ಮೊಬೈಲ್ ಅಡಿಕ್ಷನ್‌ನಿಂದ ಅಪಾಯ: ರೈಲಿಗೆ ಸಿಲುಕಬೇಕಿದ್ದ ವೃದ್ಧನನ್ನು ರಕ್ಷಿಸಿದ ಆರ್‌ಪಿಎಫ್ ಸಿಬ್ಬಂದಿ!

ಈ ಮೊಬೈಲ್ ಅನ್ನೋದು ಬಂದಮೇಲೆ..ಅದ್ರಲ್ಲೂ ಈ ಸೋಶಿಯಲ್ ಮೀಡಿಯಾ ಹಾವಳಿ ಹೆಚ್ಚಾದ ಮೇಲಂತೂ,ಜನ ಪ್ರಪಂಚವನ್ನೇ ಮರೆತು ತಮ್ಮದೇ ಲೋಕದಲ್ಲಿ ಮುಳುಗಿ ಹೋಗಿರ್ತಾರೆ.ನಾವು ಇಲ್ಲಿದ್ದೇವೆ..ಯಾಕಾಗಿ ಬಂದಿದ್ದೇವೆ..ಎಲ್ಲವನ್ನೂ ಮರೆತು ಮೊಬೈಕ್ ನೋಡುತ್ತಾ ಗಂಟೆ ಗಟ್ಟಲೆ ಕಾಲ ಕಳೆಯುವ ಅನೇಕರಿದ್ದಾರೆ.

ಕೆಲವೊಮ್ಮೆ ಈ ಮೊಬೈಲ್ ಹಾಗೂ ಸೋಶಿಯಲ್ ಮೀಡಿಯಾ ಅಡಿಕ್ಷನ್ ಹಲವರ ಜೀವಕ್ಕೆ ಕುತ್ತು ತಂದಿರುವುದು ಹೌದು.
ಇಂಥದ್ದೇ ಘಟನೆಯೊಂದು ಬೇತುಲ್ ರೈಲ್ವೆ ನಿಲ್ದಾಣದಲ್ಲಿ ನಡೆದಿದೆ. ಇಲ್ಕಿಬ್ರೈಲು ಹತ್ತಲು ಬಂದ ವೃದ್ಧರೊಬ್ಬರು,ರೈಲಿ ಹೊರಡಲಿ ಇನ್ನೂ ಕೆಲ ಸಮಯ ಇದ್ದ ಕಾರಣ ಪ್ಲಾಟ್ ಫಾರಂ ನಲ್ಲಿ ಕುಳಿತು ಮೊಬೈಲ್ ನಲ್ಲಿ ಮುಳುಗಿಹೋಗಿದ್ದಾರೆ.ಈ ವೇಳೆ ಅವರು ಪ್ರಯಾಣಿಸಬೇಕಾದ ಟ್ರೈನ್ ಹೊರಟಿರುವುದು ಅವರ ಗಮನಕ್ಕೆ ಬಂದಿರುವುದಿಲ್ಲ. ಆದ್ರೆ ಇದ್ದಕ್ಕಿದ್ದಂತೆ ಅವರಿಗೆ ಟ್ರೈನ್ ಚಲಿಸುತ್ತಿರುವುದು ಅರಿವಾಗಿದೆ.
ಈ ವೇಳೆ ಇನ್ನೆಲ್ಲಿ ಟ್ರೈನ್ ಮಿಸ್ ಆಗುತ್ತೋ ಎಂದು ಗಾಬರಿಗೊಂಡ ವೃದ್ಧ..ತಮ್ಮ ಮೊಬೈಲ್ ಅನ್ನು ಕಿಸೆಯಲ್ಲಿರಿಸಿ ಕೂಡಲೇ ವೇಗವಾಗಿ ಚಲಿಸುತ್ತಿದ್ದ ಟ್ರೈನ್ ಹತ್ತಲು ಪ್ರಯತ್ನಿಸುತ್ತಾರೆ.ಆದ್ರೆ ಈ ವೇಳೆ ಟ್ರೈನ್ ವೇಗವಾಗಿ ಚಲಿಸುತ್ತಿದ್ದ ಕಾರಣ,ಹತ್ತಲು ಸಾಧ್ಯವಾಗದೆ ಆಯತಪ್ಪಿ ಕೆಳಗೆ ಬಿದ್ದಿದ್ದಾರೆ.ಸ್ವಲ್ಪ ಹೆಚ್ಚು ಕಡಿಮೆಯಾಗಿದ್ರೂ ವೃದ್ಧ ರೈಲಿನ ಚಕ್ರಕ್ಕೆ ಸಿಲುಕಿ ಪ್ರಾಣವನ್ನೇ ಕಳೆದುಕೊಳ್ಳಬೇಳಿತ್ತು.
ಆದ್ರೆ ಕೂಡಲೇ ಎಚ್ಚೆತ್ತ ಸ್ಥಳದಲ್ಲಿದ್ದ ಆರ್‌ಪಿಎಫ್ ಕಾನ್ಸ್‌ಟೇಬಲ್ ಸತ್ಯ ಪ್ರಕಾಶ್ ರಾಜೂರ್ಕರ್ ಎಂಬ ಸಿಬ್ಬಂದಿ ಸಮಯಪ್ರಜ್ಞೆ ಮೆರೆದು ಈ ವೃದ್ಧನ ಜೀವ ರಕ್ಷಿಸಿದ್ದಾರೆ.ಈ ಘಟನೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು ಮೈ ಜುಮ್ಮೆನಿಸುವಂತಿದೆ.ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ಅತಿಯಾದ ಮೊಬೈಲ್ ಬಳಕೆಯ ಕುರಿತು ತಕರಾರು ವ್ಯಕ್ತಪಡಿಸಿದ್ದಾರೆ.
