತರು. ಆದರೆ ಅಷ್ಟೇ ಬೇಗ ಸುಮ್ಮನಾಗಿಬಿಟ್ಟರು. “KFI ಕ್ರಿಮಿನಲ್ ದರ್ಶನ್” ಎಂದು ಟ್ರೋಲ್ ಮಾಡುತ್ತಿದ್ದವರು ಇದನ್ನೆಲ್ಲಾ ಇಲ್ಲಿಗೆ ನಿಲ್ಲಿಸೋಣ, ಇದರಿಂದ ಎಲ್ಲರಿಗೂ ಕೆಟ್ಟ ಹೆಸರು ಎಂದು ಉಲ್ಟಾ ಹೊಡೆದಿದ್ದಾರೆ.

ಮುಖ್ಯವಾಗಿ ಪವನ್ ಕಲ್ಯಾಣ್ ಅಭಿಮಾನಿಗಳು ಹೀಗೆ ರಾಜಿಗೆ ಮುಂದಾಗಿದ್ದಾರೆ. ಪವನ್ ಕಲ್ಯಾಣ್ ನಟನೆಯ ‘ಹರಿಹರ ವೀರಮಲ್ಲು’ ಸಿನಿಮಾ ಜುಲೈ 24ಕ್ಕೆ ತೆರೆಗೆ ಬರಲಿದೆ. ಕರ್ನಾಟಕದಲ್ಲಿಯೂ ದೊಡ್ಡದಾಗಿ ಸಿನಿಮಾ ರಿಲೀಸ್ ಪ್ರಯತ್ನ ನಡೀತಿದೆ. ಅದಕ್ಕೆ ಸಮಸ್ಯೆ ಆಗಬಾರದು ಎಂದು ಟ್ರೋಲ್ ಮಾಡುತ್ತಿದ್ದವರು ಇದನ್ನೆಲ್ಲಾ ಇಲ್ಲಿಗೆ ನಿಲ್ಲಿಸೋಣ, ಇದರಿಂದ ಎಲ್ಲರಿಗೂ ಕೆಟ್ಟ ಹೆಸರು ಎಂದು ಉಲ್ಟಾ ಹೊಡೆದಿದ್ದಾರೆ.

ಮುಖ್ಯವಾಗಿ ಪವನ್ ಕಲ್ಯಾಣ್ ಅಭಿಮಾನಿಗಳು ಹೀಗೆ ರಾಜಿಗೆ ಮುಂದಾಗಿದ್ದಾರೆ. ಪವನ್ ಕಲ್ಯಾಣ್ ನಟನೆಯ ‘ಹರಿಹರ ವೀರಮಲ್ಲು’ ಸಿನಿಮಾ ಜುಲೈ 24ಕ್ಕೆ ತೆರೆಗೆ ಬರಲಿದೆ. ಕರ್ನಾಟಕದಲ್ಲಿಯೂ ದೊಡ್ಡದಾಗಿ ಸಿನಿಮಾ ರಿಲೀಸ್ ಪ್ರಯತ್ನ ನಡೀತಿದೆ. ಅದಕ್ಕೆ ಸಮಸ್ಯೆ ಆಗಬಾರದು ಎಂದು ಈಗ ರಾಜಿ ಬಂದಿದ್ದಾರೆ ಎಂದು ಕೆಲವರು ಕಾಮೆಂಟ್ ಮಾಡುತ್ತಿದ್ದಾರೆ. ಒಟ್ಟಾರೆ ಅಭಿಮಾನಿಗಳ ಹೆಸರಿನಲ್ಲಿ ಕೆಲವರು ಹುಚ್ಚಾಟಕ್ಕೆ ಸೋಶಿಯಲ್ ಮೀಡಿಯಾ ವೇದಿಕೆ ಆಗುತ್ತಿದೆ.

ಸ್ಟಾರ್ ನಟರು ತಮ್ಮ ಪಾಡಿಗೆ ತಮ್ಮ ಸಿನಿಮಾ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ. ಆದರೆ ಅಭಿಮಾನದ ಹೆಸರಿನಲ್ಲಿ ಕೆಲವರು ಹೀಗೆ ಅತಿಯಾಗಿ ಆಡುತ್ತಿದ್ದಾರೆ. ತಮ್ಮ ನೆಚ್ಚಿನ ನಟನೇ ಗ್ರೇಟ್ ಎಂದು ಹೇಳುವ ಭರದಲ್ಲಿ ಹೀಗೆ ಬೇಡದ ವಿಚಾರಗಳನ್ನು ಎಳೆದು ತರುತ್ತಾರೆ. ಫೇಕ್ ಸೋಶಿಯಲ್ ಮೀಡಿಯಾ ಅಕೌಂಟ್ ಕ್ರಿಯೇಟ್ ಮಾಡಿ ಅಟ್ಟಹಾಸ ಮೆರೆಯುತ್ತಾರೆ. ಈ ಹಿಂದೆ ಕರ್ನಾಟಕದಲ್ಲಿ ಕೂಡ ಕೆಲವರ ಬಗ್ಗೆ ಕಿಡಿಗೇಡಿಗಳು ಇಂತಹ ಕೀಳುಮಟ್ಟದ ಪೋಸ್ಟ್‌ ಮಾಡಿದ್ದರು. ಅದು ಭಾರೀ ಚರ್ಚೆಗೆ ಕಾರಣವಾಗಿತ್ತು.

ಮತ್ತೊಂದು ಕಡೆ ದರ್ಶನ್ ನಟನೆಯ ‘ಡೆವಿಲ್’ ಸಿನಿಮಾ ಕೆಲಸಗಳು ಭರದಿಂದ ಸಾಗುತ್ತಿದೆ. ಶೀಘ್ರದಲ್ಲೇ ಚಿತ್ರತಂಡ ಹಾಡಿನ ಚಿತ್ರೀಕರಣಕ್ಕೆ ವಿದೇಶಕ್ಕೆ ತೆರಳಲಿದೆ. ಸೆಪ್ಟೆಂಬರ್ ಕೊನೆ ವಾರದಲ್ಲಿ ಸಿನಿಮಾ ಬಿಡುಗಡೆ ಆಗುವ ಸಾಧ್ಯತೆಯಿದೆ. ರೇಣುಕಾಸ್ವಾಮಿ ಪ್ರಕರಣದಲ್ಲಿ ನಟ ದರ್ಶನ್ ಸಂಕಷ್ಟಕ್ಕೆ ಸಿಲುಕಿದ್ದರು. ವಿಚಾರಣಧೀನ ಕೈದಿಯಾಗಿ ಜೈಲಿಗೆ ಹೋಗುವಂತಾಗಿತ್ತು. ಬಳಿಕ ಜಾಮೀನು ಪಡೆದು ಹೊರಬಂದಿದ್ದರು. ಆದರೆ ಅಭಿಮಾನಿಗಳು ಮಾತ್ರ ನೆಚ್ಚಿನ ನಟನ ಬೆಂಬಲಕ್ಕೆ ನಿಂತಿದ್ದಾರೆ.


Spread the love
Share:

administrator

Leave a Reply

Your email address will not be published. Required fields are marked *