Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಜೈಲಿನಲ್ಲಿ ಪ್ರಜ್ವಲ್ ರೇವಣ್ಣನಿಗೆ ಶಿಕ್ಷೆಯಾಗಿ ಸಿಗಲಿರುವ ಕೂಲಿ ಕೆಲಸಗಳೇನು?

Spread the love

ಬೆಂಗಳೂರು:ಅತ್ಯಾಚಾರ ಪ್ರಕರಣದಲ್ಲಿ ದೋಷಿ ಎಂದು ಸಾಬೀತಾಗಿ ಈಗ ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ಮಾಜಿ ಸಂಸದ ಪ್ರಜ್ವಲ್‌ ರೇವಣ್ಣ ಅವರು ನಿನ್ನೆಯಿಂದಲೇ ಅಧಿಕೃತವಾಗಿ ಸಜಾಬಂಧಿ ಖೈದಿಯಾಗಿದ್ದಾರೆ.

ಜೀವನ ಪೂರ್ತಿ ಜೈಲೂಟವನ್ನೇ ತಿನ್ನಬೇಕಾಗಿ ಬಂದಿರುವ ಅವರ ಜೀವನಶೈಲಿ ಎಲ್ಲವೂ ಬದಲಾಗಲಿದೆ.

ಪ್ರಜ್ವಲ್ ರೇವಣ್ಣಗೆ ಖೈದಿ ನಂಬರ್‌ 15528 ನೀಡಲಾಗಿದೆ. ನಿನ್ನೆ ಶನಿವಾರ ಪ್ರಜ್ವಲ್‌ ರೇವಣ್ಣಗೆ ಜೈಲು ಸಿಬ್ಬಂದಿ ಬಿಳಿ ವಸ್ತ್ರ ನೀಡಿದ್ದಾರೆ. ಜೈಲು ನಿಯಮಾವಳಿ ಅನುಸಾರ ಜೈಲು ಆಧೀಕ್ಷಕರು ನೀಡುವ ಕೆಲಸಗಳನ್ನು ಅವರು ಮಾಡಿಕೊಡಬೇಕಾಗುತ್ತದೆ. ಸಜಾಬಂಧಿ ಖೈದಿಗಳ ಬ್ಯಾರಕ್ ಗೆ ಪ್ರಜ್ವಲ್ ಅವರನ್ನು ಶಿಫ್ಟ್ ಮಾಡಲಾಗಿದೆ.

ಜೀವಾವಧಿ ಶಿಕ್ಷೆಯ ಶಾಕ್‌ನಲ್ಲಿರೋ ಪ್ರಜ್ವಲ್‌ ನಿನ್ನೆ ರಾತ್ರಿಯಿಡೀ ನಿದ್ರೆ ಮಾಡಿಲ್ಲ. ಇಂದು ಬೆಳಗ್ಗೆ ಎದ್ದು ನಿತ್ಯಕರ್ಮ ಮುಗಿಸಿ ಸುಮ್ಮನೆ ಕುಳಿತುಕೊಂಡಿದ್ದಾರೆ. ಜೈಲುಸಿಬ್ಬಂದಿ ಅವರಿಗೆ ಅವಲಕ್ಕಿ ಉಪ್ಪಿಟ್ಟು ತಿಂಡಿ ನೀಡಿದ್ದಾರೆ ಎನ್ನಲಾಗಿದೆ.

ಪ್ರಜ್ವಲ್‌ ಇನ್ನು ಮುಂದೆ ಜೈಲಿನಲ್ಲಿ ದಿನಕ್ಕೆ 8 ಗಂಟೆಗಳ ಕಾಲ ಕಡ್ಡಾಯವಾಗಿ ಕೆಲಸ ಮಾಡಬೇಕು. ಪರಪ್ಪನ ಅಗ್ರಹಾರ ಜೈಲಿನ ಸಜಾಬಂಧಿ ಖೈದಿಗಳ ನಿಯಮಗಳನ್ನು ಚಾಚು ತಪ್ಪದೆ ಪಾಲಿಸಬೇಕು. ಬೇಕರಿ, ಗಾರ್ಡನ್, ಹೈನುಗಾರಿಕೆ, ತರಕಾರಿ ಬೆಳೆಯುವುದು, ಕರಕುಶಲ ವಸ್ತು, ಮರಗೆಲಸ ಸೇರಿ ಇವುಗಳ ಪೈಕಿ ಯಾವುದಾದರೂ ಒಂದನ್ನು ಅವರು ಆಯ್ಕೆ ಮಾಡಿಕೊಳ್ಳಬೇಕು.
ಅವರು ಆಯ್ಕೆ ಮಾಡಿಕೊಳ್ಳುವ ಕೆಲಸಕ್ಕೆ ತಕ್ಕಂತೆ ಸಂಬಳ ಕೂಡಾ ಪಾವತಿ ಮಾಡಲಾಗುತ್ತದೆ. ಮೊದಲ ಒಂದು ವರ್ಷ ಕೌಶಲ್ಯ ರಹಿತ ದಿನಕ್ಕೆ 524 ರೂ. ಸಂಬಳ ನೀಡಲಾಗುತ್ತದೆ. ನಂತರ ಅರೆ ಕೌಶಲ್ಯ ಮಟ್ಟಕ್ಕೆ ಏರಿಸಲಾಗುತ್ತದೆ. ಬಳಿಕ ಅನುಭವದ ಆಧಾರದ ಮೇಲೆ ನುರಿತ ವರ್ಗಕ್ಕೆ ಬಡ್ತಿ ನೀಡಲಾಗುತ್ತದೆ. ಹೀಗೆ ಪ್ರಜ್ವಲ್‌ ಅವರ ಜೀವನಶೈಲಿ ಎಲ್ಲವೂ ಬದಲಾಗಲಿದೆ.

