Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ರಾಜ್ಯಕ್ಕೆ ಸೈಕ್ಲೋನ್​ ಎಫೆಕ್ಟ್​; ಈ 9 ಜಿಲ್ಲೆಗಳಿಗೆ ರೆಡ್​​ ಅಲರ್ಟ್​​, ಶಾಲೆ ಕಾಲೇಜುಗಳಿಗೂ ರಜೆ!

Spread the love

ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತದ ಎಫೆಕ್ಟ್​​ ಕರ್ನಾಟಕದ ಮೇಲೆಯೂ ಭಾರೀ ಪರಿಣಾಮ ಬೀರಲಿದೆ. ಸಮುದ್ರದಲ್ಲಿಬರೋಬ್ಬರಿ 5.8 ಎಂಟು ಅಡಿ ಎತ್ತರಕ್ಕೆ ಸುಳಿಗಾಳಿ ಬೀಸುತ್ತಿದೆ. ಹೀಗಾಗಿ ರಾಜ್ಯದಲ್ಲೂ ಈ ಸೈಕ್ಲೋನ್​ ಎಫೆಕ್ಟ್​​ ಭಾರೀ ಅವಾಂತರಸೃಷ್ಟಿಸಬಹುದು ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಜೊತೆಗೆ ರಾಜ್ಯದ 9 ಜಿಲ್ಲೆಗಳಲ್ಲಿ ರೆಡ್​​ ಅಲರ್ಟ್​​ ಘೋಷಣೆ ಮಾಡಲಾಗಿದೆ.

ವಾಯುಭಾರ ಕುಸಿತದಿಂದ ಸಮುದ್ರದಲ್ಲಿ 5.8 ಎಂಟು ಅಡಿ ಎತ್ತರಕ್ಕೆ ಸುಳಿಗಾಳಿ ಬೀಸುತ್ತಿದೆ. ಹೀಗಾಗಿ ಹೀಗಾಗಿ ಇಂದು ಒಂಬತ್ತು ಜಿಲ್ಲೆಗಳಿಗೆ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ. ಸೈಕ್ಲೋನ್​​​ ಎಫೆಕ್ಟ್​​ನಿಂದ ಭಾರೀ ಮಳೆಯಾಗುವ ಹಿನ್ನೆಕೆ ಹವಾಮಾನ ಇಲಾಖೆ ರೆಡ್ ಅಲರ್ಟ್ ಘೋಷಿಸಿದೆ.

ರಾಜ್ಯದ 9 ಜಿಲ್ಲೆಗಳಿಗೆ ಹವಾಮಾನ ಇಲಾಖೆ ರೆಡ್​​ ಅಲರ್ಟ್​​ ಘೋಷಣೆ ಮಾಡಿದೆ. ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಕೊಡಗು, ಶಿವಮೊಗ್ಗ, ಬೆಳಗಾವಿ, ಧಾರವಾಡ, ಹಾವೇರಿ, ಚಿಕ್ಕಮಗಳೂರು ಜಿಲ್ಲೆಗೆ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ. ಸೈಕ್ಲೋನ್​ ಎಫೆಕ್ಟ್​​ನಿಂದ ಈ ಎಲ್ಲಾ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಮುನ್ಸೂಚನೆ ನೀಡಲಾಗಿದೆ. ಜೊತೆಗೆ ಮುಂಗಾರು ಮಳೆ ಎಚ್ಚರಿಕೆ ಕೂಡ ಇದ್ದು, ಈ ಭಾಗದ ಜನರು ಎಚ್ಚರಿಕೆಯಿಂದಿರುವಂತೆ ಸೂಚನೆ ನೀಡಲಾಗಿದೆ.

ಐದು ಜಿಲ್ಲೆಗಳ ಅಂಗನವಾಡಿ, ಶಾಲಾ ಕಾಲೇಜಿಗೆ ರಜೆ ಘೋಷಣೆ!

