Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಜೈಲಿನಲ್ಲಿ ದರ್ಶನ್‌ಗೆ ಟಿವಿ ಸೌಲಭ್ಯ: ಮನರಂಜನಾ ಚಾನೆಲ್ ಮಾತ್ರ ಲಭ್ಯ, ನ್ಯೂಸ್ ಚಾನೆಲ್ ಪ್ರಸಾರ ಬಂದ್!

Spread the love

ನಟ ದರ್ಶನ್ (Darshan), ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ನ್ಯಾಯಾಂಗ ಬಂಧನಕ್ಕೆ ಒಳಪಟ್ಟಿದ್ದು ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ. ದರ್ಶನ್, ನ್ಯಾಯಾಲಯಕ್ಕೆ ತಿಳಿಸಿರುವಂತೆ ಅವರು ಜೈಲಿನಲ್ಲಿ ಸಾಕಷ್ಟು ಸೌಲಭ್ಯಗಳ ಕೊರತೆ ಎದುರಿಸುತ್ತಿದ್ದರಂತೆ. ಈ ಹಿಂದೆ ಹಾಸಿಗು, ದಿಂಬು, ಬಾಚಣಿಗೆ, ಕನ್ನಡಿ ಇನ್ನೂ ಕೆಲವು ವಸ್ತುಗಳನ್ನು ಕೊಡಿಸುವಂತೆ, ಬ್ಯಾರಕ್ ಬದಲಾಯಿಸುವಂತೆ, ವಾಕಿಂಗ್​​ಗೆ ಅವಕಾಶ ಕೊಡಿಸುವಂತೆ ಮನವಿ ಮಾಡಿದ್ದರು. ಜೈಲಿನಲ್ಲಿ ವ್ಯವಸ್ಥೆಗಳು ಸರಿಯಿಲ್ಲವೆಂದು ದೂರು ಸಹ ನೀಡಿದ್ದರು. ಈ ಬಗ್ಗೆ ಹಲವು ದಿನಗಳ ವಿಚಾರಣೆ ನಡೆದ ಬಳಿಕ ದರ್ಶನ್​​ಗೆ ಕೆಲವು ಸವಲತ್ತುಗಳು ಸಿಕ್ಕಿವೆ. ಇದೀಗ ದರ್ಶನ್​​ ಬ್ಯಾರಕ್​​ಗೆ ಟಿವಿ ಸಹ ಅಳವಡಿಸಲಾಗಿದೆ.

ದರ್ಶನ್ ಅವರು ಟಿವಿ ನೀಡುವಂತೆ ಕೇಳಿದ್ದರು, ಅದರಂತೆ ಈಗ ದರ್ಶನ್ ಇರುವ ಬ್ಯಾರಕ್​​ಗೆ ಟಿವಿ ನೀಡಲಾಗಿದೆ. ದರ್ಶನ್ ಬೇಡಿಕೆಯಂತೆ ಟಿವಿ ಬಂದಿದೆಯಾದರೂ ದರ್ಶನ್ ಅವರಿಗೆ ಬೇಕಾದ್ದು ಸಿಕ್ಕಿಲ್ಲ. ದರ್ಶನ್​ಗೆ ನೀಡಲಾಗಿರುವ ಟಿವಿಯಲ್ಲಿ ಕೇವಲ ಮನೊರಂಜನಾ ಚಾನೆಲ್​​ಗಳು ಮಾತ್ರ ಪ್ರಸಾರ ಆಗುವಂತೆ ಜೈಲು ಸಿಬ್ಬಂದಿ ಬದಲಾವಣೆ ಮಾಡಿದ್ದಾರೆ. ದರ್ಶನ್​​ಗೆ ನೀಡಲಾಗಿರುವ ಟಿವಿಯಲ್ಲಿ ಯಾವುದೇ ನ್ಯೂಸ್ ಚಾನೆಲ್​​ ಬರುತ್ತಿಲ್ಲ. ಇದರಿಂದಾಗಿ ಹೊರಗೆ ಏನು ನಡೆಯುತ್ತಿದೆ ಎಂಬುದನ್ನು ತಿಳಿದುಕೊಳ್ಳಲು ದರ್ಶನ್​​ಗೆ ಸಾಧ್ಯವಾಗುತ್ತಿಲ್ಲ.