ಇನ್ನು ಜೀವಾವಧಿ ಶಿಕ್ಷೆಗೆ ಗುರಿಯಾಗಿರೋ ಪ್ರಜ್ವಲ್‌ಗೆ 11ಲಕ್ಷದ 60ಸಾವಿರ ರೂಪಾಯಿ ದಂಡ ವಿಧಿಸಿದೆ. ಈ ದಂಡದಲ್ಲಿ 11 ಲಕ್ಷದ 25 ಸಾವಿರ ರೂ. ಸಂತ್ರಸ್ತೆಗೆ ನೀಡುವಂತೆ ಆದೇಶ ಹೊರಡಿಸಲಾಗಿದೆ. ಓರ್ವ ಮಹಿಳೆ ಮೇಲೆ ಪದೇ ಪದೇ ಅತ್ಯಾಚಾರ ಗಂಭೀರ ಅಪರಾಧವೆಂದು ಪರಿಗಣಿಸಲಾಗಿದ್ದು, ಕೋರ್ಟ್ ಜೀವನ ಪರ್ಯಂತ ಸೆರೆವಾಸದ ಶಿಕ್ಷೆ ವಿಧಿಸಿದೆ. ಇಲ್ಲಿಯವರೆಗೆ ಪ್ರಜ್ವಲ್‌ 14 ತಿಂಗಳು ಜೈಲಿನಲ್ಲಿದ್ದುದು ಈ ಶಿಕ್ಷೆಗೆ ಒಳಪಡುವುದಿಲ್ಲ.

ತಾನೇ ಮಾಡಿದ ವಿಡಿಯೋಗಳಿಂದ ತಗಲಾಕಿಕೊಂಡ ಪ್ರಜ್ವಲ್‌!
ಪ್ರಜ್ವಲ್‌ ರೇವಣ್ಣ ನಡೆಸಿದ ಅತ್ಯಾಚಾರ ಪ್ರಕರಣ ಸಂಬಂಧ ತನಿಖೆ ನಡೆಸಿದ ಎಸ್‌ಐಟಿಗೆ ಪ್ರಬಲ ಸಾಕ್ಷಿ ದೊರೆತಿದ್ದೇ ಆತ ಮಾಡಿದ್ದ ವಿಡಿಯೋಗಳಿಂದ ಎಂದು ತಿಳಿದು ಬಂದಿದೆ. ಪ್ರಜ್ವಲ್‌ ಮನೆ ಕೆಲಸದಾಕೆಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ಸಂದರ್ಭ ಆತ ಮಾಡಿಕೊಂಡಿದ್ದ ವಿಡಿಯೋದಲ್ಲಿ ಆತನ ಗುಪ್ತಾಂಗವೂ ಕಂಡುಬಂದಿತ್ತು.
ಗುಪ್ತಾಂಗದ ಗಾತ್ರ, ಆಕಾರ, ಬಣ್ಣ ಹೀಗೆ ವಿಡಿಯೋದಲ್ಲಿ ಸೆರೆಯಾಗಿದ್ದ ಎಲ್ಲಾ ಅಂಶಗಳೂ ಪ್ರಜ್ವಲ್‌ನ ಶಿಶ್ನಕ್ಕೆ ಹೋಲಿಕೆಯಾಗುತ್ತಿತ್ತು. ಈ ಅಂಶದಿಂದಲೇ ಪ್ರಜ್ವಲ್‌ ದುಷ್ಕೃತ್ಯ ಹಾಗೂ ನೈಜತೆ ಹೊರಹೊಮ್ಮಿದೆ. ಈ ಅಂಶವನ್ನು ತೀರ್ಪಿನ 345ನೇ ಪುಟದಿಂದ ವಿಸ್ಕೃತವಾಗಿ ವಿವರಿಸಲಾಗಿದೆ.


Spread the love
Share:

administrator

Leave a Reply

Your email address will not be published. Required fields are marked *