ಘಾಜಿಯಾಬಾದ್‌ನಲ್ಲಿ ಅಪಾಯಕಾರಿ ಸಾಹಸ: ಬಾಯಲ್ಲಿ ಪಟಾಕಿ ಇಟ್ಟುಕೊಂಡು ಲೈಟರ್‌ನಿಂದ ಬೆಂಕಿ ಹಚ್ಚಿದ ಯುವಕ; ವೈರಲ್ ವಿಡಿಯೋಗೆ ನೆಟ್ಟಿಗರು ಗರಂ!

ಉತ್ತರ ಪ್ರದೇಶ: ದೀಪಾವಳಿ (Deepavali) ಹಬ್ಬವೇ ಹಾಗೆ ಸಂಭ್ರಮ ಸಡಗರ ತುಂಬಿರುತ್ತದೆ. ಬೆಳಕಿನ ಹಬ್ಬವು ಪಟಾಕಿ ಸದ್ದು ಇಲ್ಲದೇ ಪೂರ್ಣ ಗೊಳ್ಳುವುದೇ ಇಲ್ಲ. ಕೆಲವರು ಈ ಪಟಾಕಿಯನ್ನು ಕೈಯಲ್ಲಿ ಹಿಡಿದು ಬೆಂಕಿ ಹಚ್ಚಿಕೊಂಡು ಅಪಾಯವನ್ನು ಮೈ ಮೇಲೆ ಎಳೆದುಕೊಳ್ಳುತ್ತಾರೆ. ಪಟಾಕಿಯನ್ನು ನೆಲದ ಮೇಲಿಟ್ಟು ಬೆಂಕಿ ಹಚ್ಚುತ್ತೇವೆ. ಆದರೆ ಇಲ್ಲೊಬ್ಬ ಯುವಕನು ಬೇರೆಯದ್ದೇ ಈ ರೀತಿ ಪಟಾಕಿ ಹೊಡೆಯಲು ಮುಂದಾಗಿದ್ದಾನೆ. ಈ ಯುವಕನು ಬಾಯಲ್ಲಿ ಪಟಾಕಿ ಇಟ್ಟುಕೊಂಡು ಲೈಟರ್‌ನಿಂದ ಬೆಂಕಿ ಹಚ್ಚಿಕೊಂಡಿದ್ದಾನೆ. ಆ ಬಳಿಕ ಭಯವಿಲ್ಲದೇ ತೋಳುಗಳನ್ನು ಚಾಚಿ ನಿಂತುಕೊಂಡಿದ್ದು ಈ ಘಟನೆಯೂ ಉತ್ತರ ಪ್ರದೇಶದ ಗಾಜಿಯಾಬಾದ್‍ನಲ್ಲಿ (Ghaziabad of Uttar Pradesh) ನಡೆದಿದೆ ಎನ್ನಲಾಗಿದೆ. ಈ ವಿಡಿಯೋ ಸದ್ಯ ವೈರಲ್ ಆಗಿದ್ದು ನೆಟ್ಟಿಗರು ಯುವಕನ ವಿರುದ್ಧ ಗರಂ ಆಗಿದ್ದಾರೆ.

ಬಾಯಲ್ಲಿ ಪಟಾಕಿ ಇಟ್ಟುಕೊಂಡು ಈ ಯುವಕ ಮಾಡಿದ್ದೇನು?
ವಿನೋದ್ ಕಲೆ (Vinod kale) ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, ಈ ವಿಡಿಯೋದಲ್ಲಿ ಯುವಕನು ದೀಪಾವಳಿ ಹಬ್ಬದಂದು ಪಟಾಕಿಯನ್ನು ವಿಭಿನ್ನ ರೀತಿಯಲ್ಲಿ ಹೊಡೆಯಲು ಮುಂದಾಗಿದ್ದಾನೆ. ಕೆಂಪುಬಣ್ಣದ ಶರ್ಟ್ ಧರಿಸಿರುವ ಯುವಕನೊಬ್ಬ ತನ್ನ ಬಾಯಿಯಲ್ಲಿ ಪಟಾಕಿಯನ್ನು ಇಟ್ಟುಕೊಂಡಿರುವುದನ್ನು ನೀವು ನೋಡಬಹುದು. ಆ ಬಳಿಕ ಲೈಟರ್‌ನಿಂದ ಬೆಂಕಿ ಹಚ್ಚಿದ್ದು, ಪಟಾಕಿ ಹೊತ್ತಿಕೊಂಡಾಗ ಕಿಡಿಗಳು ಹಾರಲು ಶುರುವಾಗಿದೆ. ಯುವಕ ಮಾತ್ರ ತನ್ನ ಎರಡು ತೋಳುಗಳನ್ನು ಚಾಚಿ ನಿಂತಿದ್ದು, ಏಕಾಏಕಿ ಪಟಾಕಿಯು ಸಿಡಿದಿದೆ. ಆದರೆ ಅದೃಷ್ಟವಶಾತ್ ಯಾರಿಗೂ ಗಾಯಗಳಾಗಿಲ್ಲ ಎಂದು ತಿಳಿದು ಬಂದಿದೆ
ಈ ವಿಡಿಯೋ ಹದಿನಾರು ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು ಒಬ್ಬ ಬಳಕೆದಾರ ಜೀವಕ್ಕೆ ಬೆಲೆಯೇ ಅನ್ನೋದಕ್ಕೆ ಇದು ನೈಜ ಉದಾಹರಣೆ ಎಂದಿದ್ದಾರೆ. ಮತ್ತೊಬ್ಬರು ಇವ್ನು ಗಾಜಿಯಾಬಾದ್ ರಾವಣ ಎಂದು ತಮಾಷೆ ಮಾಡಿದ್ದಾರೆ. ಇನ್ನೊಬ್ಬ ಬಳಕೆದಾರ ದಯವಿಟ್ಟು ಈ ರೀತಿ ಯಾರು ಪ್ರಯತ್ನಿಸಬೇಡಿ ಸುರಕ್ಷಿತವಾಗಿರಿ ಎಂದು ಸಲಹೆ ನೀಡಿದ್ದಾರೆ.