ಇತ್ತ ಭಾರೀ ಮಳೆ ಕಾರಣ ಐದು ಜಿಲ್ಲೆಗಳ ಅಂಗನವಾಡಿ, ಶಾಲಾ ಕಾಲೇಜಿಗೆ ರಜೆ ಘೋಷಣೆ ಮಾಡಲಾಗಿದೆ. ಧಾರವಾಡ, ಚಿಕ್ಕಮಗಳೂರು, ಉತ್ತರಕನ್ನಡ, ಉಡುಪಿ, ಮಡಿಕೇರಿಯ ಶಾಲಾ ಕಾಲೇಜಿಗೆ ರಜೆ ಘೋಷಣೆ ಮಾಡಲಾಗಿದೆ.

ಈ ರಾಜ್ಯಗಳಲ್ಲಿ ಆರೆಂಜ್​ ಅಲರ್ಟ್​ ಘೋಷಣೆ!

ಇತ್ತ ರಾಜ್ಯದ ಬಾಗಲಕೋಟೆ, ಗದಗ, ವಿಜಯಪುರ, ದಾವಣಗೆರೆ, ಹಾಸನ, ಮೈಸೂರು ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದೆ.  ಹವಾಮಾನ ಇಲಾಖೆ ಅಧಿಕಾರಿ ಸಿಎಸ್ ಪಾಟೀಲ್‌ ಮಳೆ ಮುನ್ಸೂಚನೆ ನೀಡಿದ್ದಾರೆ.

ಇತ್ತ ಮುಂಗಾರು ಮಳೆ ಕೂಡ ರಾಜ್ಯದಲ್ಲಿ ಅಬ್ಬರಿಸುತ್ತಿದೆ. ಉತ್ತರ ಕರ್ನಾಟಕ ಜಿಲ್ಲೆಯಲ್ಲಿ ಎಡಬಿಡದೆ ಸುರಿಯುತ್ತಿರುವ ಮಳೆಗೆ ಹಲವೆಡೆ ತಗ್ಗು ಪ್ರದೇಶಗಳು ಜಲಾವೃತವಾಗಿದೆ.  ರಸ್ತೆಯಲ್ಲಿ ಸಂಚಾರಕ್ಕೆ ಜನರು ಪರದಾಟ ನಡೆಸಿದ್ದಾರೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಭಾರೀ ಮಳೆ ಹಿನ್ನಲೆ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ. ಈ ಪರಿಣಾಮ ಶಾಲೆ ಮತ್ತು ಅಂಗನವಾಡಿಗಳಿಗೆ ರಜೆ ಘೋಷಿಸಿ ಹೊರಡಿಸಲಾಗಿದೆ.

ಸೈಕ್ಲೋನ್​ ಎಫೆಕ್ಟ್​​, ರಾಜ್ಯದಲ್ಲು ಮಳೆ ಎಚ್ಚರಿಕೆ!

ಬಂಗಾಳಕೊಲ್ಲಿ ಸಮುದ್ರ ಮೇಲ್ಮೈನಲ್ಲಿ ಚಂಡಮಾರುತ ರೂಪದ ವೈಪರೀತ್ಯ ಉಂಟಾಗಿದೆ. ಇದು ಪರಿಪೂರ್ಣವಾಗಿ ಸೈಕ್ಲೋನ್ ಆಗಿ ಬದಲಾಗಿದೆ. ಆದರೆ ದಿನದಿಂದ ದಿನಕ್ಕೆ ಅದರ ತೀವ್ರತೆ ಹೆಚ್ಚಾಗುತ್ತಿದೆ. ಆಂಧ್ರ ಪ್ರದೇಶದ ಕರಾವಳಿ ಭಾಗದಲ್ಲಿನ ಬಿರುಗಾಳಿ ಸಹಿತ ಭಾರೀ ಮಳೆಯಾಗ್ತಿದ್ದು, ಇದರ ಎಫೆಕ್ಟ್ ರಾಜ್ಯದ ಕರಾವಳಿ ಭಾಗಗಳ ಮೇಲೂ ಬೀಳಲಿದೆ.


Spread the love
Share:

administrator

Leave a Reply

Your email address will not be published. Required fields are marked *