‘ಡಿ ಬಾಸ್.. ಡಿ ಬಾಸ್’ ಕೂಗಿದ ದರ್ಶನ್ ಫ್ಯಾನ್ಸ್: ವೇದಿಕೆಯಿಂದ ಇಳಿದು ಹೋಗಿ ಬೇಸರ ಹೊರಹಾಕಿದ ರಚಿತಾ ರಾಮ್

ದರ್ಶನ್ ಅಭಿಮಾನಿಗಳ ನಡೆಗೆ ಡಿಂಪಲ್ ಕ್ವೀನ್ ರಚಿತಾ ರಾಮ್ ಬೇಸರ ಹೊರಹಾಕಿದ್ದಾರೆ. ಯೆಸ್. ದುನಿಯಾ ವಿಜಯ್ (Duniya Vijay), ರಚಿತಾ ರಾಮ್ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ಲ್ಯಾಂಡ್‌ಲಾರ್ಡ್ ಸಿನಿಮಾದ (Landlord Movie) ಟೀಸರ್ ಲಾಂಚ್ ಇವೆಂಟ್ ಕಾರ್ಯಕ್ರಮ ಬೆಂಗಳೂರಿನಲ್ಲಿ ನಡೆದಿತ್ತು. ರಚಿತಾ ರಾಮ್ ವೇದಿಕೆ ಮೇಲೆ ಮಾತು ಶುರು ಮಾಡ್ತಿದ್ದಂತೆ ದರ್ಶನ್ ಫ್ಯಾನ್ಸ್ ʻಡಿ ಬಾಸ್.. ಡಿಬಾಸ್..ʼ ಅಂತಾ ಕೂಗಲು ಶುರು ಮಾಡಿದ್ರು. ಈ ವೇಳೆ ರಚಿತಾ ಮಾತಾಡಲು ಆಗದೇ ಬೇಸರದಿಂದ ವೇದಿಕೆಯ ಮುಂಭಾಗಕ್ಕೆ ಬಂದು ಕೆಲಹೊತ್ತು ಕುಳಿತುಕೊಂಡ್ರು.

ಬಳಿಕ ನೀವು ಕೂಗುವುದನ್ನ ನಿಲ್ಲಿಸಿದಾಗ ಮಾತ್ರ ನಾನು ವೇದಿಕೆ ಮೇಲೆ ಬಂದು ಮಾತಾಡುತ್ತೇನೆ ಎಂದು ಬಳಿಕ ಮಾತು ಶುರು ಮಾಡಿದ್ದಾರೆ. ರಚಿತಾ ರಾಮ್ (Rachita Ram) ಹೋದ ಕಡೆಗೆಲ್ಲ ಈ ರೀತಿಯಾಗಿ ಅಭಿಮಾನಿಗಳು ಅಭಿಮಾನ ತೋರುವುದು ಸರಿ. ಆದ್ರೆ ಕೆಲವೊಂದು ಬಾರಿ ಆ ಕಾರ್ಯಕ್ರಮಕ್ಕೂ, ಜಾಗಕ್ಕೂ, ವೇದಿಕೆಗೂ ಸಂಬಂಧವೇ ಇರಲ್ಲ. ಅಂತಹ ಕಡೆಗಳಲ್ಲಿ ಈ ರೀತಿ ಹುಚ್ಚಾಟ ಮಾಡಿ ಮುಜುಗುರಕ್ಕೆ ಕಾರಣವಾಗುತ್ತಾರೆ. ಅಂತಹದ್ದೇ ಸನ್ನಿವೇಶವನ್ನ ಇವತ್ತು ನಟಿ ರಚಿತಾ ರಾಮ್ ಎದುರಿಸಿದ್ದಾರೆ.
ಲ್ಯಾಂಡ್‌ಲಾರ್ಡ್ ಸಿನಿಮಾದ ಇವೆಂಟ್‌ನಲ್ಲಿ ನಟಿ ರಚಿತಾ ಮಾತಾಡುವ ವೇಳೆ ಒಂದು ಕಡೆ ಡಿ ಬಾಸ್ ಎಂದು ಕೆಲವರು ಕೂಗಿದರೆ. ಮತ್ತೊಂದು ಕಡೆ ದುನಿಯಾ ವಿಜಯ್ ಫ್ಯಾನ್ಸ್ ಸಲಗ ಸಲಗ ಎಂದು ಕೂಗಿದ್ದಾರೆ. ಸಹಜವಾಗಿಯೇ ನವರಂಗ್ ಚಿತ್ರಮಂದಿರದಲ್ಲಿ ದರ್ಶನ್ ಫ್ಯಾನ್ಸ್ ಡಿ ಬಾಸ್ ಅಂತಾ ಕೂಗಿದ್ರೆ, ದುನಿಯಾ ವಿಜಯ್ ಫ್ಯಾನ್ಸ್ ಸಲಗ..ಸಲಗ ಎಂದು ಕೂಗಿದ್ದಾರೆ.
ಜಡೇಶ್ ಹಂಪಿ (Jadesh Kumar Hampe) ನಿರ್ದೇಶನದ ಲ್ಯಾಂಡ್‌ಲಾರ್ಡ್ ಸಿನಿಮಾದ ಟೀಸರ್ ರಿಲೀಸ್ ಆಗಿದ್ದು, ಟೀಸರ್‌ಗೆ ಹಿರಿಯ ನಟಿ ಉಮಾಶ್ರೀ ಹಿನ್ನೆಲೆ ಧ್ವನಿ ನೀಡಿದ್ದಾರೆ. ಸಾರಥಿ ಫಿಲಂಸ್ ಬ್ಯಾನರ್‌ನಡಿಯಲ್ಲಿ ಹೇಮಂತ್‌ಗೌಡ ಕೆಎಸ್ ಹಾಗೂ ಕೆವಿ ಸತ್ಯಪ್ರಕಾಶ್ ನಿರ್ಮಾಣ ಮಾಡಿದ್ದಾರೆ. ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಟೀಸರ್ ರಿಲೀಸ್ ಆಗಿದೆ.