‘ಡೆವಿಲ್’ ಸಿನಿಮಾ ಬಿಡುಗಡೆ ಅಪ್​ಡೇಟ್ಸ್ ಸೇರಿದಂತೆ ಇತರೆ ವಿಷಯಗಳು ಸಹ ದರ್ಶನ್ ಅವರನ್ನು ಸದ್ಯಕ್ಕೆ ತಲುಪುತ್ತಿಲ್ಲ. ಇದು ಸಹಜವಾಗಿಯೇ ದರ್ಶನ್​​ಗೆ ಬೇಸರ ತಂದಿರಲಿಕ್ಕೆ ಸಾಧ್ಯವಿದೆ. ದರ್ಶನ್ ಪ್ರಸ್ತುತ ಕೇವಲ ಮನೊರಂಜನಾ ಚಾನೆಲ್​​ಗಳನ್ನು ಮಾತ್ರವೇ ನೋಡಬೇಕಿದೆ. ಹಾಡುಗಳು, ಸಿನಿಮಾ, ಧಾರಾವಾಹಿ ಇನ್ನಿತರೆಗಳನ್ನು ಮಾತ್ರವೇ ನೋಡಬೇಕಿದೆ. ‘ಡೆವಿಲ್’ ಸಿನಿಮಾದ ರಿಲೀಸ್ ಮತ್ತು ಸಿನಿಮಾಕ್ಕೆ ಜನರಿಂದ ಸಿಗುತ್ತಿರುವ ಪ್ರತಿಕ್ರಿಯೆಗಳನ್ನು ನೋಡುವ ತವಕ ದರ್ಶನ್​​ಗೆ ಇದ್ದಂತಿತ್ತು, ಆದರೆ ಜೈಲು ಸಿಬ್ಬಂದಿಯ ಕಠಿಣ ನಿಯಮದಿಂದಾಗಿ ಅದು ತಪ್ಪಿದೆ.

ದರ್ಶನ್ ಅವರು ತಮಗೆ ಜೈಲಿನಲ್ಲಿ ಸೌಲಭ್ಯಗಳು ಸಿಗುತ್ತಿಲ್ಲ ಎಂದು ಈ ಹಿಂದೆ ನ್ಯಾಯಾಲಯಕ್ಕೆ ಮನವಿ ಮಾಡಿದ್ದರು. ಒಂದು ಹಂತದಲ್ಲಂತೂ ನನಗೆ ಇಲ್ಲಿ ಇರಲು ಆಗುತ್ತಿಲ್ಲ ‘ನನಗೆ ವಿಷ ಕೊಟ್ಟುಬಿಡಿ’ ಎಂದು ಸಹ ನ್ಯಾಯಾಧೀಶರ ಬಳಿ ಕೇಳಿ ಕೊಂಡಿದ್ದರು. ದರ್ಶನ್ ಮನವಿಯ ವಿಚಾರಣೆ ನಡೆಸಿದ್ದ ನ್ಯಾಯಾಲಯ, ಜೈಲಿಗೆ ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ತಂಡವೊಂದನ್ನು ಕಳಿಸಿ ವೀಕ್ಷಣೆ ನಡೆಸಿ ವರದಿ ತರಿಸಿಕೊಂಡಿತ್ತು. ಬಳಿಕ ದರ್ಶನ್​​ ಮನವಿ ಮಾಡಿದ್ದ ಸೌಲಭ್ಯಗಳಲ್ಲಿ ಕೆಲವನ್ನು ಕೊಡಿಸಲಾಗಿತ್ತು.


Spread the love
Share:

administrator

Leave a Reply

Your email address will not be published. Required fields are marked *