Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ದಿನಸಿ ಅಂಗಡಿಯಲ್ಲಿ ನಕಲಿ ಗ್ರಾಹಕನ ಅಸಲಿ ಆಟ: ಚಿಲ್ಲರೆ ಕೊಡುವ ಸೋಗಿನಲ್ಲಿ ಮಹಿಳೆಯ ಕುತ್ತಿಗೆಯಿಂದ ಚಿನ್ನದ ಸರ ಎಳೆದು ಪರಾರಿ

Spread the love

ನವದೆಹಲಿ: ವಿಕ್ಸ್ ಚಾಕೋಲೇಟ್ ಖರೀದಿ ಮಾಡಲು ಅಂಗಡಿಗೆ ಬಂದ ಕಳ್ಳನೊಬ್ಬ ಅಂಗಡಿಯ ಮಾಲೀಕಳ ಕುತ್ತಿಗೆಯಿಂದ ಚಿನ್ನದ ಸರವನ್ನು ಎಳೆದುಕೊಂಡಿದ್ದಾನೆ. ದಿನಸಿ ಅಂಗಡಿಯಲ್ಲಿ ನಡೆದ ಈ ಚಿನ್ನದ ಸರ ಕಿತ್ತುಕೊಂಡ ಘಟನೆ ಅಲ್ಲಿನ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಅದರಲ್ಲಿ ಕಳ್ಳನ ಮುಖವೂ ಸ್ಪಷ್ಟವಾಗಿ ದಾಖಲಾಗಿದೆ. ಸಂಜೆ ದಿನಸಿ ಅಂಗಡಿಗೆ ಬಂದ ಅಪರಿಚಿತನೊಬ್ಬ ವಿಕ್ಸ್ ಚಾಕೋಲೇಟ್​ಗಳನ್ನು ಕೇಳಿದ. ಇದಕ್ಕೆ ಅಂಗಡಿಯಲ್ಲಿದ್ದ ಮಹಿಳೆ ಅವನಿಗೆ ವಿಕ್ಸ್ ಕೊಟ್ಟಳು. ಆಗ ಚಿಲ್ಲರೆ ಹಣ ನೀಡಲು ಹತ್ತಿರ ಬಂದ ಆ ಕಳ್ಳ ಆಕೆಯ ಕುತ್ತಿಗೆಯಲ್ಲಿದ್ದ ಚಿನ್ನದ ಸರವನ್ನು ಕಟ್ ಮಾಡಿಕೊಂಡು ಓಡಿದ್ದಾನೆ.

ಆತ ದಿಢೀರೆಂದು ಈ ರೀತಿ ಮಾಡಿದ್ದರಿಂದ ಆಘಾತಕ್ಕೊಳಗಾದ ಮಹಿಳೆ ಗಂಡನನ್ನು ಕರೆದಿದ್ದಾಳೆ. ನಂತರ ಕುಟುಂಬ ಸದಸ್ಯರು ಹೊರಬಂದು ಕಳ್ಳನನ್ನು ಹಿಡಿಯಲು ಓಡಿಹೋಗಿದ್ದಾರೆ. ಆದರೆ, ಕಳ್ಳ ತಪ್ಪಿಸಿಕೊಂಡಿದ್ದಾನೆ. ಇದು ಎಲ್ಲಿ ನಡೆದಿದೆ ಎಂಬುದು ಸ್ಪಷ್ಟವಾಗಿಲ್ಲ. ಈ ವೀಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ.


Spread the love
Share:

administrator

Leave a Reply

Your email address will not be published. Required fields are marked *